ಇದು ಉತ್ತರ ಕರ್ನಾಟಕದ ಅತಿ ದೊಡ್ಡ ಜಾತ್ರೆಯಾದ ಸಂಕ್ರಾಂತಿ ಜಾತ್ರೆ, ವಿಜಯಪುರ ಜಾತ್ರೆ, ಸಿದ್ದರಾಮೇಶ್ವರ ಜಾತ್ರೆ ಹೆಸರುವಾಸಿಯಾಗಿರುವ ಜಾತ್ರೆಗೆ ಲಕ್ಷ-ಲಕ್ಷ ಜನರ ದಂಡು ಹರಿದು ಬರುತ್ತಿರುತ್ತಾರೆ.ಇಲ್ಲಿ ನಡೆಯುವ ನಂದಿಧ್ವಜಗಳ ಪೂಜೆ, ಮೆರವಣಿಗೆಗೆ ಶತಮಾನಗಳ ಇತಿಹಾಸವಿದೆ.
ಇನ್ನು ನಂದಿಧ್ವಜ ಸೇವೆ ಮಾಡುವವರು ಧರಿಸುವ ಶತಮಾನಗಳಷ್ಟು ಹಳೆಯದಾದ ನಿಲುವಂಗಿಗಳ ಹಿನ್ನೆಲೆ ಬಲು ವಿಶೇಷವಾಗಿದೆ.
ಸಂಕ್ರಾಂತಿ ಜಾತ್ರೆ ಅಂದ್ರೆ ಉತ್ತರ ಕರ್ನಾಟಕದಲ್ಲಿ ಬಲು ಫೇಮಸ್. ಪ್ರತಿವರ್ಷ ಸಂಕ್ರಾಂತಿ ವೇಳೆ ವಿಜಯಪುರದಲ್ಲಿ ನಡೆಯುವ ಸೊಲ್ಲಾಪೂರ ಸಿದ್ದರಾಮೇಶ್ವರರ ಜಾತ್ರೆ ನಮ್ಮೂರ ಜಾತ್ರೆ ಅಂತಲೇ ಫೇಮಸ್
ದಿನಾಂಕ 12 ರಿಂದ ಈಗಾಗಲೇ ಸಂಕ್ರಾಂತಿ ಜಾತ್ರೆ ಶುರುವಾಗಿ ಸತತ 7 ದಿನಗಳ ಕಾಲ ನಡೆಯುತ್ತದೆ.
ನಂದಿ ಕೋಲುಗಳ ಪೂಜೆ, ಮೆರವಣಿಗೆ ಮೂಲಕ ಶುರುವಾಗುವ ಸಂಕ್ರಾಂತಿ ಜಾತ್ರೆ ಅದ್ದೂರಿಯಾಗಿ ಸಾಗುತ್ತೆ. ಸಂಕ್ರಾಂತಿ ಮುನ್ನಾದಿನ ಭೋಗಿಯಂದು ನಡೆಯುವ ನಂದಿ ಧ್ವಜಗಳ ಪೂಜೆ, ಪಡಿ ನಂದಿಕೋಲಿನ ಪೂಜೆಗೆ ಬಹಳ ಪ್ರಾಮುಖ್ಯತೆ ಇದೆ. ಸಿದ್ದೇಶ್ವರ ದೇಗುಲದ ಎದುರು 7 ನಂದಿಧ್ವಜಗಳನ್ನ ಇಟ್ಟು ಪೂಜೆ ನೆರವೇರಿಸಲಾಗುತ್ತೆ. ಬಳಿಕ ದೇಗುಲದ ಎದುರು ಸಿದ್ದರಾಮೇಶ್ವರನ ಮೂರ್ತಿಗೂ ವಿಶೇಷ ಪೂಜೆ ಸಲ್ಲುತ್ತೆ ,ಪಲ್ಲಕ್ಕಿ ಸೇವೆ ನಡೆಯುತ್ತೆ,ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ದಂಪತಿ ಸಿದ್ದರಾಮೇಶ್ವರ ದೇಗುಲಕ್ಕೆ ಆಗಮಿಸಿ ನಂದಿಕೋಲುಗಳ ಪೂಜೆ ನೆರವೇರಿಸಿದರು ಸಿದ್ದೇಶ್ವರ ಮೂರ್ತಿ ಪೂಜೆ ಬಳಿಕ ಅಕ್ಷತೆ ಕಾಳು ಹಾಕುವ ಕಾರ್ಯವು ನಡೆಯಿತು.
ಇನ್ನು ನಂದಿಕೋಲುಗಳ ಮೆರವಣಿಗೆ ಸಂಕ್ರಾಂತಿ ಜಾತ್ರೆಯ ವಿಶೇಷತೆಯಾಗಿದೆ. 7 ನಂದಿಕೋಲುಗಳ ಪೂಜೆಯ ಬಳಿಕ ನಗರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯುತ್ತದೆ. ನಂದಿಕೋಲುಗಳ ಮೆರವಣಿಗೆ ನೋಡಲು ಸಾವಿರಾರು ಭಕ್ತರು ಸೇರಿದ್ದು ವಿಶೇಷ. ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದ ನಂದಿಧ್ವಜಗಳ ಮೆರವಣಿಗೆ ನೋಡಲು ಜನರು ಬರೋದು ವಿಶೇಷ. ಇನ್ನೊಂದು ವಿಶೇಷ ಅಂದ್ರೆ ಇಲ್ಲಿ ಸಿದ್ದೇಶ್ವರಾಮೇಶ್ವರ ದೇವರ ನಂದಿಕೋಲುಗಳನ್ನ ಹಿಡಿಯುವವರು ತೊಟ್ಟುಕೊಳ್ಳುವ ಬಿಳಿ ಬಣ್ಣದ ದಿರಿಸಿಗೆ ಶತಮಾನದ ಇತಿಹಾಸವಿದೆ.
ನೂರಕ್ಕೂ ಅಧಿಕ ವರ್ಷಗಳ ಹಿಂದೆ ಸಿದ್ರಾಮೇಶ್ವರ ಭಕ್ತರು ತೊಡುತ್ತಿದ್ದ ನಿಲುವಂಗಿಯೇ ಇಂದಿಗು ಇಲ್ಲಿ ಸಾಂಸ್ಕೃತಿಕ ದಿರಿಸಾಗಿದೆ. ಒಂದೆ ಒಂದು ಆಧುನಿಕ ಕಾಲದ ಶರ್ಟ್ ಬಟನ್ ಆಗಲಿ, ಪಾಲಿಸ್ಟರ್ ಬಟ್ಟೆಯಾಗಲಿ, ಫ್ಯಾಶನಿಕ್ ಹೊಲಿಗೆಯಾಗಲಿ ಇರುವುದಿಲ್ಲ. ಹಳೆ ಕಾಲದಂತೆಯೇ ಕಸಿ (ಟ್ಯಾಗ್) ಇರುವ ನೀಲುವಂಗಿಗಳನ್ನ ಬಳಕೆ ಮಾಡಲಾಗುತ್ತೆ. ವಿಶೇಷ ಆಕರ್ಷಣೆಯಾಗಿರುವ ನಂದಿಕೋಲುಗಳನ್ನ ಹಿಡಿಯುವವರು, ಕೊಂಡೊಯ್ಯುವವರು ಧರಿಸುವ ವೇಷಭೂಷಣಗಳನ್ನ ಧರಿಸಿಯೇ ನಂದಿಧ್ವಜಗಳನ್ನ ಮುಟ್ಟುತ್ತಾರೆ. ಇದು ಸಹ ಇಲ್ಲಿನ ವಿಶೇಷ.
ಇನ್ನು ಸಿದ್ದೇಶ್ವರ ಜಾತ್ರೆಯಲ್ಲಿನ ಮತ್ತೊಂದು ವಿಶೇಷ ಅಂದ್ರೆ ನಂದಿಧ್ವಜಗಳಿಗೆ ಬಾಸಿಂಗ ಕಟ್ಟೋದು. ಹೌದು, ಮದುವೆ ಸಮಯದಲ್ಲಿ ವದ-ವರರ ಹಣೆಗೆ ಕಟ್ಟುವ ಬಾಸಿಂಗವನ್ನ ಇಲ್ಲಿಗೆ ಬರುವ ಭಕ್ತರು ನಂದಿಧ್ವಜಗಳಿಗೆ ಕಟ್ಟುತ್ತಾರೆ. ಬಾಸಿಂಗ ಕಟ್ಟುವವರಿಗೆ ದಾನವಾಗಿಯು ನೀಡ್ತಾರೆ. ಪೂಜೆ ಮಾಡಿದ ಬಾಸಿಂಗಗಳನ್ನ ಮನೆಗೆ ಕೊಂಡೊಯ್ಯುವುದು ಇದೆ. ಇದರ ಹಿನ್ನೆಲೆ ಅಂದ್ರೆ ಮದುವೆಯಾಗದವರು ಇಲ್ಲಿ ನಂದಿಧ್ವಜಗಳಿಗೆ ಬಾಸಿಂಗ ಕಟ್ಟುತ್ತಾರೆ. ಹೀಗೆ ಬಾಸಿಂಗ ಕಟ್ಟಿದ್ರೆ ಮುಂದಿನ ಒಂದು ವರ್ಷದಲ್ಲಿ ಮದುವೆ ಆಗುತ್ತೆ ಎನ್ನುವ ನಂಬಿಕೆ ಇದೆ. ಇನ್ನು ಕೆಲವರು ನಂದಿಕೋಲುಗಳಿಗೆ ಕಟ್ಟಿದ ಬಾಸಿಂಗವನ್ನ ಕೊಂಡೊಯ್ದು ಪೂಜಿಸೋದು ಇದೆ. ಹೀಗೆ ಮಾಡಿದ್ರೆ ಮದುವೆಯಾಗದ ಯುವಕ, ಯುವಕರಿಗೆ ಮದುವೆಯಾಗಿ ಸಂಸಾರ ಸುಃಖವಾಗಿರುತ್ತೆ ಎನ್ನುವ ನಂಬಿಕೆಗಳಿವೆ.
12 ನೇ ಶತತಮಾನದಲ್ಲಿ ಶರಣಾಗಿದ್ದ ಸಿದ್ದರಾಮೇಶ್ವರರ ದೇಗುಲ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿದೆ, ಅದನ್ನ ಬಿಟ್ಟರೆ ಅತಿ ದೊಡ್ಡ ದೇಗುಲ ಜಾತ್ರೆ ನಡೆಯೋದೆ ವಿಜಯಪುರದಲ್ಲಿ
ಸಂಕ್ರಾಂತಿ ಸಮಯದಲ್ಲಿ ನಡೆಯುವ ಈ ಜಾತ್ರೆಯನ್ನ ಉತ್ತರ ಕರ್ನಾಟಕ ಭಾಗದಲ್ಲಿಯೇ ಅತಿದೊಡ್ಡ ಜಾತ್ರೆ ಎನ್ನಲಾಗುತ್ತೆ. ಲಕ್ಷಾಂತರ ದನಗಳು ಸೇರುವುದು ಸಹ ವಿಜಾಪೂರ ಜಾತ್ರೆಯ ಮತ್ತೊಂದು ವಿಶೇಷವಾಗಿದೆ.
ವರದಿ: ಚಂದ್ರಶಾಗೌಡ ಮಾಲಿ ಪಾಟೀಲ್