ಸಿಂಧನೂರು:ಕೆ ಆರ್ ಎಸ್ ಪಕ್ಷದ ಕಚೇರಿಯಲ್ಲಿ 75 ನೇ ಗಣ ರಾಜ್ಯೋತ್ಸವದ ಆಚರಣೆ ಕಾರ್ಯಕ್ರಮವನ್ನು ನೆರವೇರಿಸಲಾಯಿತು.ಇದೇ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ನಿರುಪಾದಿ ಕೆ ಗೋಮರ್ಸಿ ಸಂವಿಧಾನವನ್ನು ಜಾರಿಗೆ ತಂದು 75 ವರ್ಷಗಳು ಕಳೆದರೂ ಅದರಲ್ಲಿನ ಅಂಶಗಳು,ಕಾಯ್ದೆ ಕಾನೂನುಗಳು,ವಿಚಾರಗಳು ದೇಶದಾದ್ಯಂತ ಸರಿ ಸಮಾನವಾಗಿ ಇದ್ದರೂ ಸಹ ದೇಶದ ಜನತೆ ಸಾಮಾಜಿಕವಾಗಿ,ಆರ್ಥಿಕವಾಗಿ,ಶೈಕ್ಷಣಿಕವಾಗಿ,ರಾಜಕೀಯವಾಗಿ ಹಿಂದುಳಿದುರುವುದು ವಿಪರ್ಯಾಸ ಎಂದು ತಿಳಿಸಿದರು.ಡಾ ಬಿಆರ್ ಅಂಬೇಡ್ಕರ್ ಅವರ ಆದರ್ಶದ ಭಾರತದ ಕಲ್ಪನೆ ಸಂವಿಧಾನದ ಗುರಿ ಉದ್ದೇಶಗಳನ್ನು ಪ್ರತಿಯೊಬ್ಬರೂ ಪಲಿಸಿ ಮತ್ತು ಸಂವಿಧಾನದ ಪುಸ್ತಕ ಓದುವ ಅಭ್ಯಾಸ ಮಾಡಬೇಕು ಅಂದಾಗ ಮಾತ್ರ ಎಲ್ಲರೂ ಪ್ರಗತಿ ಸಾಧಿಸಲು ಸಾಧ್ಯ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್ ಅವರು ಮಾತನಾಡಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಸಂವಿಧಾನಕ್ಕೆ ಬದ್ದವಾಗಿ ಆಡಳಿತ ನಡೆಸಲು ಸಿದ್ಧವಿದ್ದು ಸಾರ್ವಜನಿಕರ ಜಾಗೃತಿಗಾಗಿ ಹಲವಾರು ಸಭೆ ಸಮಾರಂಭ ಕಾರ್ಯಕ್ರಮಗಳನ್ನು ರೂಪಿಸಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಗಂಗಾ ಕೆ ಮಸ್ಕಿ ಜಿಲ್ಲಾ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಅಯ್ಯಪ್ಪ ಮೇಟಿ,ಸಿಂಧನೂರು ತಾಲೂಕ ಅಧ್ಯಕ್ಷ ಶರಣಪ್ಪ ಹೂಗಾರ್,ಉಪದ್ಯಕ್ಷ ಸಿದ್ರಮಪ್ಪ ಪ್ರಧಾನ ಕಾರ್ಯದರ್ಶಿ ಚನ್ನಬಸವ ಸೋಮಲಾಪೂರ ಕಾರ್ಯದರ್ಶಿಗಳಾದ ಕೃಷ್ಣ ಸುಕಾಲಪೇಟೆ,ಅಜೀದ್,ವೀರೇಶ್ ಹುಸೇನಪ್ಪ ಬಾದರ್ಲಿ ಹಾಗೂ ಮುಖಂಡರು ಭಾಗವಹಿಸಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.