ಕುವೆಂಪುರವರ ಭಾಷಣದ ಪ್ರಾರಂಭ ಒಂದು ಕಥೆಯ ಮೂಲಕ ಪ್ರಾರಂಭ ಕಂಡಿದ್ದು ಹೀಗೆ ಪ್ರಾಚೀನ ಋಷಿ ಕವಿ ಮಂತ್ರದ್ರಷ್ಟಾದ ಒಬ್ಬನು ಜ್ಞಾನಾಧಿದೇವಿಯ ಸ್ತೋತ್ರ ಮಾಡುತ್ತಾ ಹೀಗೆ ಪ್ರಾರಂಭಿಸುತ್ತಾನೆ.”ಬ್ರಹ್ಮ ಸ್ವರೂಪ ಪರಮ ಜ್ಯೋತಿ ರೂಪಾ ಸನಾತನೀ/ ಸರ್ವವಿದ್ಯಾಧಿದೇವಿ ಯಾ ತಸ್ಯೇವಾಣಿ ನಮೋ ನಮಃ” ಯಾವ ಜ್ಞಾನ ದೇವಿಯು ಆಶೀರ್ವಾದ ಇಲ್ಲದಿದ್ದರೆ ಜಗತ್ತು ಶಶ್ವ ಜೀವನ ಮೃತ ಸ್ಥಿತಿಯಲ್ಲಿರುತ್ತಿತ್ತೋ, ವಾಗ್ದೇವಿಯ ಕೃಪೆ ಪಡೆಯದೆ ಸದಾ ಉನ್ಮತ್ತತೆಯಿಂದ ಮೂಕಂ”.ಸ್ಥಿತಿಯಲ್ಲಿ ಇರುತ್ತಿದ್ದಿತ್ತೋ ಅಂತಹ ವಾಗದಿಷ್ಟಾತ್ರಿಗೆ,ಅಂತಹ ಜ್ಞಾನ ದೀವಿಗೆ ನಮಸ್ಕರಿಸುತ್ತಾ ಭಾಷಣ ಪ್ರಾರಂಭವನ್ನು ಕಾಣುತ್ತದೆ.
ದೇವಿ ಸರಸ್ವತಿಯನ್ನು ಪ್ರಾರ್ಥಿಸಿದ ಋಷಿ ಕೊನೆಯಲ್ಲಿ ಮಾತರ,ಮಾತರ ನಮಸ್ತೇ”ಎಂದು ಎರಡು ಬಾರಿ ಕೇಳಿಕೊಂಡಿದ್ದಾನೆ.ತಾಯೇ,ತಾಯೇ ನಿನಗೆ ನಮಸ್ಕಾರ,ನಮ್ಮ ಜಡತ್ವವನ್ನೂ ದಹಿಸು, ದಹಿಸಿ ಪ್ರಶಾಂತವಾದ ಬುದ್ಧಿಯನ್ನು ಕೊಡು ಎಂದು ಪ್ರಾರ್ಥಿಸಿದ್ದಾನೆ.ಬುದ್ಧಿಗೂ ಅನೇಕ ಗುಣಗಳಿರಬಹುದಲ್ಲ.ಆದ್ದರಿಂದಲೇ ಪ್ರಶಾಂತವಾದ ಬುದ್ಧಿಯನ್ನು ಕೊಡು ನಮ್ಮ ಜಡತ್ವವನ್ನು ಸುಡುವಂತಹ ಬುದ್ಧಿಯನ್ನು ಕೊಡು ಎಂದು ಪ್ರಾರ್ಥಿಸಿಕೊಂಡಿದ್ದಾನೆ.ಆ ಋಷಿ ಕವಿ ಸರಸ್ವತಿಯ ಚರಣ ಪೀಠಗಳಾದ ಈ ನಮ್ಮ ವಿದ್ಯಾ ಕ್ಷೇತ್ರಗಳು ವಿಶ್ವವಿದ್ಯಾನಿಲಯಗಳು ಎರಡು ಕೆಲಸವನ್ನು ಮಾಡಬೇಕು,ಇದು ನನ್ನ ಹಾರೈಕೆ ಎಂದು ಕುವೆಂಪು ಹೇಳಿದ್ದಾರೆ.
ಮಾನಸಗಂಗೋತ್ರಿಯ ಹೆಸರ ಸ್ವಾರಸ್ಯತೆಯನ್ನು ಮುಂದುವರೆಸುತ್ತಾ ನೋಡುವುದಾದರೆ “ಮಾನಸ ಸರೋವರ”ಎಷ್ಟೇ ಪವಿತ್ರವಾದುದಾಗಿದ್ದರೂ,ಅಲ್ಲೇ ಉದ್ಭವಿಸುವ ಗಂಗಾ ಜಲವೆಲ್ಲಾ ಅಲ್ಲಿಯೇ ಸಂಗ್ರಹಗೊಂಡು ನಿಂತಿದ್ದರೆ,ಯಾರು ಅದನ್ನು ಮೆಚ್ಚುತ್ತಿರಲಿಲ್ಲ.ಮಳೆಗಾಲದಲ್ಲೆ ಸಂಗ್ರಹವಾದ ಹಿಮ ಜಲ ಬೇಸಿಗೆಯಲ್ಲಿ ಗಂಗಾ ಮುಂತಾದ ಇತರ ನದಿಗಳಿಗೆ ತವನಿಧಿ ಆಹಾರವಾಗಿ ಅವತರಿಸಿಬರುವುದರಿಂದಲೇ ಅದು ಪೂಜ್ಯ,ಪ್ರಿಯ, ಲೋಕ ಪ್ರಯೋಜನಕಾರಿ,ಕಲ್ಯಾಣಿಕಾರಿ,ಆ ಗಂಗೋತ್ರಿ ಯಲ್ಲಿ ಉದ್ಭವಿಸಿದ ಗಂಗೆ ನಾಡಿಗೆಲ್ಲ ಜಲಾಹಾರವಿತ್ತು ತಣಿಸಿ,ಅನೇಕ ಪುಣ್ಯಕ್ಷೇತ್ರಗಳಲ್ಲೇ ತೀರ್ಥವಾಗಿ ಪರವಿತ್ತು.
