ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಚೈತನ್ಯ….

ಶತಮಾನಗಳು ಕಳೆದ ಮೇಲೆ ಮೂಲೆ ಮನೆಯ ನೆನಪಾಗಿ
ಮೂಲೆ ಮನೆಯ ದೇವರಮನೆ ಮಾಡಲು ಸಜ್ಜಾಗಿದ್ದಾರೆ

ಯಾರು ಅಂತ ಕೇಳಿದರೆ ಮೈ ರೋಮಾಂಚನ ಗೊಳ್ಳುತ್ತೆ. ಯಾಕೆ ಗೊತ್ತಾ?
ಇಷ್ಟು ದಿನ ಮೂಲೆ ಮನೆಯೆಂದು ಕಸ,ಪೊರಕೆ, ಚಪ್ಪಲಿಯೇ ಕಂಡಿದ್ದಾಯಿತು.

ಸಿರಿ ಸಂಪತ್ತು ಆಸ್ತಿ ಪಾಸ್ತಿ ಗಾಡ್ರೇಜೀನ ಕೀಲಿ ಕೈಯ ಮಾತು
ದೇವಲೋಕಕ್ಕೂ ನರಲೋಕಕ್ಕೂ ನಡುವಿನ ಅಂತರದಂತಹದ್ದು…

ಸಜ್ಜಿನ ಹಿಂದಿನ ಸಂಚು ಅರಿಯದೆ ಎಲ್ಲರೂ ನನ್ನವರೆಂದು ಸಂಚಿನ ಚಿಂತೆ ಮರೆತೇ ಹೋಗಿತ್ತು…ಮಾರನೇ ದಿನವೇ ಎಲ್ಲವೂ ಸಜ್ಜಾಗಿತ್ತು

ಗಾಡ್ರೇಜೀನ ಕೀಲಿ ಕೈ ನನ್ನ ಕೈ ಸೇರಿತ್ತು
ಆನಂದದಲ್ಲಿ ತೇಲಾಡಿ ಎಲ್ಲರಿಗೂ ಸುದ್ದಿಯ ತಿಳಿಸಿಯೇ ಬಿಟ್ಟೆ

ಅದೇ ಅಮಲಿನಲ್ಲಿ ಮಂಚದ ಮೇಲೆ…ರಾಣಿಯ ಹಾಗೆ
ನಿದ್ದೆಗೆ ಜಾರಿ ಕನಸು ಕಾಣತಲಿ ಸ್ವಪ್ನ ಲೋಕಕೆ ಜಾರಿದೆ

ಯಾರೊ ಕೈ ಕಾಲನು ಬಿಗಿಯಾಗಿ ಹಿಡಿದು ಹ್ಞೂಂ ಬೇಗ ಬೇಗ ಎನ್ನುತ್ತಿದ್ದ ದನಿ
ಜೊತೆಗೆ ಉಸಿರಾಡಲು ಆಗದಂತೆ ಅದುಮಿದ ಭಾವ…….

ಲೋಕದ ಕಣ್ಣಿಗೆ ನಾಯಕರ ಹೊರತು ನಾಯಕಿಯರ ಗುರುತಿಲ್ಲ
ಲೋಕದ ಡೊಂಕಷ್ಟೇ ಅಲ್ಲ ಇದು ಎಲ್ಲರ ಮನದ ಡೊಂಕಿನ ಕತೆ

ಜೀವ ಕೊಟ್ಟವಳ ಜೀವವನ್ನೇ ತೆಗೆಯಲು ಹೊರಟ ಎಲ್ಲರ ಕತೆ…
ನಿತ್ಯ ಕಾಡುವುದೊಂದೆ ವಿಶಯ…ಚೈತನ್ಯ ತುಂಬುವ ಮನದ ಚೈತ್ರವ….

ಮಸಣವಾಗಿಸುವುದೆಕೆಂದು…?….

ರಚನೆ:ಲೋಹಿತೇಶ್ವರಿ ಎಸ್ ಪಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ