ಮರೆತ ಕ್ಷಣ
ಕಲ್ಪನೆಗಳು, ಕನಸುಗಳು
ಅನುಭವದ ಕಲ್ಪನಾತೀತ ಮನಸ್ಸಿನ
ಭಾವಗಳು ಬೆಳಕು ಕತ್ತಲು ವೈಚಿತ್ರ್ಯಗಳ ಸಮಾಗಮ
ಬರಿಗಣ್ಣಿಗೆ ಕಾಣದಿಹುದು
ಕವಿ ತಾನಾಗೆ ಬರೆದಕಲ್ಪನೆ
ಕಂಡಿದ್ದು ಬರಿಯ ನೆನಪು
ಮಾತು ಮೌನ ಕೇಳಿಸದ ವಿಚಿತ್ರ ಕಲ್ಪನೆಗಳು ಅಲೆಗಳಂತೆ
ಅಪ್ಪಳಿಸುತಲಿಹುದು ಮನಸ್ಸಿನ
ಅಂತರಾಳದ ವೈಚಿತ್ರ್ಯ
ಪುನಃ ಕಂಡ ಕನಸು ಕೋನೆಯಕ್ಷಣ
ಇರುವ ದಾರಿಯ ಅಲೆಗಳು
ಅರಿತರು ವಿಚಿತ್ರವಾಗಿಹುದು
ಹಂತ ಹಂತಗಳ ಕನಸು
ಮೋಡದ ಮರೆಯಲ್ಲಿ
ಸಂಪೂರ್ಣ ದಿಗಂತಗಳ ಸಾಲು
ಮರೆತ ಕ್ಷಣ ಇರುವ ದಾರಿ ರೇಖಾಚಿತ್ರ ತಾ ಕಂಡ ಕ್ಷಣ……
-ಚೇತನ್ ಕುಮಾರ್



















