ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಉದ್ಯೋಗ ಖಾತ್ರಿ ಕುರಿತ “ವಿಶೇಷ ಗ್ರಾಮ ಸಭೆ”

ವಿಜಯನಗರ ಜಿಲ್ಲೆ ಕೊಟ್ಟೂರು ಹೊಸ ತಾಲುಕು ಅಂಬಳಿ ಗ್ರಾಮ ಪಂಚಾಯತಿಯ ಉದ್ಯೋಗ ಖಾತ್ರಿಯ ವಿಷಯಕ್ಕೆ ಸಂಬಂಧಿಸಿದಂತೆ “ವಿಶೇಷ ಗ್ರಾಮ ಸಭೆ”ಯನ್ನು 12/01/2024 ರ ಶುಕ್ರವಾರ ನಡೆಸಲಾಯಿತು.ಈ ಹಿಂದೆ ನಿಗಧಿಪಡಿಸಿದ ದಿನಾಂಕದಂದು ಗ್ರಾಮಸಭೆಗೆ ಹಲವಾರು ಇಲಾಖೆಯ ಅಧಿಕಾರಿಗಳು ಗೈರು ಆದ ಕಾರಣ,ಈ ಗ್ರಾಮ ಸಭೆಯನ್ನು,ಅಂದು ಮುಂದೂಡಲಾಗಿತ್ತು.ಇದನ್ನು ಹಲವಾರು ಮಾಧ್ಯಮ ಮಿತ್ರರು,ಹಲವು ಪತ್ರಿಕೆಗಳಲ್ಲಿ ಗೈರಾದ ಅಧಿಕಾರಿಗಳ ಬಗ್ಗೆ,ಪ್ರಕಟಿಸಿದ ಕಾರಣ,ಹಲವು ಮಾಧ್ಯಮ ಮಿತ್ರರ ಫಲಶೃತಿಯ ಫಲವಾಗಿ ಇಂದಿನ ಗ್ರಾಮ ಸಭೆಗೆ ಹಲವಾರು ಇಲಾಖೆಯ ಅಧಿಕಾರಿಗಳು ಭಾಗಿಯಾದರು,ಆದಕಾರಣ ಹಿಂದಿನ ಗ್ರಾಮ ಸಭೆಗೆ ಗೈರಾದ ಅಧಿಕಾರಿಗಳ ಬಗ್ಗೆ,ಪ್ರಕಟಿಸಿದ ಎಲ್ಲಾ ಮಾಧ್ಯಮ ಮಿತ್ರರರಿಗೆ ನಮ್ಮ ಊರಿನ ನಾಗರಿಕರ,ಮುಖಂಡರು,ಗ್ರಾಮ ಪಂಚಾಯತಿಯ ಸದಸ್ಯರು,ಸಿಬ್ಬಂದಿಗಳ,ಊರಿನ ಪರವಾಗಿ ಒಂದು ‘ಸಲಾಂ’ ಹೇಳಿ ಬಿಡೋಣ!

ಈ ಗ್ರಾಮ ಸಭೆಯಲ್ಲಿ ಹಲವರು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು ಈ ಸಭೆಯನ್ನು ಗ್ರಾಮ ಪಂಚಾಯತಿಯ ಪಿಡಿಓ ರವರಾದ ದೇವೇಶರವರು ಪ್ರಾಸ್ತಾವಿಕ ನುಡಿಯನ್ನು ಹೇಳುವ ಮೂಲಕ ಸಭೆ ಮುಂದುವರೆಯಲು ಅನುವು ಮಾಡಿ ಕೊಟ್ಟರು ಜಿಲ್ಲಾ ಪಂಚಾಯತ್ ಉಪವಿಭಾಗದ ಸಹಾಯಕ ಕಾಯ೯ನಿವಾ೯ಹಕ ಅಧಿಕಾರಿಗಳಾದ ಮಲ್ಲಿಕಾರ್ಜುನ ಕೂಡ್ಲಿಗಿ ಇವರು ಗ್ರಾಮ ಪಂಚಾಯತಿಯ ನೋಡೆಲ್ ಅಧಿಕಾರಿಯಾಗಿ ಆಗಮಿಸಿದ್ದು,ಈ ಸಭೆಯ ಚಚಾ೯ವಿಷಯದ ಬಗ್ಗೆ, ಸಾವ೯ಜನಿಕರಿಗೆ ವಿವರವಾಗಿ ತಿಳಿಸಿ ಹೇಳಿದರು‌.

ನಂತರ ಹಲವಾರು ಇಲಾಖೆಯಿಂದ ಈ ಸಭೆಗೆ ಆಗಮಿಸಿದ ಅಧಿಕಾರಿಗಳಿಗೂ,ಸಾವ೯ಜನಿಕರಿಗೂ, ಆಯ ಇಲಾಖೆಗೆ ಸಂಬಂಧಪಟ್ಟಂತೆ,ಸಾವ೯ಜನಿಕರಿಗೆ ಇರುವ ಸರಕಾರದ ಸೌಲತ್ತುಗಳ ಬಗ್ಗೆ,ಈ ಹಿಂದೆ ಆಗಿರುವ ಹಲವು ನ್ಯೂನತೆಯ ಬಗ್ಗೆ,ವಿತ್ತಂಡವಾಗಿ ಚಚೆ೯ಯ ಮಾಡುವ ಮೂಲಕ ಸಭೆಯನ್ನು ಯಶಸ್ವಿಗೊಳಿಸಿದರು ಈ ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಹೊಳಲಮ್ಮ ಹನುಮಂತಪ್ಪನವರು ವಹಿಸಿದ್ದರು ಗ್ರಾಮ ಪಂಚಾಯತಿಯ ಉಪಾಧ್ಯಕ್ಷರಾದ ಟಿ.ಕೊಟ್ರಮ್ಮ ಮಾರುತಿಯವರು,ಸದಸ್ಯರಾದ ಸಣ್ಣ ಬಸವರಾಜ,ಡಿ.ನಾಗರಾಜ ಉಪಸ್ಥಿತರಿರದ್ದರು.
ಈ ಸಂದರ್ಭದಲ್ಲಿ ಸರಕಾರಿ ಸೌಲಭ್ಯಗಳ ಬಗ್ಗೆ ಅಧಿಕಾರಿಗಳ ಹತ್ತಿರ ಚಚಿ೯ಸಿದವರು,ಪ್ರಥಮ ದಜೆ೯ಯ ಗುತ್ತಿಗೆದಾರರಾದ ವಿ.ಬಸವರಾಜ,ಎಂ.ಸೋಮನಗೌಡ,ಕೆ ಅಶೋಕ,ಟಿ ಬಸವರಾಜ,ಬಿ ಕಲ್ಲನಗೌಡ,ಕುಡಿತ್ತಿನಮಗ್ಗಿ ಅಜಿತ್,ಎಚ್ ಪಿ ಗೊಣೇಪ್ಪ ಇತರರು.
ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ನಾಗಾಜು೯ನ, ಗ್ರಾಮೀಣ ಕುಡಿಯುವ ನೀರು ಇಲಾಖೆಯ ಇಂಜಿನೀಯರ್ ನರೇಶ,ಆರೋಗ್ಯ ಇಲಾಖೆಯ ವಿರೇಶ,ಸರಸ್ವತಿ,ಆಶಾ ಕಾಯ೯ಕತ೯ರು,ಸಿಡಿಪಿಓ, ಇಲಾಖೆಯ ಬಸಮ್ಮ,ಅಂಗನವಾಡಿಯ ಕಾಯ೯ಕತ೯ರು,ತೋಟಗಾರಿಕಾ,ಕೆಇಬಿ ಇಲಾಖೆ ಕೋಗಳಿ,ಶಿಕ್ಷಣ ಇಲಾಖೆಯ ಶಿಕ್ಷಕರು,ಸಿಬ್ಬಂದಿಗಳು, ಸಾವ೯ಜನಿಕರು,ಇತರೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ವರದಿ:ವೈ.ಮಹೇಶ್ ಕುಮಾರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ