ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ

ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕು ರಾವಂದೂರಿನಲ್ಲಿ ಇಂದು ಸಾಮೂಹಿಕ ಸತ್ಯನಾರಾಯಣ ಸ್ವಾಮಿ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಷೇಮಾಭಿವೃದ್ಧಿ ಯೋಜನೆ ಬಿ.ಜಿ ಟ್ರಸ್ಟ್ ಘಟಕ ಇವರ ಸಂಯೋಗದೊಂದಿಗೆ ಗೌರಮ್ಮ ಕಲ್ಯಾಣ ಮಂಟಪದಲ್ಲಿ ನೆರವೇರಿಸಲಾಯಿತು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರ್ ಎಸ್ ವಿಜಯಕುಮಾರ್ ರವರು ಮತ್ತು ಉದ್ಘಾಟನೆಯನ್ನು ಶ್ರೀ ನಿತಿನ್ ವೆಂಕಟೇಶ್ ರವರು ಅಧ್ಯಕ್ಷರು ಆಶ್ರಯ ಸಮಿತಿ ಪಿರಿಯಾಪಟ್ಟಣ ದಿವ್ಯ ಸಾನಿಧ್ಯವನ್ನು ಶ್ರೀ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಮುರುಘಾಮಠ ವಹಿಸಿದ್ದರು.ಉದ್ಘಾಟನೆಯ ನಂತರ ಶ್ರೀಮತಿ ಲೀಲಾವತಿ ಅವರು ನಿರ್ದೇಶಕರು ಶ್ರೀ ಕ್ಷೇತ್ರ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಕೊಡಗು ಜಿಲ್ಲೆ ಇವರು ಮಾತನಾಡಿ ನಮ್ಮ ಸಂಸ್ಕೃತಿ ಮತ್ತು ನಮ್ಮ ಪರಂಪರೆಯನ್ನು ನಮ್ಮ ಧರ್ಮದ ಸ್ವಾಮೀಜಿಯವರಿಂದ ಸಾಧ್ಯ ಎಂದರು ಇಂತಹ ಕಾರ್ಯಕ್ರಮಗಳನ್ನು ಎಲ್ಲಾ ಜನಾಂಗದವರು ಸೇರಿ ಮಾಡುವುದು ಸಾಮೂಹಿಕ ಪೂಜೆ ಉದ್ದೇಶವಾಗಿದೆ ಎಂದು ತಿಳಿಸಿದರು.
ಪರಮಪೂಜ್ಯ ಪದ್ಮಭೂಷಣ ಡಾಕ್ಟರ್ ವೀರೇಂದ್ರ ಹೆಗಡೆ ಅವರು ಸಂಘದ ಮಾರ್ಗದರ್ಶನಗಳನ್ನು ತಿಳಿಸಿದರು ನಮ್ಮ ಸಂಘವು ಬರಿ ಸ್ವಸಹಾಯ ಸಂಘವಲ್ಲದೆ ಗ್ರಾಮೀಣ ಅಭಿವೃದ್ಧಿ,ಕೆರೆಕಟ್ಟೆಗಳ ಪುನಶ್ಚೇತನ,ದೇವಸ್ಥಾನಗಳ ಜೀರ್ಣೋದ್ಧಾರ, ಶಾಲೆಗಳ ಬಗ್ಗೆ ಅರಿವು ಹೀಗೆ ಹತ್ತಾರು ಹಲವಾರು ಕಾರ್ಯಗಳನ್ನು ನಡೆಸುತ್ತಾ ಬಂದಿದೆ ಎಂದು ತಿಳಿಸಿದರು ನಂತರ ಆರ್ ಎಸ್ ಮಹೇಶ್ ರವರು ಮಾತನಾಡಿ ರೈತರು ಮತ್ತು ಮಹಿಳೆಯರು ಈ ಸ್ವ-ಸಹಾಯ ಸಂಘದ ಮೂಲ ಉದ್ದೇಶವನ್ನು ತಿಳಿಸಿ ಬಡತನ ನಿರ್ಮೂಲನೆ ಮಾಡುವುದು ಮತ್ತು ನಿಸರ್ಗದ ಬಗ್ಗೆ ನಾವು ಹೇಗೆ ಕಾಳಜಿ ತಿಳಿದುಕೊಳ್ಳಬೇಕೆಂದು ತಿಳಿಸಿದರು.ನಿತಿನ್ ವೆಂಕಟೇಶ್ ರವರು ಮಾತನಾಡಿ ವೀರೇಂದ್ರ ಹೆಗಡೆಯವರ ಕಾರ್ಯವು ನಮಗೆ ಉತ್ತಮ ಮಾರ್ಗದರ್ಶನವಾಗಿರುತ್ತದೆ ಅವರು ರಾಜ್ಯಸಭಾ ಸದಸ್ಯರಾಗಿರುವುದು ನಮ್ಮೆಲ್ಲರ ಸೌಭಾಗ್ಯ ಎಂದು ತಿಳಿಸಿದರು ನಂತರ ಮುರುಘಾಮಠದ ಸ್ವಾಮೀಜಿ ಮಾತನಾಡಿ ನಾವು ಹೇಗೆ ಬದುಕಬೇಕು ಹೇಗೆ ಜೀವನ ನಡೆಸುತ್ತಿದ್ದೇವೆ ಎಂದು ತಿಳಿಸಿದರು ನಂತರ ನಮ್ಮ ಜೀವನ ಹಾಗೂ ಆಹಾರದ ಬಗ್ಗೆ ತಿಳಿಸಿ ನಾವು ತಿನ್ನುವ ಆಹಾರವೂ ರಸಗೊಬ್ಬರ ಹಾಗೂ ವಿಷಯುಕ್ತ ಆಹಾರವಾಗಿರುತ್ತದೆ ಆದ್ದರಿಂದ ಸ್ವಾಭಾವಿಕವಾಗಿ ಮನೆಯಲ್ಲೇ ಹಸುಗಳಿಂದ ಬರುವ ಗೊಬ್ಬರವನ್ನು ಬಳಕೆ ಮಾಡುವುದು ಹಾಗೂ ಮಕ್ಕಳಿಗೆ ಮೊಬೈಲ್ ನಿಂದ ದೂರ ಇರುವ ಹಾಗೆ ತಿಳಿಸಿದರು ನಂತರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಆರ್ ಎಸ್ ವಿಜಯಕುಮಾರ್ ರವರು ಅಧ್ಯಕ್ಷರು ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿ ರಾವಂದೂರ್ ಇವರು ಮಾತನಾಡಿ ಸ್ವಸಹಾಯ ಸಂಘದ ಉದ್ದೇಶ ಹಾಗೂ ಇವತ್ತಿನ ಕಾರ್ಯಕ್ರಮ ಇದರ ಬಗ್ಗೆ ತಿಳಿಸಿದರು.ಈ ಕಾರ್ಯಕ್ರಮದಲ್ಲಿ ವೃದ್ಧರಿಗೆ ಮಾಶಾಸನ ಹಾಗೂ ಸೋಲಾರ್ ವಿತರಣೆಯನ್ನು ಮಾಡಲಾಯಿತು.ಈ ಕಾರ್ಯಕ್ರಮದಲ್ಲಿ ಶ್ರೀ ಆರ್ ಎಂ ವೀರಪ್ಪನವರು ಮಾಲೀಕರು ಗೌರಮ್ಮ ಕಲ್ಯಾಣ ಮಂಟಪ,ಶ್ರೀ ಶಿವು ಮಾಜಿ ಸೈನಿಕರು,ಸಾಕಮ್ಮ ಚಿಕ್ಕೆಗೌಡ ಮಾಜಿ ಅಧ್ಯಕ್ಷರು ತಾಲೂಕು ಪಂಚಾಯಿತಿ,ಸಿ ಇಮ್ರಾನ್ ಶರೀಫ್ ಧಾರ್ಮಿಕ ಮುಖಂಡರು,ಹಳೆನಲ್ಲಿ ಶ್ರೀ ಎಮ್ ಕೆ ಕೃಷ್ಣೇಗೌಡರು,ಶ್ರೀ ಹೇಮಂತ್ ಎಂ ಎಸ್ ಮೇಲ್ವಿಚಾರಕರು,ಎಚ್ಎನ್ ರಾಜ ಮೂರ್ತಿ ಕಾರ್ಯಕ್ರಮದ ಉಪಾಧ್ಯಕ್ಷರು,ಅಧ್ಯಕ್ಷರು ಹಂಡಿತವಳ್ಳಿ ಒಕ್ಕೂಟ ಮಮಿತಾ ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಬೆಟ್ಟದಪುರ,ಶ್ರೀಮತಿ ಲತಾ ಎಂ ಎಸ್ ಶ್ರೀಮತಿ ಅರ್ಚನ,ರೂಪ ಚಂದ್ರನಾಯಕ್, ಯೋಗಾನಂದ ಮೂರ್ತಿ,ಕಾವ್ಯ ಚೆಲುವರಾಜ್, ರಾವಂದೂರ್,ಹಂಡಿತವಳ್ಳಿ,ಮಾಕೋಡು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಹಾಜರಿದ್ದರು.ಈ ಕಾರ್ಯಕ್ರಮದ ಕೊನೆಯಲ್ಲಿ ಅನ್ನ ಸಂತರ್ಪಣೆ ನೆರವೇರಿತು.

ವರದಿ-ಎಚ್.ಆರ್.ಶಂಕರ್,ಹಂಡಿತವಳ್ಳಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ