ಮಂಗಳೂರು:ಚೇಳಾರಿನ ಕೊಲ್ಯ ಪ್ರದೇಶದಲ್ಲಿ 2014-2015 ರಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಸುಮಾರು ಇನ್ನೂರು ಎಕರೆ ಜಮೀನನ್ನು ಈ ಪ್ರದೇಶದ ಕೃಷಿಕರಿಂದ ಕಡಿಮೆ ಬೆಲೆಯಲ್ಲಿ,ವಿವಿಧ ಒತ್ತಡ ತಂತ್ರಗಳನ್ನು ಬಳಸಿ ಖರೀದಿಸಿತ್ತು.ಮಧ್ಯೆ ಸರಕಾರಗಳು ಬದಲಾಗಿ ಈ ಜಮೀನಿನ ಸಮೀಕ್ಷೆ ನಡೆಸಲಾಗಿ,ಈ ಜಾಮೀನು ನಿವೇಶನವಾಗಿ ಅಭಿವೃದ್ಧಿ ಪಡಿಸಲು ಯೋಗ್ಯವಲ್ಲ ಎಂಬ ನಿರ್ಧಾರಕ್ಕೆ ಬಂದಿತ್ತು ಪ್ರಸ್ತುತ ಎಂಟು ವರ್ಷಗಳ ನಂತರ ಪ್ರಾಧಿಕಾರವು ಜಮೀನನ್ನು ವಾಸಯೋಗ್ಯವಾಗಿ ಪರಿವರ್ತಿಸಲು ದೊಡ್ಡಮಟ್ಟದ ಭೂಮಿ ಅಗೆಯುವುದು ಮತ್ತು ಅಗೆದ ಮಣ್ಣನ್ನು ತಗ್ಗು ಪ್ರದೇಶದ ಹೊಂಡಗಳಲ್ಲಿ ತುಂಬಿಸುವ ಕೆಲಸಕ್ಕಾಗಿ ಬೃಹತ್ ಯಂತ್ರೋಪಕರಣಗಳನ್ನು ತೊಡಗಿಸಿಕೊಂಡಿದೆ.ಸಾರ್ವಜನಿಕರು ಮತ್ತು ಭವಿಷ್ಯದಲ್ಲಿ ಮುಡಾದ ಲೇಔಟ್ ಖರೀದಿಸುವವರು ಗಮನಿಸಬೇಕಾದ ಮುಖ್ಯ ತಾಂತ್ರಿಕ ವಿಷಯ ಏನೆಂದರೆ,ಮಣ್ಣು ತುಂಬಿಸುವಾಗ ಹಂತ-ಹಂತ ವಾಗಿ ಒಂದು ಫೂಟ್ ದಪ್ಪ ಮಣ್ಣನ್ನು ಸಮತಟ್ಟು ಮಾಡಿ ಸತತ 15 ರಿಂದ ಇಪ್ಪತ್ತು ಬಾರಿ ಎಂಟರಿಂರ ಹತ್ತು ಟನ್ ಭಾರದ ರೋಲರ್ ನ್ನು ಮುಂದೆ ಮತ್ತು ಹಿಂದೆ ಓಡಿಸಬೇಕು ಮತ್ತು ಪ್ರತೀ ಲೇಯರ್ ನ ಕಾಂಪಾಕ್ಷನ್ ಟೆಸ್ಟ್ ಮಾಡಿಸಬೇಕು ಆದರೆ ಪ್ರಸ್ತುತ ನಿಯಮಗಳನ್ನು ಗಣನೆಗೆ ತೆಗೆದುಕೊಳ್ಳದೆ,ಮಾಸ್ ಫಿಲ್ಲಿಂಗ್ ಆಗಿ ಬೆಟ್ಟದ ಮಣ್ಣನ್ನು ತಗ್ಗು ಪ್ರದೇಶದಲ್ಲಿ ತುಂಬುತಿದ್ದಾರೆ.ಸಾರ್ವಜನಿಕರು ಈ ಬಗ್ಗೆ ತಿಳುವಳಿಕೆ ಇಲ್ಲದೆ ಮುಡಾದ ಲೇಔಟ್ ಖರೀದಿಸಿದಲ್ಲಿ, ಭವಿಷ್ಯದಲ್ಲಿ ಮಣ್ಣು ತುಂಬಿದ ಲೇಔಟ್ ಗಳಲ್ಲಿ ಕಂಡು ಕೇಳರಿಯದ ಆರ್ಥಿಕ ಹಾನಿ ಮತ್ತು ಲ್ಯಾಂಡ್ ಸ್ಲೈಡ್ ನಂತಹ ಅಪಘಾತಗಳನ್ನು ಅನುಭವಿಸಬೇಕಾಗಿಬರಬಹುದು ಆದುದರಿಂದ ಸಾರ್ವಜನಿಕ ಹಿತದೃಷ್ಟಿಯಿಂದ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ,ಸೂಕ್ತ ತಾಂತ್ರಿಕ ನಿಯಮಗಳನ್ನು ಪಾಲಿಸಿ ಸುರಕ್ಷಿತ ಲೇಔಟ್ ಗಳನ್ನು ಜನರಿಗೆ ಒದಗಿಸಬೇಕಾಗಿ ಸಾರ್ವಜನಿಕರ ಒತ್ತಾಯ.ಸರಕಾರವೂ ಈ ಬಗ್ಗೆ ಗಮನ ಹರಿಸಬೇಕೆಂದು ಸಾರ್ವಜನಿಕರ ಕೋರಿಕೆ.
ವರದಿ:ಚಂದ್ರಶೇಖರ ಹೆಬ್ಬಾರ್ ಕೊಲ್ಯ