ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ನಂಜನಗೂಡು ಅನುರಾಗ ಟ್ರಸ್ಟ್ ಮಕ್ಕಳಮನೆಯಲ್ಲಿ ಶಿವಶರಣ ಅಂಬಿಗರ ಚೌಡಯ್ಯನವರ ಜಯಂತಿ ಆಚರಣೆ

ಮೈಸೂರು:ಸಾನಿಧ್ಯವಹಿಸಿದ್ದ ನರಸಿಂಹರಾಜಪುರ ಬಸವಕೇಂದ್ರದ ಪೂಜ್ಯಶ್ರೀ ಬಸವಯೋಗಿಪ್ರಭುಗಳು ವಚನಾನುಭಾವ ಮಾಡಿದರು.ಹನ್ನೇರಡನೇಯ ಶತಮಾನದಲ್ಲಿ ಕಲ್ಯಾಣದಲ್ಲಿ ವಿಶ್ವಗುರು ಬಸವಣ್ಣನವರ ಅನುಭವ ಮಂಟಪದಲ್ಲಿ ಪಳಗಿದವರು ನಿಜಶರಣ ಅಂಬಿಗರ ಚೌಡಯ್ಯ ಸುಮಾರು 280 ವಚನಗಳನ್ನು ತಮ್ಮ ಹೆಸರನ್ನೇ ಅಂಕಿತನಾಮದಲ್ಲಿ ಬರೆದಿದ್ದಾರೆ.
ರಾಣಿಬೆನ್ನೂರು ಹತ್ತಿರ ಚೌಡದಾನಪುರದಲ್ಲಿ
ಚೌಡಯ್ಯನವರ ಗದ್ದುಗೆ ಇದೆ ಚೌಡಯ್ಯನವರು ದೋಣಿ ನಡೆಸುವ ಅಂಬಿಗ ಕಾಯಕವನ್ನು ಮಾಡುತ್ತಿದ್ದರು.ವೀರಗಣಾಚಾರಿಯಾಗಿದ್ದವರು ತಪ್ಪು ಕಂಡುಬಂದಲ್ಲಿ ನೇರವಾಗಿ ದಿಟ್ಟವಾಗಿ ದಂಡಿಸಿ ಹೇಳುತ್ತಿದ್ದರು.ಗಣಾಚಾರದ ವಚನಗಳ ಮೂಲಕ ಪೋಲಿಸ್ ಭಾಷೆಯಲ್ಲಿ ಧಮ೯ವನ್ನು ಜಾಗೃತಿ ಮಾಡುತ್ತಿದ್ದರು.
ಲಿಂಗವಂತರಾಗಿ ಸಿಡಿಯಾಡುವುದು,ಬಾಯಿಬೀಗ ಹಾಕಿಸಿಕೊಳ್ಳುವುದು,ದೇವರು ಮೈ ಮೇಲೆ ಬಂತು ಎಂದು ಮೌಢ್ಯತೆಯಲ್ಲಿರುವವರಿಗೆ ಶಿವದ್ರೋಹಿಗಳು ಎಂದು ಚಾಟಿ ಏಟು ನೀಡಿದ್ದಾರೆ.
‘ಜೀವನದುದ್ದಕ್ಕೂ ಹಲವಾರು ಚಿಂತೆಯಲ್ಲಿ ವ್ಯಥ೯ ಜೀವನ ಮಾಡುತ್ತೇವೆ.
ಇರುವಷ್ಟು ದಿವ ಶಿವಚಿಂತೆಯಲ್ಲಿರಬೇಕು ಎಂದು ಜಾಗೃತಿ ಮೂಡಿಸುತ್ತಾ ಸತ್ತಾಗ ಜೊತೆ ಹೂಳಿಸಿಕೊಂಬ ಇಷ್ಟ ಲಿಂಗವನ್ನು ಬಿಟ್ಟು ಅನ್ಯ ಲಿಂಗಕ್ಕೆ ಬಹುದೈವಕ್ಕೆ ಎರಗುವವರಿಗೆ ಭ್ರಷ್ಟರು ಎಂದು ತಿವಿದಿದ್ದಾರೆ.
ದಾರಿತಪ್ಪುವ ಡಾಂಭಿಕ ಜಂಗಮರಿಗೆ ಅರಿವು ಆಚಾರವಿಲ್ಲದ ವೇಷದಾರಿಗಳಿಗೆ ಭಕ್ತರಿಗೆ ಮೋಸ ಮಾಡುವ ದಾಮಿ೯ಕ ಮುಖಂಡರಿಗೂ ಎಚ್ಚರಿಕೆ ನೀಡಿದ್ದಾರೆ.
ಲಿಂಗಾಯತ ಧಮ೯ದಲ್ಲಿ ಹುಟ್ಟಿ ಪರದೈವ ಪೂಜೆ ಪರದೈವದ ಭಜನೆ ಪರಹಿಂಸೆ ಮಾಡಬಾರದು ಎನ್ನುತ್ತಾರೆ ನಿಜಶರಣ ಅಂಬಿಗರ ಚೌಡಯ್ಯ ಎಂದು ಬಸವಯೋಗಿಪ್ರಭುಗಳು ಅನುಭಾವ ನೀಡಿದ್ದರು.
ಈ ಸಂದಭ೯ದಲ್ಲಿ ಮಕ್ಕಳ ಮನೆ ಸಂಸ್ಥಾಪಕ ಡಿ.ಜಿ.ಸೋಮಶೇಖರ್ ಮೂತಿ೯
ವಿದ್ಯಾಥಿ೯ ಹರೀಶ್ ಜೊತೆಯಲ್ಲಿ ವಿದ್ಯಾಥಿ೯ಗಳು ಭಾಗವಹಿಸಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ