ಕಲಬುರಗಿ/ಅಫಜಲಪುರ:ಇಂದಿನ ಅಧುನಿಕ ಯುಗದಲ್ಲಿ ಮಕ್ಕಳು ಉತ್ತಮ ನಾಗರಿಕರಾಗಬೇಕಾದರೆ ಅವರಲ್ಲಿ ಬಾಲ್ಯದಲ್ಲಿಯೆ ಒಳ್ಳೆಯ ಮೌಲ್ಯಗಳನ್ನು ಬೆಳಸುವುದು ಅತಿ ಆವಶ್ಯಕವಾದ ಕಾರ್ಯವಾಗಿದೆ ಎಂದು ಚಿನ್ಮಯಗಿರಿಯ ಪೂಜ್ಯ ವೀರ ಮಹಾಂತ ಶಿವಾಚಾರ್ಯರು ಹೇಳಿದರು.ಗೊಬ್ಬೂರ(ಬಿ)ಯ ಶ್ರೀ ಮಲ್ಲಿಕಾರ್ಜುನ ಪೂರ್ವ ಹಾಗೂ ಕಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಾ ಇಂದಿನ ಮಕ್ಕಳೆ ಭವ್ಯ ಭಾರತದ ಭಾವಿ ಪ್ರಜೆಗಳಾದ್ದರಿಂದ ಅವರಲ್ಲಿ ಬಾಲ್ಳಯದಲ್ಲಿಯೆ ಅಕ್ಷರ ಜ್ಞಾನದ ಜೊತೆಗೆ ಮೌಲ್ಯಗಳನ್ನು ಬಿತ್ತುವುದು ಪ್ರಸ್ತುತ ಕಾಲ ಘಟ್ಟದಲ್ಲಿ ಅನಿವಾರ್ಯವೆಂದು ಕಿವಿ ಮಾತು ಹೇಳಿದರು ಇದೆ ಸಂದರ್ಭದಲ್ಲಿ ಮುಖ್ಯ ಅಥಿತಿಗಳಾಗಿ ಆಗಮಿಸಿದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಅರುಣಕುಮಾರ ಪೊಲೀಸ್ ಪಾಟೀಲ್ ಮಾತನಾಡಿ ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವುದರ ಮೂಲಕ ಭವಿಷ್ಯದಲ್ಲಿ ಹೆಮ್ಮರವಾಗಿ ಬೆಳೆಯಲಿ ಎಂದು ಶುಭಹಾರೈಸಿದರು ಅದೇ ರೀತಿ ಮುಖಂಡ ಸಿದ್ದು ಶಿರಸಗಿ ಮಾತನಾಡುತ್ತಾ ಮುಂದಿನ ದಿನಗಳಲ್ಲಿ ಶಾಲೆಗೆ ಬೇಕಾಗುವ ಯಾವುದೇ ರೀತಿಯ ಸಲಹೆ ಮತ್ತು ಸಹಕಾರ ಕೋಡುವುದಾಗಿ ಭರವಸೆ ವ್ಯಕ್ತಪಡಿಸಿದರು.ಅದೇ ರೀತಿ ಸಂಸ್ಥೆಯ ವತಿಯಿಂದ ಗ್ರಾಮದ ವಿವಿದ ಕ್ಷೇತ್ರಗಳಲ್ಲಿ ಉತ್ತಮ ಕಾರ್ಯ ಸಾಧನೆ ಮಾಡುತ್ತಿರುವ ಡಾ.ಪಲ್ಲವಿ ಪಾಟೀಲ್ ಸುಹಾಸಿನಿ ನಾಟಿಕಾರ್ ಹಾಗೂ ಸಿದ್ದಾರೂಢ ಅವರಳ್ಳಿ ಅವರನ್ನು ಸನ್ಮಾನಿಸಲಾಯಿತು.ಪೋಷಕರ ಸಮ್ಮುಖದಲ್ಲಿ ಮಕ್ಕಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು ವೇದಿಕೆಯ ಮೇಲೆ ಮುಖಂಡರಾದ ಪ್ರಭುಲಿಂಗ.ಕೆ.ದೇವತ್ಕಲ,ಶಿವಕುಮಾರ್ ಭೋಗಶೆಟ್ಟಿ, ಶಿವಾನಂದ್ ಮೇಳಕುಂದಿ,ಸಿ ಆರ್ ಪಿ ಆಸ್ಪಕ,ಶ್ರೀಮತಿ ಜ್ಯೋತಿ ಮ್ಯಾಳೈಸಿ,ಶಿವಾನಂದ ದೇವತ್ಕಲ,ಕಲ್ಯಾಣರಾವ್ ಪಡ ಶೆಟ್ಟಿ ಹಾಗೂ ಅರುಣಕುಮಾರ ಹರಳಯ್ಯ ಇತರರು ಉಪಸ್ಥಿತರಿದ್ದರು.ಸಂಸ್ಥೆಯ ಶಿವಾನಂದ ಕೌದಿ ಸ್ವಾಗತಿಸಿದರು,ಪ್ರಭಾವತಿ ಪೊದ್ದಾರ ನಿರೂಪಿಸಿದರು.
ವರದಿ:ಮಹಾದೇವ ವಿಶ್ವಕರ್ಮ