ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಆರುಷಿ ಮೈ ಡಾಟರ್ ಜಾರಿಗೊಳಿಸುವುದೇ ಭಾರತ ಸರ್ಕಾರ?

ರಾಜ್ಯದಲ್ಲಿ ಹೆಣ್ಣು ಬ್ರೂಣ ಹತ್ಯೆ ಪ್ರಕರಣಗಳು ಹೆಚ್ಚಾಗಿ ಅದರ ಬಗ್ಗೆ ವ್ಯಾಪಕ ಚರ್ಚೆಗಳು ಆಗುತ್ತಿರುವಾಗ ಈ ಸಂದರ್ಭದಲ್ಲಿ ಹೊನ್ನಾಳಿಯ ಯುವಕ ಚನ್ನೇಶ ಜಕ್ಕಾಳಿ ಇದೇ ವಿಷಯವನ್ನು ಕೇಂದ್ರವಾಗಿಟ್ಟುಕೊಂಡು ಕನ್ಯಾಕುಮಾರಿಯಿಂದ ದೆಹಲಿಯವರೆಗೆ ಪಾದಯಾತ್ರೆ ಮಾಡಿದ್ದಾರೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ಆತ್ಮೀಯ ಸ್ನೇಹಿತರಾದ ಶ್ರೀ ಚನ್ನೇಶ ಜಕ್ಕಾಳಿ ಯವರು ಸುಮಾರು 44 ವಯಸ್ಸಿನ ಇವರು ಸೆಪ್ಟೆಂಬರ್ 24ರಂದು ಭಾರತದ ದಕ್ಷಿಣದ ತುತ್ತ ತುದಿ ಕನ್ಯಾಕುಮಾರಿಯಿಂದ ಪಾದಯಾತ್ರೆ ಆರಂಭಿಸಿ ಈ ಪಾದಯಾತ್ರೆಯ ಮೂಲ ಉದ್ದೇಶ ಹೆಣ್ಣು ಬ್ರೂಣ ಹತ್ತೆ ನಿಯಂತ್ರಣ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ತಾಯಿ ಭ್ರೂಣಕ್ಕೆ ಅಥವಾ ಗರ್ಭಿಣಿಯರಿಗೆ ಡಿಜಿಟಲ್ ಕೋಡ್ ನೀಡಬೇಕು ಎಂಬುದು ಅದರಿಂದಾಗಿ ಮಕ್ಕಳ ಲೆಕ್ಕ, ತಾಯಿ ಭ್ರೂಣದಿಂದ ಮಣ್ಣು ಸೇರುವವರೆಗೆ ಮಾಹಿತಿ ಇರುತ್ತದೆ ಚೆನ್ನೇಶ್ ಹಲವಾರು ವರ್ಷಗಳಿಂದ ಈ ಬಗ್ಗೆ ಕೇಂದ್ರ ಸರ್ಕಾರ ಮಟ್ಟದಲ್ಲಿ ಸಾಕಷ್ಟು ಹೋರಾಟಗಳನ್ನು ಮಾಡಿದ್ದಾರೆ ಧರಣಿ ಸತ್ಯಾಗ್ರಹ ಹೀಗೆ ಹೋರಾಟ ಮಾಡಿದರು ಇಲ್ಲಿಯವರೆಗೆ ಸರ್ಕಾರಗಳು ಮತ್ತು ಇದಕ್ಕೆ ಸಂಬಂಧಪಟ್ಟ ಇಲಾಖೆಗಳು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ
ಈ ಬಾರಿ ವಿವಿಧ ರಾಜ್ಯಗಳ ಮುಖಾಂತರ ಪಾದಯಾತ್ರೆ 3,000 km ಸಂಚರಿಸಿ ಡಿಸೆಂಬರ್ ಹತ್ತರಂದು ದೆಹಲಿ ತಲುಪಿದರು ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸ್ಮೃತಿ ಇರಾನಿ ಅವರನ್ನು ನಮ್ಮ ಸಂಸದರಾದ ಸಿದ್ದೇಶ್ ರವರ ಮುಖಾಂತರ ಭೇಟಿ ಮಾಡಿ ಇದರ ಬಗ್ಗೆ ಸವಿಸ್ತಾರವಾಗಿ ತಿಳಿಸಿದ್ದಾರೆ
ಇಂದು ಆಧುನಿಕತೆ ಬೆಳೆದು ಜನರಿಗೆ ತಿಳುವಳಿಕೆ ಮೂಡಿದರು ಮಹಿಳೆಯರಿಗೆ ರಾಜಕೀಯದಲ್ಲಿ ಮತ್ತು ಉದ್ಯೋಗದಲ್ಲಿ 33% ಮೀಸಲಾತಿ ಇದ್ದರೂ ಹೆಣ್ಣು ಭ್ರೂಣ ಹತ್ಯೆಯ ದೊಡ್ಡ ಜಾಲಗಳೇ ಕೆಲಸ ಮಾಡುತ್ತಿವೆ ಇದರಲ್ಲಿ ಹೆಣ್ಣು ಮಕ್ಕಳು ಸಹ ಕೆಲಸ ಮಾಡುತ್ತಿರುವುದು ನಮ್ಮ ದುರದೃಷ್ಟಕರ ಎಂದರೆ ತಪ್ಪಾಗಲಾರದು,
ಈ ವಿಷಯವಾಗಿ ಚೆನ್ನೇಶ್ವರವರು ಹೇಳುವುದು ಒಮ್ಮೆ ಭ್ರೂಣದ ದಾಖಲಾತಿಯಾಗಿ ಡಿಜಿಟಲೀಕರಣವಾದರೆ ಆಧಾರ್ ಸಹಿತ ಎಲ್ಲಾ ದಾಖಲೆಗಳನ್ನು ಆಧಾರ್ ಮೇಲೆಯೇ ದಾಖಲು ಮಾಡಬಹುದು ಆ ಬ್ರೂಣ ಗಂಡು ಹೆಣ್ಣು ಮಣ್ಣು ಸೇರುವರೆಗೂ ಒಂದೇ ಐಡೆಂಟಿಟಿ ಇರುತ್ತದೆ ಜನಸಂಖ್ಯೆ ಇನ್ನೂ ಮಾಹಿತಿ ಸುಲಭವಾಗಿ ಸಿಗುತ್ತದೆ ಮತ್ತು ಅನೇಕ ಯೋಜನೆಗಳನ್ನು ಇದರ ಆಧಾರದ ಮೇಲೆಯೇ ರೂಪಿಸಬಹುದು ಈಗ ಹುಟ್ಟಿದ ನಂತರ ದಾಖಲೆ ಸೃಷ್ಟಿಯಾಗುತ್ತದೆ ಆದರೆ ಈ ವಿಚಾರವಾಗಿ ಸರ್ಕಾರಗಳು ಇದರ ಸಾಧಕ ಬಾದಕಗಳನ್ನು ಕುರಿತು ಮತ್ತಷ್ಟು ಆಳವಾಗಿ ಅಧ್ಯಯನ ಮಾಡಿ ಕಾನೂನನ್ನು ರೂಪಿಸಬಹುದು ಆದರೆ ಸರ್ಕಾರವು ಈ ವಿಷಯದಲ್ಲಿ ಭೇಟಿ ಪಡಾವೋ ಭೇಟಿ ಬಚಾವೋ ಎಂಬ ಸೂಕ್ತಿಯನ್ನು ಹೊಂದಿದ್ದು ಹೆಣ್ಣು ಬ್ರೂಣ ಹತ್ಯೆಯ ಈ ಕಾರ್ಯಕ್ರಮವನ್ನು ಮಾನ್ಯ ಪ್ರಧಾನ ಮಂತ್ರಿಗಳು ಗಂಭೀರವಾಗಿ ಪರಿಗಣಿಸಿ ಇಂತಹ ಮಹತ್ವದ ಕಾರ್ಯಕ್ಕೆ ಕೈಜೋಡಿಸಬೇಕು ಈ ವಿಷಯವನ್ನು ಹೆಣ್ಣು ಬ್ರೂಣ ಹತ್ಯೆ ಕಾಯ್ದೆ ಮತ್ತು ಮಕ್ಕಳ ಸಂರಕ್ಷಣ ಕಾಯ್ದೆ ಅಡಿಯಲ್ಲಿ ಹೆಚ್ಚು ಗಮನ ಹರಿಸಬೇಕು
ಈ ಕಾರ್ಯಕ್ರಮದ ರೂವಾರಿ ಚೆನ್ನೇಶ್ ಆರ್ಥಿಕವಾಗಿ ಬಲಾಡ್ಯರೇನೂ ಅಲ್ಲ ಇವರು ತನ್ನ ಜೀವನ ನಿರ್ವಹಣೆಗಾಗಿ ಚಿಕ್ಕದೊಂದು ಪ್ರಿಂಟಿಂಗ್ ಪ್ರೆಸ್ ನಡೆಸುತ್ತಾ ಇದರಲ್ಲಿ ಬಂದಂತ ಹಣವನ್ನು ಇಂತಹ ಒಂದು ಕಾರ್ಯಕ್ಕೆ ಬಳಸುತ್ತಿರುವುದು ತುಂಬಾ ಹೆಮ್ಮೆಯ ವಿಷಯ
ಇಂತಹ ಒಂದು ವಿಶೇಷವಾದ ಯೋಜನೆಯ ಮುಂದಿನ ದಿನದಲ್ಲಿ ಜಾರಿಗೆ ಬರಬಹುದೇನಂದು ಸಾರ್ವಜನಿಕರು ಎದುರು ನೋಡುತ್ತಿದ್ದಾರೆ.

ವರದಿ ಪ್ರಭಾಕರ್ ಡಿ ಎಂ ಹೊನ್ನಾಳಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ