ಅರಣ್ಯಕ್ಕೆ ಅಕ್ರಮ ಪ್ರವೇಶ ಮಾಡಿ ಕಡವೆ ಬೇಟೆಯಾಡಿ ಮಾಂಸವಾಗಿ ಪರಿವರ್ತಿಸಿ ಸಾಗಾಣಿಕೆ ಮಾಡುತ್ತಿದ್ದಾಗ 6 ಜನರನ್ನು ವಶಕ್ಕೆ ಪಡೆಯುವಲ್ಲಿ ಅರಣ್ಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ರಾಮಾಪರ ವಲಯದ ಕೋಣನಕೆರೆ ಸಮೀಪ ಅರಣ್ಯ ಪ್ರದೇಶದ ಬಳಿ ಅರಣ್ಯ ಅಧಿಕಾರಿಗಳು ಗಸ್ತಿನಲ್ಲಿ ವಾಹನ ತಡೆದು ತಪಾಸಣೆ ನಡೆಸಿದಾಗ ಅರಣ್ಯ ಪ್ರದೇಶದಲ್ಲಿ ಕಡವೆಯನ್ನು ಬೇಟೆಯಾಡಿ ಮಾಂಸವಾಗಿ ಕತ್ತರಿಸಿ ಸಾಗಿಸುತ್ತಿದ್ದಾಗ ಅರಣ್ಯಾಧಿಕಾರಿಗಳಿಗೆ ಸಿಕ್ಕಿಬಿದ್ದ ತಾಲೂಕಿನ ವಿವಿಧ ಗ್ರಾಮದ ಆರು ಜನ ಬೇಟೆಗಾರರು.
ಆರು ಜನ ಬಂಧಿತರು:ಬಸಪ್ಪನ ದೊಡ್ಡಿ ಗ್ರಾಮದ ಇರ್ಫಾನ್ ಬೇಗ್ ವಹಿದ್,
ಅಂಬಿಕಾಪುರದ ಕುಮಾರಸ್ವಾಮಿ,
ಅಪ್ಪು,ಕಾಂಚಳ್ಳಿ ಗ್ರಾಮದ ಯಶವಂತ್ ಕುರುಬರ, ದೊಡ್ಡಿ ಗ್ರಾಮದ ಸೈಯದ್ ಆರೀಸ್ ಇವರುಗಳು ಕೆ ಎ ಟೆನ್ ಎ 73 34 ಅಶೋಕ್ ಲೇಲ್ಯಾಂಡ್ ವಾಹನವನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆ ನಡೆಸಿ ಬೇಟೆಗೆ ಬಳಸಿದ್ದ ನಾಡ ಬಂದೂಕು ಮಚ್ಚು ಮತ್ತು ಫೋನ್ ಗಳನ್ನು ವಶಕೆ ಪಡೆಯಲಾಗಿದೆ.
ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಎಸ್ ಎಫ್ ಚಂದ್ರಶೇಖರ್ ಪಾಟೀಲ್ ಸೂಚನೆಯ ಮೇರೆಗೆ ವಲಯ ಅರಣ್ಯಾಧಿಕಾರಿ ಕಾಂತರಾಜ್ ಚೌಹಾಣ್ ಪ್ರಕರಣದ ಕಲಿಸಿಕೊಂಡು ಬಂಧಿತರನ್ನು ನ್ಯಾಯಕ್ಕೆ ಹಾಜರುಪಡಿಸಲಾಗಿದೆ ಇದೇ ವೇಳೆಯಲ್ಲಿಅರಣ್ಯ ಅಧಿಕಾರಿ ರಾಮು ರಕ್ಷಿತ್ ಕಲ್ಲೇಶ್ ವೀರೇಶ್ ಅಭಿಷೇಕ್ ಇದ್ದರು.
ವರದಿ ಉಸ್ಮಾನ್ ಖಾನ್