ಹುನಗುಂದ:ಪ್ರಸಿದ್ಧ ಹಿಂದುಸ್ತಾನಿ ಗಾಯಕಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ.ನೀಲಾ ಎಂ.ಕೊಡ್ಲಿ ಅವರನ್ನು ಹುನಗುಂದ-ಇಲಕಲ್ ತಾಲೂಕಾ ಆಡಳಿತದ ಪರವಾಗಿ ಇಲಕಲ್ಲಿನ ಅವರ ನಿವಾಸದಲ್ಲಿ ೭ ೦೨ ೨೦೨೪ ರಂದು ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಶಿರಸ್ತೆದಾರ ಶ್ರವಣ ಮುಂಡೇವಾಡಿ,ಹಿರಿಯ ಲೇಖಕ ಎಸ್ಕೆ.ಕೊನೆಸಾಗರ, ಲೇಖಕ,ಹಾಯ್ಕು ಕವಿ ಸಿದ್ದಲಿಂಗಪ್ಪ ಬೀಳಗಿ, ಹುನಗುಂದ ಸರ್ಕಾರಿ ಪಿ ಯು ಕಾಲೇಜಿನ ಪ್ರಭಾರ ಪ್ರಾಂಶುಪಾಲ ಶರಣಪ್ಪ ಹೂಲಗೇರಿ,ಉಪನ್ಯಾಸಕ ವೀರಭದ್ರಯ್ಯ ಶಶಿಮಠ, ಶಿಕ್ಷಕ/ಗಾಯಕ ಮುತ್ತು ಬೀಳಗಿ,ಪ್ರಭು ಬನ್ನಿಗೋಳಮಠ,ಡಾ.ಎಂ.ಸಿ.ಕೊಡ್ಲಿ, ಅರುಣ ಕೊಡ್ಲಿ ಉಪಸ್ಥಿತರಿದ್ದರು.
