ಚಿಕ್ಕಬಳ್ಳಾಪುರ:ಚಿಕ್ಕಬಳ್ಳಾಪುರ ನಗರಸಭೆಯ 2024-25ನೇ ಸಾಲಿನ ಆಯ್ಯ-ವ್ಯಯದ ಅಂದಾಜುಪಟ್ಟಿ ತಯಾರಿಸಬೇಕಾಗಿದ್ದು,ಅದಕ್ಕಾಗಿ ಸಾರ್ವಜನಿಕರ ಕುಂದುಕೊರತೆ ಹಾಗೂ ಅತ್ಯವಶ್ಯಕ ಬೇಡಿಕೆಗಳನ್ನು ಅರಿತುಕೊಳ್ಳುವ ಉದ್ದೇಶದಿಂದ ನಗರಸಭೆಯ ಸರ್.ಎಂ.ವಿ ಸಭಾಂಗಣದಲ್ಲಿ ಫೆ.6ರಂದು ಬೆಳಗ್ಗೆ 11.00 ಘಂಟೆಗೆ ಆಯ್ಯ-ವ್ಯಯ ಅಂದಾಜುಪಟ್ಟಿ ತಯಾರಿಸುವ ಸಂಬಂಧ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳು ಹಾಗೂ ಆಡಳಿತಾಧಿಕಾರಿಗಳು,ನಗರಸಭೆ,ಚಿಕ್ಕಬಳ್ಳಾಪುರ ರವರ ಅಧ್ಯಕ್ಷತೆಯಲ್ಲಿ 2ನೇ ಪೂರ್ವ ಭಾವಿ ಸಭೆಯನ್ನು ಕರೆಯಲಾಗಿದೆ ಎಂದು ಪೌರಯುಕ್ತರು ನಗರಸಭೆ,ಚಿಕ್ಕಬಳ್ಳಾಪುರ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ-ತುಳಸಿನಾಯಕ್
