ವಿಜಯನಗರ ಜಿಲ್ಲೆ ಶ್ರೀ ಕ್ಷೇತ್ರ ಕೊಟ್ಟೂರಿನಲ್ಲಿ ಹಿರೇಮಠದಿಂದ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ಉತ್ಸವ ಮೂರ್ತಿಯು ಅಲಂಕೃತ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿದರು.ಸಮಾಳ ನಂದಿಕೋಲು ಸಕಲ ವಾದ್ಯಗಳೊಂದಿಗೆ ಅಂಬೇಡ್ಕರ್ ನಗರದಲ್ಲಿ ದಲಿತ ಮಹಿಳೆಯಿಂದ ಗಿಣ್ಣದ ಎಡೆ
ನೈವೇದ್ಯ ನೀಡಿದ ನಂತರ ದ್ವಾರಬಾಗಿಲು ಹತ್ತಿರ ಸಾಗುತ್ತಾ ಪ್ರಮುಖ ಬೀದಿಯಿಂದ ತೇರು ಬಜಾರ್ ಮೂಲಕ ತೇರು ಬಯಲು ತಲುಪುತ್ತದೆ ವಿಜೃಂಭಣೆಯಿಂದ ನಡೆಯುವ ಶ್ರೀ ಗುರು ಕೊಟ್ಟೂರೇಶ್ವರಸ್ವಾಮಿ ರಥೋತ್ಸವ.
ಜಾತ್ಯಾತೀತ ಜಾತ್ರೆ ಶ್ರೀ ಗುರು ಕೊಟ್ಟೂರೇಶ್ವರಸ್ವಾಮಿಯ ಅನೇಕ ನಾಮಗಳನ್ನು ಹೊಂದಿರುವ ಮತ್ತು 60 ಅಡಿ ಎತ್ತರದ ತೇರು ಸುಮಾರು ಲಕ್ಷಾಂತರಕ್ಕೂ ಹೆಚ್ಚು ಭಕ್ತಾದಿಗಳು
ಸರ್ವಜನಾಂಗದವರು ಸೇರಿ ಪ್ರತಿ ವರ್ಷದಂತೆ ಈ ವರ್ಷ ಕೂಡಾ ಮೂಲಾ
ನಕ್ಷತ್ರ ಪ್ರಕಾರ ಸಮಯಕ್ಕೆ ಸರಿಯಾಗಿ 5 ಗಂಟೆ 25 ನಿಮಿಷಕ್ಕೆ ರಥವು ತಾನಾಗಿಯೇ ಒಂದು ಹೆಜ್ಜೆ ಸಾಗುತ್ತದೆ ಇಂಥ ಅಪರೂಪದ ಕ್ಷಣವನ್ನು ನೋಡಲು ಭಕ್ತರು ಘೋಷಣೆಯೊಂದಿಗೆ ಕೊಟ್ಟೂರೇಶ್ವರ ದೊರೆಯೇ ನಿನಗ್ಯಾರೂ ಸರಿಯೇ ಸರಿ ಸರಿ ಅಂದವರಿಗೆ ಹಲ್ಲು ಮುರಿಯೇ ಬಹುಪರಾಕ್ ಬಹುಪರಾಕ್ ಬಹುಪರಾಕ್ ಎಂದು
ಭಕ್ತರು ಘೋಷಣೆಗಳು ಕೂಗುತ್ತಾ ಕಾದು ನಿಲ್ಲುತ್ತಾರೆ. ಸಮಯಕ್ಕೆ ತಕ್ಕಂತೆ ಮೂಲ ನಕ್ಷತ್ರ ಕೊಟ್ಟೂರೇಶ್ವರನ ಪವಾಡವಾಗುತ್ತದೆ.
ಮದ್ಯಪಾನ ಸೇವನೆ ಮಾಡಿದ ಯಾರೋ ವ್ಯಕ್ತಿ ರಥದ ಗಡ್ಡೆಯಲ್ಲಿ ಕೂತಿದ್ದ ಅದಕ್ಕೆ
ಮಣಿ ಹರಿದು 30 ನಿಮಿಷ ತಡವಾಯಿತು ನಂತರ ಆ ವ್ಯಕ್ತಿಯನ್ನು ಕೆಳಗೆ ಇಳಿಸಿದರಂತೆ ರಥವು ಮುಂದಕ್ಕೆ ಸಾಗಿತು ಇದು ಶ್ರೀ ಗುರು ಕೊಟ್ಟೂರೇಶ್ವರನ ಪವಾಡ.
ಶ್ರೀ ಗುರು ಕೊಟ್ಟೂರೇಶ್ವರನಲ್ಲಿ ಭಕ್ತರು ತಮ್ಮ ತಮ್ಮ ಕೋರಿಕೆಯನ್ನು ಕೇಳುತ್ತಾ ಮಕ್ಕಳಿಲ್ಲದವರು ಮಕ್ಕಳಾಗುವುದರ ಮೂಲಕ ಬೇಡಿಕೊಳ್ಳುತ್ತಾರೆ ಹಾಗೆ ಮೊಗಲ್ ಚಕ್ರವರ್ತಿ ಅಕ್ಬರ್ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಗೆ ಅರ್ಪಿಸಿದ ಮಣಿಮಂಚ ತೊಟ್ಟಿಲು ತೂಗುವದರ ಮೂಲಕ ಭಕ್ತಿಯಿಂದ ಕೇಳಿಕೊಳ್ಳುತ್ತಾರೆ ಕೆಲವರು ಆರೋಗ್ಯವನ್ನು ಮತ್ತು ಸಕಲ ಬೇಡಿಕೆಗಳನ್ನು ಇಟ್ಟು ಪಾದಯಾತ್ರೆ ಮೂಲಕ ಪ್ರಸಾದ ನೀಡುವುದರ ಮೂಲಕ ಹರಿಕೆ ದೀಡು ನಮಸ್ಕಾರ ಪ್ರದಕ್ಷಣೆ ಪೂರೈಸಿ ಇತ್ಯಾದಿ ದಾನ ಮಾಡುವುದರ ಮೂಲಕ ತಮ್ಮ ಕೋರಿಕೆಗಳ ಮೂಲಕ
ಶ್ರೀ ಗುರು ಕೊಟ್ಟೂರೇಶ್ವರನಲ್ಲಿ ಪ್ರಾರ್ಥಿಸುತ್ತಾರೆ.
ಹಾಗೆ ಮುಸ್ಲಿಂ ಜನಾಂಗದವರು ಸಹ ತಮ್ಮ ಬೇಡಿಕೆಗಳನ್ನು ಕೋರುತ್ತಾರೆ.
ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಗೆ ಪಾದಯಾತ್ರೆ ಮೂಲಕ ದಾವಣಗೆರೆ ಚಿತ್ರದುರ್ಗ ಹಾಸನ ಗದಗ ಹಾವೇರಿ,ಬಳ್ಳಾರಿ ಅನೇಕ ಜಿಲ್ಲೆಗಳಿಂದ 20 ವರ್ಷದಿಂದ ಪ್ರತಿವರ್ಷ ಪಾದಯಾತ್ರೆ ಬರುತ್ತೇವೆ.
ನಾವು ಬೇಡಿದ ಎಲ್ಲಾ ಬೇಡಿಕೆಗಳು ಈಡೇರುತ್ತವೆ ಎಂದು ಪಾದಯಾತ್ರೆಗೆ ಬಂದಿರುವ ಭಕ್ತರು ಹೇಳುತ್ತಾರೆ ಶ್ರೀ ಗುರು ಕೊಟ್ಟೂರೇಶ್ವರಸ್ವಾಮಿಯ ರಥೋತ್ಸವಕ್ಕೆ ಜನಸಾಗರವೇ ಸೇರುತ್ತಾರೆ
ವಿಜಯ ನಗರ ಜಿಲ್ಲೆಯ
ಮಾನ್ಯ ಜಿಲ್ಲಾಧಿಕಾರಿಗಳಾದ ಎಂ ಎಸ್ ದಿವಾಕರ್ ದಿನಾಂಕ 3 ಮಾರ್ಚ್ 2024ರಂದು ರಾತ್ರಿ 8ಗಂಟೆಗೆ ಕೆ.ಅಯ್ಯನಹಳ್ಳಿಯಿಂದ ಕೊಟ್ಟೂರಿಗೆ ಪಾದಯಾತ್ರೆ ಮಾಡುವುದರ ಮೂಲಕ ಬಂದಂತ ಭಕ್ತಾದಿಗಳಿಗೆ ಸಕಲವನ್ನು ಪಾಲಿಸಲಿ ಎಂದು ಶ್ರೀ ಗುರು ಕೊಟ್ಟೂರೇಶ್ವರನಲ್ಲಿ ಪ್ರಾರ್ಥನೆ ಮಾಡಿಕೊಂಡರು.
ವರದಿ. ವೈ. ಮಹೇಶ್ ಕುಮಾರ್ ಕೊಟ್ಟೂರು