ಹೀಗೆ ಒಂದು ಅರಣ್ಯದಲ್ಲಿ ಹೋಗುವ ಮಧ್ಯದ ದಾರಿ ಉದ್ದಕ್ಕೂ ಭಯದ ವಾತಾವರಣ ಮೂಡಿತು, ಹೇಗೋ ಮಾಡಿ ಆ ದಾರಿ ದಾಟಿನೆಂದರೆ ಬಿಡದು ಮನದ ಆಸೆಯು,
ಹೋಗುವ ಮಧ್ಯ ದಾರಿ ಒಳಗೆ ಏನೇನೋ ಬಯಸಿದೆ,
ಎನ್ನ ಮನವು ದುರಾಸೆಯ ಹಾದಿಯ ಹುಡುಕುತ್ತಾ ನಡೆದೈತಲ್ಲ ಕಗ್ಗತ್ತಲವಾದ ಸಮಯದ ಒಳಗೆ ಸಾವಿರಾರು ಗಿಡಗಳ ಮರಗಳು ದಾಟಿಕೊಂಡು ನಡೆದಿದೆ ಮನ,ಕೈಗೆ ಸಿಗೋದಿಲ್ಲ ಆದ್ರೂ ಮನಸ್ಸು ಕೇಳ್ತಾ ಇಲ್ಲ ಬೇಡ ಅಂದರೂ ಕೇಳುವ ಮಾತಿಲ್ಲ, ಮುಂದೆ ಹೋದೆ ಒಂದು ಚಪ್ಪರವ ಹಾಕಿರುವ ಕುಡಿಸಲು ಕಂಡೆ,ಗುಡಿಸಿಲಲ್ಲಿ ವಯಸ್ಸಾಗಿರುವ ಮುದುಕಿಯನ್ನು ನೋಡಿದೆ, ಅಜ್ಜಿ ನಾನು ಬಂದಿದ್ದೆ ಇಲ್ಲಿಗೆ ದಾಟಿ ಹೋಗುವುದು ಹೇಗಂತ ಗೊತ್ತಾಗುತ್ತಿಲ್ಲ, ಬರುವುದು ಬಂದೆ ನೋಡಿದರೆ ಇಲ್ಲಿ ಅಷ್ಟಷ್ಟು ಕಷ್ಟಗಳು ಉಂಟು ಎಂದೆ ಅದಕ್ಕೆ ಹೇಳಿದಳು ಆ ಅಜ್ಜಿ ಮುದ್ದು ಮಾಡಿ ಕಂದ, ಮೊಮ್ಮಗನೇ ನೀನೇಕೆ ಇಷ್ಟು ಗೊಂದಲದಲ್ಲಿ ಇದಿಯಾ ಬರುವಾಗ ನಿನ್ನ ಜೊತೆ ಯಾರು ಬಂದಿಲ್ಲ ಹಾಗಂತ, ನಾನು ನಿನಗೆ ಹೇಳೋದು ಏನು ಗೊತ್ತಾ ಎಲ್ಲರೂ ತಳ್ಳುವರೇ ಕೈಹಿಡಿಬೇಕಂತ ಬರೋದಿಲ್ಲ ಗೊತ್ತಿದೆ ಎಂದಳು, ಎಲ್ಲಾನು ತಿಳಿದೆ ಎನ್ನಬೇಡ ತಿಳಿಯೋದು ಮುಂದೆ ಇನ್ನೂ ಸಾಕಷ್ಟ ಇದೆ ಅಂತ ಹೇಳಿ ಮುದುಕಿ ಅಲ್ಲಿಂದ ಮಾಯವಾದಳು, ನಾನು ಅನ್ಕೊಂಡೆ ನಾನು ಬಂದಿರುವುದು ಮಾಯದ ಜಾಲದೊಳಗೆ ಜಾರಿಕೊಂಡು ಹೋಗುವುದೇ ನನ್ನ ಬುದ್ಧಿವಂತಿಕೆ ಎಂದೆ ಮನದಲ್ಲಿ.
-ಮಹಾಂತೇಶ ಖೈನೂರ (ಯಾತನೂರ)