(ಭಾಗ-೧)
ದಿನಾಂಕ ೨೮ ೦೪ ೧೯೬೦ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಬೋಧನಾ ಸಂಶೋಧನಾ ಕ್ಷೇತ್ರವಾದ ‘ಮಾನಸ ಗಂಗೋತ್ರಿ’ಯ ಪ್ರಾರಂಭವೋತ್ಸವವನ್ನು ನೆರವೇರಿಸಿದರು ಆಗಿನ ಉಪಕುಲಪತಿ ಡಾ.ಕೆ.ವಿ.ಪುಟ್ಟಪ್ಪ,ಎಂ ಎ.ಡಿಲಿಟ್
“ಮಾನಸ ಗಂಗೋತ್ರಿ ಎಂದು ಹೆಸರಿಟ್ಟವರೆ ಇವರು ಅದು ಇವರಿಗೆ ಮಿಂಚಿನಂತೆ ಹೊಳೆದ ಹೆಸರು ಅದನ್ನು ಮನಸ್ಸಿನಲ್ಲಿ ಧ್ಯಾನಿಸಿ ಯಾರಿಗೂ ಅದನ್ನು ಏಳು,ಎಂಟು ದಿವಸ ತಿಳಿಸದೆ ಅದಕ್ಕೆ ಶಕ್ತಿ ಸಂಶಯನ ಮಾಡಿ ಮಾನಸಗಂಗೋತ್ರಿ ಎಂಬ ಹೆಸರನ್ನು ಇಟ್ಟಿದ್ದಾಯಿತು ಎಂದಿದ್ದಾರೆ.ಇಟ್ಟ ಹೆಸರೇ ಕೊಟ್ಟ ಮಂತ್ರ ಆದ್ದರಿಂದ ಅದೇ ತೊಟ್ಟ ದೀಕ್ಷೆಯು ಆಗಲಿ ಎಂದಿದ್ದಾರೆ.ಮಾನಸಗಂಗೋತ್ರಿ ಎಂಬ ಹೆಸರು ಭೌಗೋಳಿಕವಾಗಿರುವಂತೆ ಆಧ್ಯಾತ್ಮಿಕವಾಗಿಯೂ ಇದೆ ನಮ್ಮ ಭರತ ವರ್ಷದ ಎತ್ತರದಲ್ಲಿ ಹಿಮಾಲಯಗಳ ನುಡಿಯಲ್ಲಿ ಗಂಗೆ ಹುಟ್ಟುವ ಎಡೆಯಿದೆ ಮಾನಸ ಸರೋವರ,ಗಂಗೋತ್ರಿ ಎಂದೆಲ್ಲಾ ಪುಣ್ಯಕ್ಷೇತ್ರವನ್ನು ಕರೆಯುತ್ತಾರೆ.ಇಷ್ಟರಿಂದ ಈ ಹೆಸರು ಭೌಗೋಳಿಕ ಅರ್ಥ ಪಡೆದಿರುವಂತೆ ತೋರುತ್ತದೆ ಆದರೆ ಯಾವ ಹೆಸರು ಯಾವ ಭಾರತೀಯರಿಗೂ ಗಂಗೆ ಎಂಬ ಮಾತಾಗಲಿ,ಮಾನಸ ಎಂಬ ಮಾತಾಗಲಿ,ಗಂಗೋತ್ರಿ ಎನ್ನುವ ಮಾತಾಗಲಿ ಕೇವಲ ಭೌಗೋಳಿಕ ಅಸ್ತಿತ್ವ ಪಡೆದಿರುವ ನಿರ್ಜೀವ ವಸ್ತುಗಳಲ್ಲಿ ಅವುಗಳೆಲ್ಲಾ ಮಾನಸಿಕ ಆಧ್ಯಾತ್ಮಿಕ ಸಾಂಕೇತಿಕಾರ್ತಗಳ ತವರಾಗಿವೆ.’ಮಾನಸ’ ಎಂಬ ಮಾತು ಮಾನಸ ಸರೋವರ ಸೂಚಿಸಿರುವಂತೆಯೇ ಮಾನಸ ಸಂಬಂಧಿಯೂ,ವಿದ್ಯಾಸಂಬಂಧಿಯೂ ಆಗಿದೆ.
ಆ ಮಾನಸ ಸರೋವರದಂತೆ ಈ ಮಾನಸ ಗಂಗೋತ್ರಿ ಮಾನಸದ,ಮಾನಸದ ಶೃಂಗ ನೃತ್ಯಗಳಲ್ಲೇ ಅತಿ ಮಾನಸ ಅವತರಿಸಿ ಬರುತ್ತದೆ.”ಅತಿ ಮಾನಸ,ಮಾನಸಕ್ಕೆ ಅವತರಿಸುತ್ತದೆ”ಎನ್ನುವ ಶ್ರೀ ಅರವಿಂದರ ಅಭಿಪ್ರಾಯ ಇದೆ.
ಸಂಗ್ರಹ:ಚೇತನ್ ಕುಮಾರ್,ಮೈಸೂರು.