ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಹಳ್ಳಿಗಳ ದೇಶ ಭಾರತ

ಭಾರತ ಹಳ್ಳಿಗಳ ನಾಡು,ಹಳ್ಳಿಗಳಿಂದ ಕೂಡಿದ ಸುಂದರ, ಸಂಪತ್ ಭರಿತ ಸಮೃದ್ಧಿ ದೇಶ.
ಈ ದೇಶದ ಜನಸಂಖ್ಯೆಯು 80.13% ಭಾಗ ಗ್ರಾಮಗಳಲ್ಲಿ ನೆಲೆಸಿದ್ದಾರೆ.
ಇದಕ್ಕೆಂದೇ ಭಾರತವನ್ನು ಹಳ್ಳಿಗಳ ತವರೂರು ಎಂದೇ ವರ್ಣಿಸಲಾಗುತ್ತದೆ.
ಭಾರತದ ಗ್ರಾಮ ವ್ಯಾಪ್ತಿಯಲ್ಲಿ ಜಾತಿ ಪದ್ಧತಿ, ಕುಟುಂಬ ವ್ಯವಸ್ಥೆಗಳಷ್ಟೇ ಮಹತ್ವ ಇದೆ ಗ್ರಾಮಗಳಲ್ಲಿ ಇಂದಿಗೂ ಪರಸ್ಪರ ಸಹಕಾರ ಹಾಗೂ ಸ್ವಯಂಪೂರ್ಣತೆಯ ಪಾಠವನ್ನು ಕಲಿಸುತ್ತಿವೆ.
ಅಂದಹಾಗೆ ಹಳ್ಳಿಯವರ ಜೀವನವೆಂದರೆ ಬಲು ಸೊಗಸು,ನೀಲಿ ಆಕಾಶ,ಆಗಸದ ತುಂಬೆಲ್ಲ ನಲಿಯುತ್ತ ಉಲಿಯುತ್ತ ಹಾರುವ ಹಕ್ಕಿಗಳು,ಎಲ್ಲೆಂದರಲ್ಲಿ ಕಾಣುವ ಕೆರೆ ತೊರೆಗಳು,ಹಸುರಿನಿಂದ ಕಂಗೊಳಿಸುವ ಬೆಟ್ಟ ಗುಡ್ಡಗಳು,ಜೀವಕ್ಕೆ ಜೀವ ಕೊಡುವ ನೆರೆಹೊರೆಯವರು.ಕಣ್ಣಾಡಿಸಿದಲ್ಲೆಲ್ಲಾ ಹಸಿರು, ಸೂಕ್ಷ್ಮವಾಗಿ ಆಲಿಸಿದಾಗ ಕೇಳುವ ನದಿ ಹರಿಯುವ ಸದ್ದು,ದೂರದಲ್ಲೆಲ್ಲೋ ಇರೋ ಬೆಟ್ಟ ಕಾಣುವಷ್ಟು ಸ್ವತ್ಛಂದ ಆಕಾಶ,ಹಕ್ಕಿಗಳ ಕಲರವ,ಕೆಲವೊಮ್ಮೆ ರಾತ್ರಿಯಾದಾಗ ಆಕಾಶವಾಣಿಯಂತೆ ಕೇಳುವ ಗೂಬೆಯ ಕೂಗು,ಆ ಶಬ್ದಕ್ಕೆ ತಾಳ ಹಾಕುವಂತೆ ಕೇಳುವ ಪುಟ್ಟ ಹುಳದ ದನಿ,ಕತ್ತಲಾದಾಗಲೆಲ್ಲಾ ಮಿಂಚುವ ಮಿಂಚು ಹುಳಗಳು, ಮಳೆ ಮುನ್ಸೂಚನೆ ನೀಡುವ ಹಕ್ಕಿಯ ಕೂಗು,ದಪ್ಪ ಕಂಬಳಿಯಂತೆ ಆವರಿಸುವ ಕಾರ್ಮೋಡ,ಮಳೆ ಬಂದಾಗ ಪಸರಿಸುವ ಮಣ್ಣಿನ ಘಮ,ಹೂಗಳ ಪರಿಮಳ ಬೆರೆತು ಬೀಸುವ ತಂಪುಗಾಳಿ,ಒಂದೇ ಸಮನೆ ಸುರಿಯುವ ಮಳೆ, ಇವುಗಳ ನಡುವೆ ತನಗೇನು ತಿಳಿಯದೆ ಗದ್ದೆ ಕಾಯುವ ಬೆದರುಗೊಂಬೆ ಒಂದೇ ಎರಡೇ ವರ್ಣಿಸುತ್ತಾ ಹೋದರೆ ಪುಟಗಳೆ ಸಾಲದು.ಪಟ್ಟಣಗಳಿಗೆ ಹೋಲಿಸಿದರೆ ಹಳ್ಳಿಯಲ್ಲಿ ತುಸು ನೆಮ್ಮದಿಯ ಜೀವನ ಕಾಣಬಹುದು ರೈತನ ಬದುಕು ಮತ್ತು ಸಂಪಾದನೆ ಸಂಪೂರ್ಣವಾಗಿ ಪ್ರಕೃತಿ ನಿಯಮಕ್ಕೆ ಬದ್ಧವಾಗಿರುತ್ತೆ. ಬೆಳಗ್ಗೆ ಎದ್ದಾಗ ಕೇಳುವ ಕೋಳಿಯ ಕೂಗಿನ ಸುಪ್ರಭಾತದಿಂದ ಹಿಡಿದು ಹಳ್ಳಿಯ ಬದುಕಿನಲ್ಲಿ ಎಲ್ಲಾ ಕೆಲಸಗಳು ಸುತ್ತ ಮುತ್ತಲಿನ ಪರಿಸರಕ್ಕೆ ಅವಲಂಬಿತವಾಗಿರುತ್ತೆ ಪಟ್ಟಣಕ್ಕಿಂತಲೂ ಹಲವು ಪಟ್ಟು ಹೆಚ್ಚಿನ ಶುದ್ಧ ಗಾಳಿ,ತಾಜಾ ತರಕಾರಿ,ಒಳ್ಳೆಯ ಮನಸ್ಸುಗಳು ಸಿಗುವುದಂತೂ ಸತ್ಯ ಹಬ್ಬ ಹರಿದಿನಗಳನ್ನು ವಿಶೇಷವಾಗಿ ಆಚರಿಸುವ ರೂಢಿ ಇಂದಿಗೂ ಜೀವಂತವಾಗಿವೆ.ಮನೆಗಳ ಮುಂದೆ ರಂಗೋಲಿ,ಬಾಗಿಲಲ್ಲಿ ತೋರಣಗಳು ಈಗಲೂ ರಾರಾಜಿಸುತ್ತವೆ ಜಾನಪದ ಕಲೆಗಳಿಗೆ ಹಳ್ಳಿಯೇ ತವರೂರು ಒಗಟುಗಳು,ಅನುಭವದಿಂದ ಹೊರಹೊಮ್ಮಿದ ಗಾದೆಗಳು ಜೀವನದ ಪಥದಲ್ಲಿ ಸಾಗಲು ಮಾರ್ಗದರ್ಶಿಗಳು ಇನ್ನು
ಹಳ್ಳಿಗರಲ್ಲಿಯ ವಿಶೇಷ ಗುಣವೆಂದರೆ ಸೌಹಾರ್ದತೆಯ ಒಗ್ಗಟ್ಟು.

ಗ್ರಾಮಗಳ ಮಹತ್ವ:
ಗ್ರಾಮದ ಉದಯ ಸಾಮಾಜಿಕ ವಿಕಾಸದ ಒಂದು ಮಹತ್ವದ ಹಂತ ಅನಾಗರಿಕ ಮಾನವರು ನಾಗರಿಕತೆಯೆಡೆಗೆ ಮುನ್ನೆಡೆದ ಹೆಜ್ಜೆ ಗುರುತ್ತನೇ ಗುರುತಿಸುವುದೇ ಈ ಹಳ್ಳಿಗಳು.ಈ ಗ್ರಾಮಗಳ ಸಂಸ್ಕೃತಿಯ ವೃದ್ಧಿಯೂ ಘೋಷಣೆಯೂ ಗ್ರಾಮವ್ಯವಸ್ಥೆಯಿಂದ ಸಾಧ್ಯವಾಯಿತೆನ್ನಬಹುದು. ಭಾರತ ದೇಶದ ಸಂಸ್ಕೃತಿ ಗ್ರಾಮಗಳಲ್ಲಿ ಹೆಚ್ಚಾಗಿ ಕಾಣಬಹುದು.
ಹಳೆಯದರ ಬಗ್ಗೆ ಇರುವ ಭಕ್ತಿಯ ಮನೋಭಾವ ಕಾಣುವುದು ನಿಜವಾದರೂ ಗ್ರಾಮಗಳು ಭಾರತೀಯ ಸಮಾಜದ ಬೆನ್ನೆಲುಬು ಎಂಬುದನ್ನು ಅಲ್ಲಗೆಳೆಯಲಾಗದು.
ಗ್ರಾಮಗಳು ಸಾಮಾನ್ಯವಾಗಿ 100 ಕುಟುಂಬಗಳಿಂದ 1,000 ಕುಟುಂಬಗಳನ್ನು ಒಳಗೊಂಡಿರುತ್ತವೆ. ಒಮ್ಮೊಮ್ಮೆ ಕರ್ನಾಟಕದ ಮಲೆನಾಡಿನಲ್ಲಿರುವಂತೆ ಒಂದೇ ಮನೆಯ ಹಳ್ಳಿಗಳೂ ನಾಲ್ಕೆಂಟು ಕುಟುಂಬಗಳು ಒತ್ತೊತ್ತಿಗೆ ಇರುವ ಆದಿವಾಸಿ ಗ್ರಾಮಗಳೂ ನೋಡಬಹುದು ಇನ್ನು ಒಂದೇ ಜಾತಿಗೆ ಅಥವಾ ವಂಶಕ್ಕೆ ಸೇರಿದ ಜನರೇ ತುಂಬಿರುವ ಅಥವಾ ಒಂದೇ ಜಾತಿಗಳೂ ಕಸಬುಗಳೂ ಇರುವ ನೆಲೆಗಳು ಇರುತ್ತೇವೆ. ಕೆಲವು ಕಡೆ ಸಾಮಾನ್ಯವಾಗಿ ಮನೆಗಳು ಹೊಲದ ಮಧ್ಯದಲ್ಲಿ ಇರುತ್ತಿದ್ದವು ಹೊಸ ಗ್ರಾಮಗಳನ್ನು ಇತ್ತಿಚೆಗೆ ಅನುಮತಿ ಪಡೆದು ಯೋಜನಾಬದ್ಧವಾಗಿ ಕಟ್ಟಲಾಗುತ್ತಿದೆ.

ಹಾಗೆಯೇ ನೋಡಿದರೆ ಮಹಾರಾಷ್ಟ್ರದಲ್ಲಿ ಮುಖ್ಯವಾಗಿ ಮೂರು ಪ್ರಕಾರದ ಹಳ್ಳಿಗಳಿವೆ ಎಂದು ಇರಾವತಿ ಕರ್ವೆ ತಿಳಿಸಿದ್ದಾರೆ.ದಕ್ಷಿಣ ಮೈದಾನದ ಹೊಲಗಳ ಮಧ್ಯೆ ಕೇಂದ್ರಿಕೃತವಾದ ಮನೆಗಳಿರುವ ಹಳ್ಳಿಗಳಿವೆ ಕೊಂಕಣದ ಗ್ರಾಮಗಳಲ್ಲಿ ರಸ್ತೆಯ ಇಕ್ಕೆಲದಲ್ಲಿ ಮನೆಗಳಿದ್ದು ಅವುಗಳಿಗೆ ಹೊಂದಿದಂತೆ ಹಿಂಬದಿಯಲ್ಲಿ ತೆಂಗು ಅಡಕೆ ತೋಟಗಳಿವೆ ಬೆಟ್ಟ ಪ್ರದೇಶದ ಗ್ರಾಮಗಳಲ್ಲಿ ವಸತಿಗಳು ಚದರಿದಂತೆ ಇದ್ದು ಸುತ್ತ ಹೊಲಗಳಿವೆ ಮೊನ್ನೆ ಮೊನ್ನೆಯವರೆಗೆ ಅಸೃಶ್ಯರೆನಿಸಿಕೊಳ್ಳುತ್ತಿದ್ದ ಜನ ಊರ ಗಡಿಯಿಂದಾಚೆ ಇರುತ್ತಿದ್ದರು ಬೇರೆ ಬೇರೆ ಜಾತಿಗಳ ವಸತಿಗೆ ಬೇರೆ ಬೇರೆ ಕೇರಿಗಳೂ ದೇವಾಲಯಗಳೂ ಇರುವುದು ವಾಡಿಕೆ.
ಒಬ್ಬರಿಗೊಬ್ಬರು ಸಹಾಯ ಸಹಕಾರ ಗುಣ, ಹೊಂದಿಕೊಂಡು ಬಾಳುವ ಸದ್ಗುಣ,ತಾಳ್ಮೆ,ಅವಿಭಕ್ತ ಕುಟುಂಬಗಳು,ಜಾನಪದ ಕ್ರೀಡೆಗಳಾದ ಕುಂಟೆಬಿಲ್ಲೆ, ಚಿನ್ನಿದಾಂಡು,ಲಗೋರಿ ಮರಕೋತಿಗಳು,ಅಜ್ಜ-ಅಜ್ಜಿ, ಮಾವ-ಅತ್ತೆ,ಅಕ್ಕ-ಭಾವ,ಅಣ್ಣ ತಮ್ಮ ತಂಗಿ ಚಿಕ್ಕಪ್ಪ ದೊಡ್ಡಪ್ಪ ಹೀಗೆ ಸಂಬಂಧಗಳ ಸವಿ ಕೂಡಾ ಹಳ್ಳಿ ಜೀವನದ ವಿಶೇಷತೆ.ಹಾಗೆಯೇ ಸಂಜೆ ಕೆಲಸ ಮುಗಿಸಿ ಅಕ್ಕಪಕ್ಕ ಮನೆಯ ಹೆಂಗಸರು ಒಟ್ಟಿಗೆ ಸೇರಿ ಹರಟೆ ಹೊಡೆಯುತ್ತ ಇದ್ದರೆ ಸಂತೋಷಕ್ಕೆ ಪಾರವೇ ಇರುವುದಿಲ್ಲ.
ಇನ್ನು ಒಂದು ಕಡೆ ಗಂಡಸರು ತಮ್ಮ ಕೆಲಸ ಕಾರ್ಯಗಳ ಒತ್ತಡದಿಂದ ದೂರ ಸರಿದು,ಜಾನಪದ ನೃತ್ಯಗಳಲ್ಲಿ ತೊಡಗುವುದು ಸಾಮಾನ್ಯ ಗದ್ದೆ ತೋಟಗಲ್ಲಿ ಮೈಬಗ್ಗಿಸಿ ಬೆವರು ಹರಿಸಿ ಹಳ್ಳಿಗರು ದುಡಿಯುವ ಪದ್ದತಿ ರೋಮಾಂಚನ ಉಂಟು ಮಾಡುತ್ತದೆ.ವೈಜ್ಞಾನಿಕ ಆಚರಣೆ,ಆಡಂಬರವಿಲ್ಲದ ಜೀವನ, ಸಾಕು ಪ್ರಾಣಿಗಳ ಒಡನಾಟ, ಹೀಗೆ ಹಳ್ಳಿಗಳರ
ಹತ್ತು ಹಲವಾರು ವಿಷಯಗಳು ವರ್ಣಿಸಲು ಅಸಾಧ್ಯ ಎಂದರೆ ಖಂಡಿತವಾಗಿಯೂ ತಪ್ಪಾಗಲಾರದು.

ಹಳ್ಳಿಗಳ ನರಕಯಾತನೆ:
ಇಷ್ಟೆಲ್ಲ ವೈವಿಧ್ಯಮಯಗಳಿಂದ ಕೂಡಿದ ಹಳ್ಳಿಗಳ ಜೀವನ ಇಂದು ಆಧುನಿಕತೆಯ ಭರಾಟೆಯಲ್ಲಿ ಎಲ್ಲೋ ಒಂದು ಕಡೆ ನರಕಯಾತನೆ ಅನುಭವಿಸುತ್ತಿದ್ದಾರೆ ಎನಿಸುತ್ತಿದೆ.
ಯಾಕಂದರೆ ಮೊದಲನೇದಾಗಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ಅವರಿಗೆ ಸಿಗಬೇಕಾದ ಸೌಲಭ್ಯಗಳು ಮರುಚಿಕೆಯಾಗುತ್ತಿವೆ ವಿಶೇಷವಾಗಿ ಹೇಳಬೇಕೆಂದರೆ ಕಾಲುವೆ ಸಮಸ್ಯೆ,ರಸ್ತೆ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ,ಆರೋಗ್ಯ ಸಮಸ್ಯೆ, ಶಿಕ್ಷಣ ಸಮಸ್ಯೆಗಳು ಬಹಳಷ್ಟು ಅವರನ್ನು ಕಾಡುತ್ತಿವೆ. ಹಳ್ಳಿಯಲ್ಲಿ ಬದುಕುವ ಬಗೆಗೆ ರೊಮ್ಯಾಂಟಿಕ್ ಆದ ಮಾತುಗಳೂ ಕೇಳಿಬರುತ್ತಿರುತ್ತವೆ ಆದರೆ ಪೂರಕವಾದ ವಾತಾವರಣ ಇಲ್ಲದಿರುವುದು.ಇನ್ನು ಯಾವುದೇ ಗ್ರಾಮ ಹೊಕ್ಕರೂ ಗಬ್ಬು ನಾರುವ, ವಿಲೇವಾರಿಯಾಗದ ಕಸದ ರಾಶಿ ಅಸಹ್ಯ ಹುಟ್ಟಿಸುವಷ್ಟಿರುತ್ತದೆ ಹಾಗೆ ಹಳ್ಳಿಗಳ ಸುತ್ತುಮುತ್ತ ನೋಡಿದರೆ ಕಸದ ರಾಶಿಗಳು ಕಾಣುತ್ತೇವೆ ಈ ವಿಷಯಗಳ ಬಗೆಗೆ ಚಿಂತನ,ಮಂಥನ ಅಗತ್ಯವಾಗಿದೆ.
ಅದಕ್ಕಾಗಿ ಹಳ್ಳಿಗಳಲ್ಲಿ ನಿರಂತರವಾಗಿ ಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದೆ.ಪ್ಲಾಸ್ಟಿಕ್ ನಿಷೇಧ ಮಾಡುವಂತೆ ಅಭಿಯಾನ ಹಮ್ಮಿಕೊಂಡು. ಗ್ರಾಮಸ್ಥರಲ್ಲಿ ಅರಿವು ಮೂಡಿಸುವುದು ಅಗತ್ಯ ಇದೆ.
ಶಾಲೆ,ಕಾಲೇಜುಗಳಿಗೆ ಭೇಟಿ ನೀಡಿ ಮಕ್ಕಳೊಡನೆ ಒಡನಾಡಿ ಪರಿಸರ,ಪ್ಲಾಸ್ಟಿಕ್ ಅಪಾಯ, ಪರ್ಯಾಯಗಳ ಬಗೆಗೆ ತಿಳಿಸಿ ಹೇಳುವುದು ಸಹ ಅವಶ್ಯಕತೆ ಇದೆ.
ಇನ್ನು ಶಿಕ್ಷಣ,ರಸ್ತೆ,ನೀರು,ಆರೋಗ್ಯದ ಬಗ್ಗೆ ಸಂಬಂಧಪಟ್ಟ ಪಂಚಾಯತ್ ಹಾಗೂ ಜಿಲ್ಲಾಡಳಿತ ಸೂಕ್ತ ವ್ಯವಸ್ಥೆ ಮಾಡಬೇಕು ಜೊತೆಗೆ ಒಂದು ಹಳ್ಳಿಯ ಜನರು ಪರಸ್ಪರ ಪ್ರೀತಿ ಮತ್ತು ಸಹಕಾರದಿಂದ ಹೊಂದಾಣಿಕೆ ಮಾಡಿಕೊಳ್ಳುವಂತಹ ಆಡಳಿತ ವ್ಯವಸ್ಥೆಯೂ ಇರಬೇಕು.
ಅಂದಾಗಲೇ ಮಾತ್ರ ಹಳ್ಳಿ ಜನರು ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ ಹಾಗೆಯೇ ಸಂಬಂಧಪಟ್ಟ ಸರ್ಕಾರಗಳು ಹಳ್ಳಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಹಳ್ಳಿಗರ ಜೀವನಕ್ಕೆ ನೆಮ್ಮದಿ ಕೊಡಿಸುವ ಕೆಲಸ ಮಾಡಬೇಕಾಗಿದೆ.

ಕೊನೆಯ ನುಡಿ:
ಭಾರತ ಹಳ್ಳಿಗಳ ದೇಶ, ಹಳ್ಳಿಗಳು ಅಭಿವೃದ್ಧಿಯಾಗದ ಹೊರತು ದೇಶದ ಪ್ರಗತಿಯಾಗದು.ಮೂಲ ಸೌಕರ್ಯಗಳಿಗೆ ಮತ್ತು ಶಿಕ್ಷಣಕ್ಕೆ ಒತ್ತು ನೀಡಿದಾಗ ಮಾತ್ರ ಹಳ್ಳಿಗಳು ಅಭಿವೃದ್ಧಿ ಹೊಂದಬಹುದು.ಅಂದಾಗಲೇ ಮಾತ್ರ ಭಾರತಕ್ಕೆ ವಿಶ್ವ ಮಟ್ಟದಲ್ಲಿ ಒಳ್ಳೆಯ ಹೆಸರು ಬರುತ್ತದೆ.

-ಸಂಗಮೇಶ ಎನ್ ಜವಾದಿ
ಬರಹಗಾರರು,ಚಿಂತಕರು,ಹೋರಾಟಗಾರರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ