ಇಂದು ಇಂಡಿ ನಗರದ ಅಮರ್ ಹೋಟೆಲ್ ಆವರಣದಲ್ಲಿ ನಡೆದ 137 ಕೋಟಿ ರೂಪಾಯಿ ಅನುದಾನದಲ್ಲಿ ವಿವಿಧ ಇಲಾಖೆಗಳ ಅಭಿವೃದ್ದಿ ಕಾಮಗಾರಿಗಳ ಭೂಮಿ ಪೂಜೆ ಹಾಗೂ ಲೋಕಾರ್ಪಣೆ ಕಾರ್ಯಕ್ರಮವನ್ನು ಜನಪ್ರಿಯ ಶಾಸಕರು ಹಾಗೂ ಕರ್ನಾಟಕ ಸರ್ಕಾರದ ಅಂದಾಜು ಸಮಿತಿಗಳ ಅಧ್ಯಕ್ಷರಾದ ಶ್ರೀ ಯಶವಂತರಾಯಗೌಡ ವಿ ಪಾಟೀಲ ಅವರು ನೆರವೇರಿಸಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಈ ವೇಳೆ ಕಂದಾಯ ಉಪ ವಿಭಾಗಾಧಿಕಾರಿಗಳಾದ ಅಭಿದ್ ಗದ್ಯಾಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಾವೀದ ಮೋಮಿನ, ಭೀಮಾಶಂಕರ ಸಕ್ಕರೆ ಕಾರ್ಖಾನೆಯ ನಿರ್ದೇಶಕರುಗಳಾದ ಬಿ ಎಂ ಕೋರೆ, ಎಂ ಆರ್ ಪಾಟೀಲ, ಜೆಟ್ಟೆಪ್ಪ ರವಳಿ, ಮಾಜಿ ಎಪಿಎಂಸಿ ಅಧ್ಯಕ್ಷರುಗಳಾದ ಭೀಮಣ್ಣ ಕೌಲಗಿ, ಶಿವಯೋಗೆಪ್ಪ ಚೆನ್ನಗೊಂಡ, ಪಿಕೆಪಿಎಸ್ಸ ಸದಸ್ಯರಾದ ಮಲ್ಲಪ್ಪ ಮಡ್ಡಿಮನಿ ಸೇರಿದಂತೆ ವಿವಿಧ ತಾಲೂಕಾ ಮಟ್ಟದ ಅಧಿಕಾರಿಗಳು ಪಕ್ಷದ ಕಾರ್ಯಕರ್ತರು ಮುಖಂಡರುಗಳು ಅಭಿಮಾನಿಗಳು ಉಪಸ್ಥಿತರಿದ್ದರು.
ವರದಿ-ಮನೋಜ್ ನಿಂಬಾಳ