ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಇಳುವರಿ ಕೊರತೆ ಹಾಗೂ ಗಗನಕ್ಕೇರಿದ ನಿಂಬೆ ಹಣ್ಣಿನ ಬೆಲೆ

ದಾವಣಗೆರೆ/ಹೊನ್ನಾಳಿ:ಪ್ರಸ್ತುತ ವರ್ಷ ಬಿಸಿಲಿನ ತಪಮಾನ ಹೆಚ್ಚಿದಂತೆ ನಿಂಬೆಹಣ್ಣು ಬೆಲೆ ಏರಿಕೆಯಾಗುತ್ತಿದೆ.

ಬೇಸಿಗೆಯ ದಾಹಕ್ಕೆ ನಿಂಬೆಹಣ್ಣಿನ ಶರಬತ್ ಬಯಸುವ ಗ್ರಾಹಕರಿಗೆ ಅದರ ಬೆಲೆಯೇ ಗಂಟಲು ಒಣಗಿಸುತ್ತಿದೆ.ಮಾರುಕಟ್ಟೆಯಲ್ಲಿ ನಿಂಬೆಹಣ್ಣಿಗೆ ಎಲ್ಲಿಲ್ಲದ ಬೇಡಿಕೆ ಬಂದಿದ್ದು,ಅದರ ಬೆಲೆಯೂ ತೀವ್ರವಾಗಿ ದುಬಾರಿಯಾಗಿದೆ.
ವಿಜಯಪುರ,ಕಲಬುರಗಿಯಿಂದ ಆಮದು ಮಾಡಿಕೊಳ್ಳಲಾಗುತ್ತಿದೆ.ಒಂದು ಗೋಣಿ ಚೀಲದ ನಿಂಬೆಹಣ್ಣಿಗೆ 5ರಿಂದ 6 ಸಾವಿರ ಬೆಲೆ ಇದೆ.ಇದರಿಂದ ವ್ಯಾಪಾರಿಗಳು ಮಾರಾಟ ಮಾಡಲು ಹೈರಾಣಾಗುತ್ತಿದ್ದಾರೆ.
ಸ್ಥಳೀಯ నింಬೆ ಹಣ್ಣು ಕೊರತೆ ಇರುವುದರಿಂದ ಆಂಧ್ರಪ್ರದೇಶದಿಂದ ತಮಿಳುನಾಡು ಅಮದು ಮಾಡಿಕೊಳ್ಳಲಾಗುತ್ತಿದೆ.
ಕಳೆದ ಎರಡು ತಿಂಗಳ ಹಿಂದೆ ಒಂದು ನಿಂಬೆಹಣ್ಣು ದಪ್ಪ ಗಾತ್ರ 3 ರೂ ಗೆ ಮಾರಾಟವಾಗುತ್ತಿತ್ತು ಈಗ ಅದರ ಬೆಲೆ 8-10 ರೂ.ಆಗಿದೆ.
ಬೇಸಿಗೆ ಆಗಿದ್ದರಿಂದ ನಿಂಬೆಕಾಯಿ ಬೇಗನೇ ಹಣ್ಣಾಗುತ್ತಿಲ್ಲ.ಕಾಯಿಗೂ ಬೇಡಿಕೆ ಬಂದಿದೆ. ಪರಿಣಾಮ ಮಾರುಕಟ್ಟೆಯಲ್ಲಿ ಅಧಿಕ ದರದಲ್ಲಿಮಾರಾಟ ಮಾಡಲಾಗುತ್ತಿದೆ.ಇದರಿಂದ ನಾವು ಹೆಚ್ಚಿನ ಬೆಲೆಗೆ ಮಾರಾಟ ಮಾಡದೆ ವಿಧಿ ಇಲ್ಲ ಎನ್ನುತ್ತಾರೆ ಮಂಜಣ್ಣ ಗೊಲ್ಲರಹಳ್ಳಿ
ನಿಂಬೆಹಣ್ಣು ವ್ಯಾಪಾರಿ 20 ರೂ.ಗೆ 3 ನಿಂಬೆಹಣ್ಣು, ಮಧ್ಯಮ ಗಾತ್ರ 20 ರೂ.ಗೆ ಮೂರು ನಿಂಬೆಹಣ್ಣು ಮಾರಾಟ ಆಗುತ್ತಿದೆ.ದೊಡ್ಡ ಗಾತ್ರದ ನಿಂಬೆ ಒಂದಕ್ಕೆ 8-10 ರೂ.ಮಾರಾಟವಾಗುತ್ತಿದೆ.
ಈ ಮುಂಚೆ ಚಿಲ್ಲರೆ ಅಂಗಡಿ,ಸಣ್ಣಪುಟ್ಟ ತರಕಾರಿ ಅಂಗಡಿಗಳಲ್ಲೂ ಮಾರಾಟಕ್ಕೆ ಇಡಲಾಗಿತ್ತು.ಆದರೆ, ಈಗ ದೊಡ್ಡ ತರಕಾರಿ ಅಂಗಡಿಗಳಲ್ಲಿ ಮಾತ್ರ ಸಿಗುತ್ತಿದೆ. ಸಣ್ಣ ಸಣ್ಣ ಅಂಗಡಿಗಳಲ್ಲಿ ನಿಂಬೆಹಣ್ಣು ಮಾಯವಾಗಿವೆ ಉಳಿದಂತೆ ಮಾರುಕಟ್ಟೆಯಲ್ಲಿ ಮಾತ್ರ ನಿಂಬೆಹಣ್ಣು ಸಿಗುತ್ತಿದೆ.

ಕಾಯಿಗೂ ಬಂತು ಬೆಲೆ:ಒಂದು ಗೋಣಿ ಚೀಲದಲ್ಲಿ ನಿಂಬೆಹಣ್ಣಿನ ಜೊತೆಗೆ ಕಾಯಿಯೂ ಸ್ಥಾನ ಪಡೆದಿದೆ. ಬೇಸಿಗೆಯಲ್ಲಿ ಬೇಡಿಕೆ ಇರುವುದರಿಂದ ರೈತರು ಹಣ್ಣು ಕಾಯಿ ಕೂಡಾ ಮಿಕ್ಸ್ ಮಾಡಿ ಚೀಲ ತುಂಬಿ ಬಿದ್ದು
ಮಾಡುತ್ತಾರೆ ಸಣ್ಣಗಾತ್ರದ ನಿಂಬೆ 1,000 ಇದ್ದರೆ, ದೊಡ್ಡ ಗಾತ್ರದ 800 ನಿಂಬೆ ಇರುತ್ತವೆ.ಇವುಗಳಲ್ಲಿ ಅರ್ಧದಷ್ಟು ಕಾಯಿಗಳೇ ಇರುತ್ತವೆ ಅನಿವಾರ್ಯ ವಾಗಿ ಖರೀದಿ ಮಾಡಲೇಬೇಕು ಎಂದು ವ್ಯಾಪಾರಿಗಳು ಹೇಳುತ್ತಾರೆ.
ಬೇಸಿಗೆಯಲ್ಲಿ ದೇಹ ತಂಪು ಮಾಡಿಕೊಳ್ಳಲು ನಿಂಬೆಹಣ್ಣು ಬೇಕಿದ್ದವರು ಎಷ್ಟೇ ಬೆಲೆ ಯಾದ್ರು ಹುಡಿಕಿಕೊಂಡು ಬರುತ್ತಾರೆ ಎನ್ನುತ್ತಾರೆ ನಿಂಬೆ ವ್ಯಾಪಾರಿಯೊಬ್ಬರು.ನಿಂಬೆಹಣ್ಣು ಮಾರಾಟ ಮಾಡುವ ಮಾರುಕಟ್ಟೆಗಳಲ್ಲಿ ಗ್ರಾಹಕರು ವ್ಯಾಪಾರಿಗಳಲ್ಲಿ ಚೌಕಾಶಿ ಮಾಡುವುದು ಸಾಮಾನ್ಯವಾಗಿದೆ.ಕೆಲವರು 20 ರೂ.ಗೆ 5 ನಿಂಬೆ ಕೇಳುತ್ತಾರೆ.ಇನ್ನೂ ಕೆಲವರು 4 ಕೇಳುತ್ತಾರೆ.

ನಿಂಬೆಹಣ್ಣು ಮಾರಾಟದಿಂದ ಯಾವುದೇ ಲಾಭ ಸಿಗುತ್ತಿಲ್ಲ.ಬಂಡವಾಳ ಅದಕ್ಕೆ ಸರಿಹೋಗುತ್ತಿದೆ. ಎರಡು ದಿನ ಬಿಟ್ಟರೆ ನಿಂಬೆಹಣ್ಣು ಕೆಟ್ಟು ಹೋಗುತ್ತಿವೆ. ಇದರಿಂದ ನಿಂಬೆಹಣ್ಣು ಮಾರಾಟ ಎನ್ನುತ್ತಾರೆ ಹೈರಾಣಾಗಿದೆ

ನಿಂಬೆಹಣ್ಣು ಚಿಲ್ಲರೆ ವ್ಯಾಪಾರಿಗಳು.ಕರ್ನಾಟಕದಲ್ಲಿ ವಿಜಯಪುರ ಅತಿ ಹೆಚ್ಚು ಲೆಮನ್ ಟೀ ಗೂ ಬಳಸುತ್ತಾರೆ

ನಿಂಬೆ ಬೆಳೆಯುವ ಜಿಲ್ಲೆಯಾಗಿದೆ.ರಾಜ್ಯ ತೋಟಗಾರಿಕಾ ಇಲಾಖೆಯ ಮಾಹಿತಿಯ ಪ್ರಕಾರ, ಕರ್ನಾಟಕವು ವಾರ್ಷಿಕವಾಗಿ ಮೂರು ಲಕ್ಷ ಟನ್ ನಿಂಬೆಹಣ್ಣು ಉತ್ಪಾದಿಸುತ್ತದೆ,ಅದರಲ್ಲಿ ವಿಜಯಪುರವು 2 ಲಕ್ಷ ಟನ್ಗಳನ್ನು ನೀಡುತ್ತದೆ. ರಾಜ್ಯದಲ್ಲಿ 21,000 ಹೆಕ್ಟೇರ್‌ನಲ್ಲಿ ನಿಂಬೆ ಬೆಳೆಯುತ್ತಿದ್ದರೆ,ವಿಜಯಪುರದಲ್ಲಿ 16,000 ಹೆಕ್ಟೇರ್‌ನಲ್ಲಿ ಬೆಳೆಯಲಾಗಿದೆ.ಕೊಡಗಿನಲ್ಲಿ ಕಾಫಿ ಬೆಳೆಗಾರರು ಎಸ್ಟೇಟ್ ಗಳಲ್ಲಿ ನಿಂಬೆಯನ್ನು ಮಿಶ್ರ ಬೆಳೆಯಾಗಿ ಬೆಳೆಯುತ್ತಾರೆ.
ಆದರೆ ರಾಜ್ಯದಲ್ಲಿ ಅನುಗುಣವಾಗಿ ಉತ್ಪಾದನೆ ಆಗುತ್ತಿಲ್ಲ. ಇದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.
ಹೊನ್ನಾಳಿಯ ಸಂಪಿಗೆ ರೋಡ್,ಸಂತೆ ರಸ್ತೆ,T,M
ರಸ್ತೆ ಉಡುಪಿ ಟೀ ಸ್ಟಾಲ್ ಮಾಲೀಕರಾದ ರವಿಕುಮಾರ್ ಹೇಳುತ್ತಾರೆ ಅರ್ಧ ನಿಂಬೆಹಣ್ಣು ಲೆಮನ್ ಟೀ ಹಾಕುತ್ತೇವೆ ನಮಗೆ ಲಾಭದ ಅಂಶ ಇಲ್ಲವೇ ಇಲ್ಲವಾಗಿದೆ ಎಂದು ಅಭಿಪ್ರಾಯವನ್ನು ಹಂಚಿಕೊಂಡರು.

ವರದಿ-ಪ್ರಭಾಕರ ಡಿ ಎಂ ಹೊನ್ನಾಳಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ