ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

“ದೇಶದ ಉಜ್ವಲ ಭವಿಷ್ಯಕ್ಕಾಗಿ ಮತದಾನ ಮಾಡಿ– ಡಾ.ಮಲ್ಲಿಕಾರ್ಜುನ ಚ.ಕನಕಟ್ಟೆ ಅಭಿಮತ”

ಬೀದರ್:ಹೈ.ಕ.ಶಿ. ಸಂಸ್ಥೆಯ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯ ಬೀದರನ ಆಂತರಿಕ ಐ.ಕ್ಯು.ಎ.ಸಿ. ಕೋಶ ವತಿಯಿಂದ ದಿನಾಂಕ 25-01-2024 ರಂದು “ರಾಷ್ಟ್ರೀಯ ಮತದಾನ ದಿನಾಚರಣೆ ಕಾರ್ಯಕ್ರಮ” ಜರುಗಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲರಾದ ಡಾ.ಮಲ್ಲಿಕಾರ್ಜುನ ಚ.ಕನಕಟ್ಟೆ ಅವರು ಮಾತನಾಡಿ ಮತದಾನ ಮಾಡುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ. ದಾನಗಳಲ್ಲಿ ಹಲವಾರು ದಾನಗಳಿಗೆ ರಕ್ತದಾನ, ಅನ್ನದಾನ,ನೇತ್ರದಾನ,ಕನ್ಯಾದಾನ ಹೀಗೆ ಮುಂತಾದ ದಾನಗಳಲ್ಲಿ ಶ್ರೇಷ್ಠವಾದ ದಾನ ಮತದಾನವಾಗಿದೆ ಎಂದು ತಿಳಿಸಿದರು.
“ದೇಶದ ಉಜ್ವಲ ಭವಿಷ್ಯಕ್ಕಾಗಿ ಮತದಾನ ಮಾಡಿ ನಮ್ಮ ಮತವು ಯಾವುದೇ ಕಾರಣಕ್ಕೆ ಹಣಕ್ಕೆ ಮಾರದೇ,ದೇಶದ ಉಜ್ವಲ ಭವಿಷ್ಯಕ್ಕಾಗಿ ನಾವೆಲ್ಲರೂ ಸ್ವಾಭಿಮಾನದಿಂದ ಮತದಾನ ಮಾಡುವುದರ ಜೊತೆಗೆ ನಾವೆಲ್ಲರೂ ಪ್ರತಿ ಮನೆ-ಮನೆಗೆ ಕಡ್ಡಾಯ ಮತದಾನದ ಮಹತ್ವ ಮತ್ತು ಅವಶ್ಯಕತೆಯ ಅರಿವನ್ನು ಮೂಡಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ನುಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ.ರಾಜಶೇಖರ ಅಲ್ಮಾಜೆ ಅವರು ಮಾತನಾಡಿ ಅತ್ಯಂತ ದುಃಖದ ಸಂಗತಿಯೆಂದರೆ ಇತ್ತಿಚೀನ ದಿನಗಳಲ್ಲಿ ಗ್ರಾಮೀಣ ಪ್ರದೇಶಕ್ಕಿಂತ ನಗರ ಪ್ರದೇಶದಲ್ಲಿ ಮತದಾನ ಪ್ರಮಾಣ ಬಹಳ ಕಡಿಮೆಯಾಗುತ್ತಿದೆ.ಸುಶಿಕ್ಷಿತರಾದ ನಾವು ಮತದಾನದ ಜವಾಬ್ದಾರಿಯನ್ನು ಮರೆಯುತ್ತಾ ಇರುವುದು ಅತ್ಯಂತ ಶೋಚನೀಯ ಸಂಗತಿ ಎಂದು ತಿಳಿಸಿದರು ನಮ್ಮ ಒಂದು ಮತವು ಚುನಾವಣೆಯ ಫಲಿತಾಂಶವೇ ಅಚ್ಚರಿಪಡಿಸಬಹುದು ಕೇವಲ ಒಂದು ಮತದಿಂದ ಅದೇಷ್ಟೋ ಅಭ್ಯರ್ಥಿಗಳು ಸೋತಿರುವುದು ನಮ್ಮ ಮುಂದೆ ಹಲವಾರು ಉದಾಹರಣೆಗಳಿವೆ ಎಂದು ತಿಳಿಸಿದರು.ನೂರಕ್ಕೆ ನೂರರಷ್ಟು ಮತದಾನ ಆಗಬೇಕಾದರೆ ಭಾರತೀಯರಾದ ನಾವೆಲ್ಲರೂ ಮತದಾನದ ಪ್ರಕ್ರಿಯೆಯಲ್ಲಿ ಭಾಗವಹಿಸಿ ವಿಶ್ವಕ್ಕೆ ಭಾರತದ ಪ್ರಜಾಪ್ರಭುತ್ವ ಮಾದರಿ ಪ್ರಜಾಪ್ರಭುತ್ವ ಎನ್ನುವುದು ಮತದಾನದ ಮೂಲಕ ತೋರಿಸಬೇಕಾಗಿದೆ ಎಂದು ನುಡಿದರು ಮಹಾವಿದ್ಯಾಲಯದ ಉಪನ್ಯಾಸಕರಾದ ಪಾಂಡುರಂಗ ಕುಂಬಾರ ಕಡ್ಡಾಯ ಮತದಾನ ಪ್ರತಿಜ್ಞೆಯನ್ನು ಬೋಧಿಸಿದರು.ಕಾರ್ಯಕ್ರಮದಲ್ಲಿ ಡಾ.ಸಂತೋಷಕುಮಾರ ಸಜ್ಜನ,ಪ್ರೊ.ವೀಣಾ ಜಲಾದೆ, ಶಿಲ್ಪಾ ಹಿಪ್ಪರಗಿ,ರಾಜಕುಮಾರ ಸಿಂಧೆ ಮತ್ತು ಬೋಧಕೇತರ ಸಿಬ್ಬಂದಿಗಳಾದ ಸಂಗೀತಾ ಪಾಟೀಲ, ಅಶೋಕ ರೇವಣಿ,ಸುವರ್ಣಾ ಪಾಟೀಲ ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಪ್ರಶಿಕ್ಷಣಾರ್ಥಿಗಳಾದ ವೈಷ್ಣವಿ ಬಿರಾದರ ನಿರೂಪಿಸಿದರು ಸಂಗಮೇಶ ಸ್ವಾಗತಿಸಿದರು,ರೋಹಿತ ವಂದಿಸಿದರು.

ವರದಿ:ಸಾಗರ್ ಪಡಸಲೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ