ಮೈಸೂರು:18 ವರ್ಷಗಳ ಹಿಂದೆ ರಾಮ್ ಸನ್ಸ್ ಮಾಲೀಕರು ಬೊಂಬೆ ಮನೆಯನ್ನು ಶುರು ಮಾಡಿದರು. ಮಕ್ಕಳಿಗೆ ಪ್ರಿಯವಾದ ಬೊಂಬೆಗಳನ್ನು ಹೊಂದಿರುವ ರಾಮ್ ಸನ್ಸ್ ಬೊಂಬೆ ಮನೆ,ಇದು ವಸ್ತು ಪ್ರದರ್ಶನ ಹಾಗೂ ಮಾರಾಟವನ್ನು ಹೊಂದಿದೆ,ಹಿಂದೆ ದಸರಾಕ್ಕೆ ಮಾತ್ರ ಸೀಮಿತವಾಗಿದ್ದು,ದೀಪಾವಳಿಯವರೆಗೂ ಇದ್ದಿದಂತಹ ಬೊಂಬೆ ಮನೆಯು ಈಗ ವರ್ಷದ 365 ದಿನವೂ ತೆರೆದಿರುತ್ತದೆ.125 ಕರಕುಶಲ ಕೇಂದ್ರಗಳಿಂದ ಬೊಂಬೆಗಳು ಇಲ್ಲಿಗೆ ಬರುತ್ತವೆ.ತಮಿಳು ನಾಡು,ಕಲ್ಕತ್ತಾ,ಮಹಾರಾಷ್ಟ್ರ,ಉತ್ತರಪ್ರದೇಶ,ರಾಜಸ್ತಾನ್,ಕರ್ನಾಟಕದ ವಿವಿಧ ಭಾಗಗಳಿಂದಲೂ ಬರುತ್ತವೆ.ಬೊಂಬೆಗಳ ದಸರಾ ವಿಶೇಷತೆಯಾಗಿ ಪ್ರತಿ ವರ್ಷ ಅಂಕಣಗಳನ್ನು ಟೀಮ್ ಗಳು ಸಜ್ಜುಗೊಳಿಸುತ್ತಾರೆ.ಕಳೆದ ವರ್ಷ 2023ರಲ್ಲಿ “ಪುರಿ ಜಗನ್ನಾಥ ರಥಯಾತ್ರೆ” 2022 ರಲ್ಲಿ”ಶಿರಸಿ ಮಾರಿಕಾಂಬ,ನವರಸ ಹಾಗೂ ಶಿವಾಜಿಯವರ ಜೀವನ ಕೋಟೆಯನ್ನು ಪ್ರತಿಬಿಂಬಿಸುವ ಮಣ್ಣಿನ ಬೊಂಬೆಗಳು ಆಕರ್ಷಣೆಯ ಕೇಂದ್ರವಾಗಿದೆ.
ಮರದ ಬೊಂಬೆ,ಕಾಗದ ತಿರುಳಿ,ಪೇಪರ್ ಮೆಶ್ ನಿಂದ ತಯಾರಾದ ಬೊಂಬೆಗಳು,ಪಿ,ಓ,ಪಿ ಬೊಂಬೆಗಳನ್ನು ಹೊಂದಿವೆ.ಬೊಂಬೆ ಡಿಸೈನರ್ ರಘು ಧರ್ಮೇಂದ್ರ ರವರು ಇವುಗಳ ಮೇಲ್ವಿಚಾರಕರು ಆಗಿರುತ್ತಾರೆ.ಪ್ರತಿ ವರ್ಷ ಬೊಂಬೆಗಳು ದಸರಾದ ಒಂದು ತಿಂಗಳ ಮುಂಚೆನೇ ಬರುತ್ತವೆ.
ಇದೀಗ ಮಕ್ಕಳ ಜನಾಕರ್ಷಣೆಯ ಕೇಂದ್ರವಾಗಿದೆ.
ವರದಿ:ಚೇತನ್ ಕುಮಾರ್