ಭದ್ರಾವತಿ:ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ಸರಿಯಾದ ರೀತಿಯಲ್ಲಿ ತಲುಪುವಂತೆ ಅಧಿಕಾರಿಗಳು ಕ್ರಮ ವಹಿಸಬೇಕು. ಫಲಾನುಭವಿಗಳು ಸರ್ಕಾರಿ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಶಾಸಕ ಹಾಗೂ
ಕರ್ನಾಟಕ ರಾಜ್ಯ ಗ್ರಾಮೀಣ ಮೂಲಸೌಕರ್ಯಗಳ ಅಭಿವೃದ್ಧಿ ನಿಗಮ(ಕೆ ಆರ್ ಐ ಡಿ ಎಲ್) ಅಧ್ಯಕ್ಷರಾದ ಬಿ.ಕೆ.ಸಂಗಮೇಶ್ವರ್ ಕರೆ ನೀಡಿದರು.
ಕಾರ್ಮಿಕ ಇಲಾಖೆ ವತಿಯಿಂದ ನಗರದ ವೀರಶೈವ ಸಭಾಭವನದಲ್ಲಿ ನೋಂದಾಯಿತ ಕಾರ್ಮಿಕರ ಮಕ್ಕಳಿಗೆ ಲ್ಯಾಪ್ ಟಾಪ್ ವಿತರಣೆ,ಕಾರ್ಪೇಂಟರ್ ವೃತ್ತಿನಿರತರಿಗೆ ಕಾರ್ಪೇಂಟರ್ ಕಿಟ್ ವಿತರಣೆ ಹಾಗೂ ಜಿ+3 ಗುಂಪು ಮನೆಗಳ ಫಲಾನುಭವಿಗಳ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ನಗರಸಭೆಯ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಬಿ.ಕೆ.ಮೋಹನ್ ಮಾತನಾಡಿ,ನಾಲ್ಕು ಚುನಾವಣೆಗಳಲ್ಲಿ ಜನರ ವಿಶ್ವಾಸ ಗಳಿಸಿರುವ ಶಾಸಕ ಬಿ.ಕೆ.ಸಂಗಮೇಶ್ವರ್,ಕ್ಷೇತ್ರದಲ್ಲಿ ಸುಮಾರು 8 ಸಾವಿರಕ್ಕೂ ಅಧಿಕ ಮನೆಗಳಿಗೆ ಹಕ್ಕುಪತ್ರ ಕೊಡಿಸಿರುವ ಮಹಾಪುರುಷ.ಇವರು ಭದ್ರಾವತಿ ಕ್ಷೇತ್ರವನ್ನು ಕೇವಲ ಒಂದು ವರ್ಷದಲ್ಲಿ ಮಾದರಿ ಕ್ಷೇತ್ರವನ್ನಾಗಿ ರೂಪಿಸಲಿದ್ದಾರೆ ಎಂದು ಹೇಳಿದರು. ಭಾರತದಲ್ಲಿ ನುಡಿದಂತೆ ನಡೆದ ಸರ್ಕಾರವೆಂದರೆ ಅದು ಕರ್ನಾಟಕ ಕಾಂಗ್ರೆಸ್ ಸರ್ಕಾರ.ಕೇವಲ 9 ತಿಂಗಳ ಅವಧಿಯಲ್ಲಿ ರಾಜ್ಯದ ಜನರಿಗೆ ನೀಡಿದ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಈಡೇರಿಸಿದೆ.ಜನರು ಜನಪರ ಆಡಳಿತವನ್ನು ಆರಿಸುವಷ್ಟು ಬುದ್ದಿವಂತರಾಗಬೇಕು.ಭದ್ರಾವತಿಯಲ್ಲಿ ಸರ್ವರಿಗೂ ಸೂರು ಒದಗಿಸುವಲ್ಲಿ ಶಾಸಕರು ಅತ್ಯಂತ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಲ್ಕೀಷ್ ಭಾನು ಮಾತನಾಡಿ,ಈ ಹಿಂದೆಯೂ ಸರ್ಕಾರಗಳಿತ್ತು.ಆದರೆ ಭದ್ರಾವತಿಯ ಬಹಳಷ್ಟು ಜನರಿಗೆ ಸೂರು ಒದಗಿಸಿರುವುದು ಸಿದ್ದರಾಮಯ್ಯ ನೇತೃತ್ವದ ರಾಜ್ಯಸರ್ಕಾರ.ಕಾಂಗ್ರೆಸ್ ಪಕ್ಷ ಜನತೆಗೆ ವಾಗ್ದಾನ ನೀಡಿದಂತೆ ನಡೆದುಕೊಂಡಿದೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅನೇಕ ಯೋಜನೆಗಳ ಮೂಲಕ ಸ್ತ್ರೀಯರ ಸಬಲೀಕರಣಕ್ಕೆ ಕಾರಣವಾದ ಸರ್ಕಾರವಾಗಿದೆ ಇದಕ್ಕಾಗಿ ಸಿದ್ಧರಾಮಯ್ಯ ಸರ್ಕಾರವನ್ನು ಅಭಿನಂದಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಲತಾ ಚಂದ್ರಶೇಖರ್,ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಪೌರಾಯುಕ್ತ ಪ್ರಕಾಶ್ ಎಂ ಚೆನ್ನಪ್ಪನವರ್,ಕಾರ್ಮಿಕ ಇಲಾಖೆ ಆಯುಕ್ತ ಭೀಮಪ್ಪ,ನಗರಸಭಾ ಸದಸ್ಯರುಗಳಾದ ಅನುಸುಧಾ ಮೋಹನ್,ಶೃತಿ ವಸಂತಕುಮಾರ್,ಚನ್ನಪ್ಪ,ಕೆ.ಸುದೀಪ್ ಕುಮಾರ್, ಎಂ.ಮಣಿ,ರಿಯಾಜ್ ಅಹಮದ್,ಶ್ರೇಯಸ್,ಬಷೀರ್ ಅಹಮದ್,ನಗರ ಕಾಂಗ್ರೆಸ್ ಅಧ್ಯಕ್ಷ ಎಸ್.ಕುಮಾರ್, ಗ್ರಾಮಾಂತರ ಅಧ್ಯಕ್ಷ ಎಚ್.ಎಲ್.ಷಡಕ್ಷರಿ,
ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರುಗಳಾದ ಸಿ.ಎಂ.ಖಾದರ್,ಬಿ.ಕೆ.ಜಗನ್ನಾಥ್,ಮಣಿಶೇಖರ್, ಹೆಚ್.ರವಿಕುಮಾರ್,ಲಕ್ಷ್ಮೀದೇವಿ,ಸುಕನ್ಯರಾಜು, ಬಿ.ಎಸ್.ಗಣೇಶ್,ಈಶ್ವರಪ್ಪ,ಗಂಗಾಧರ್,ಸುಂದರ್ ಬಾಬು,ಮುಜಾಫೀರ್,ದಿಲ್ ದಾರ್ ಸೇರಿದಂತೆ ಹಲವರು ಹಾಜರಿದ್ದರು.ಗಣೇಶ್ ಪ್ರಾರ್ಥಿಸಿದರು. ಶಿವಕುಮಾರ್ ನಿರೂಪಿಸಿ,ವಂದಿಸಿದರು.
ವರದಿ:ಕೆ ಆರ್ ಶಂಕರ್,ಭದ್ರಾವತಿ