ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಸಂವಿಧಾನ ದಿನಾಚರಣೆಯ ಶುಭಾಶಯಗಳು

ಪ್ರಸ್ತುತ ನಮ್ಮ ಭಾರತ ಸಂವಿಧಾನ 74 ನೇ ದಿನಾಚರಣೆ ನಮ್ಮ ದೇಶದಲ್ಲಿಯೇ ಪ್ರಮುಖವಾದ ಪಾತ್ರವನ್ನು ವಹಿಸಿದೆ ಏಕೆಂದರೆ ಸರ್ವರಿಗೂ ಸಮಾನತೆಯ ಸ್ವಾತಂತ್ರ್ಯ ಕೊಟ್ಟ ದಿನ ಇದಾಗಿದೆ ಹಾಗೂ ವಿಶ್ವವೇ ನಮ್ಮ ಭಾರತವನ್ನ ನೋಡುವಂತಹ ವಿಶಾಲವಾದ ಅರ್ಥ ಮತ್ತು ಮಹತ್ವ ಹೊಂದಿರುವ ಸಂವಿಧಾನವನ್ನು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ನಮಗೆ ಲಿಖಿತ ರೂಪದಲ್ಲಿ ಬರೆದು ಕೊಟ್ಟಿದ್ದಾರೆ ಹಾಗೂ ಈ ಸಂವಿಧಾನದಲ್ಲಿ ದೇಶದಲ್ಲಿ ದೇಶದ ಕಟ್ಟ ಕಡೆಯ ಪ್ರಜೆಗೂ ಸಹ ಸಾಮಾಜಿಕ ನ್ಯಾಯ ಆರ್ಥಿಕ ನ್ಯಾಯ ಒದಗಿಸುವುದಕ್ಕೆ ಡಾಕ್ಟರ್ ಬಿ.ಆರ್.ಅಂಬೇಡ್ಕರ್ ಅವರು ಹೆಚ್ಚಿನ ಪರಿಶ್ರಮವನ್ನು ತೆಗೆದುಕೊಂಡು ಸುಮಾರು 2 ವರ್ಷ 11 ತಿಂಗಳು 18 ಗಂಟೆಗಳ ಕಾಲ ನಮ್ಮ ದೇಶದ ಸಂವಿಧಾನವನ್ನು ಬರೆದಿದ್ದಾರೆ ಪ್ರಸ್ತುತ ನಮ್ಮ ಸಂವಿಧಾನದಲ್ಲಿ 395 ವಿಧಿಗಳು 12 ಅನುಸೂಚಿಗಳು 22 ಭಾಗಗಳನ್ನ ನಾವು ಕಾಣಬಹುದು ಇಷ್ಟು ವಿಶಾಲವಾದ ಸಂವಿಧಾನವನ್ನು ಅಂಬೇಡ್ಕರ್ ಅವರು ನಮ್ಮ ದೇಶಕ್ಕೆ ಕೊಟ್ಟಿರುವುದು ನಮ್ಮ ಪುಣ್ಯವಾಗಿದೆ ಆದರೆ ಕೇಳುವ ಅವಿವೇಕಿಗಳು ಇಂತಹ ಸಂವಿಧಾನದ ವಿರುದ್ಧವಾಗಿ ಮಾತನಾಡುವುದು ಸಂವಿಧಾನದ ಪ್ರತಿಗಳನ್ನು ಸುಟ್ಟು ಹಾಕುವುದು ಒಂದು ಮಾರಕ ಕಾಯಿಲೆಯಾಗುತ್ತಿದೆ ಹಾಗಾಗಿ ದೇಶದ ಸಮಸ್ತ ಜನರು ಸಂವಿಧಾನವನ್ನು ಸಂಪೂರ್ಣವಾಗಿ ಅರ್ಥೈಸಿಕೊಂಡರೆ ವಿಶ್ವದಲ್ಲಿಯೇ ನಮ್ಮ ಭಾರತ ಸಂವಿಧಾನದ ಮಹತ್ವವನ್ನು ಹಾಗೂ ದೇಶದ ಅಭಿವೃದ್ಧಿಯನ್ನ ಕಾಣಬಹುದು,ಇನ್ನಾದರೂ ನಮ್ಮ ಪ್ರಜೆಗಳು ಬದಲಾಗಿ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ.ಆರ್.ಅಂಬೇಡ್ಕರ್ ಅವರಿಗೆ ಹಾಗೂ ನಮ್ಮ ದೇಶದ ಸಂವಿಧಾನಕ್ಕೆ ಹೆಚ್ಚು ಪ್ರಾಮುಖ್ಯತೆ ಮತ್ತು ಸಮಯವನ್ನು ಕೊಟ್ಟು ನಮ್ಮ ನೈಜ ಇತಿಹಾಸವನ್ನ ತಿಳಿದುಕೊಂಡು ದೇಶದ ಪ್ರಗತಿಗೆ ಮತ್ತು ಶಾಂತಿ ಸಮಾನತೆಗೆ ಶ್ರಮಿಸಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತಿದ್ದೇನೆ.

-ಕಾರ್ತಿಕ್ ಜಿ.ಎನ್. ವಕೀಲರು,ಗುಂಡ್ಲುಪೇಟೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ