ಶ್ರೀರಂಗಪಟ್ಟಣದಲ್ಲಿ ಸುತ್ತುವರಿದ ಕಾವೇರಿಯ ನಡುವೆ ದ್ವೀಪದಂತೆ ಶ್ರೀರಂಗನಾಥ ಸ್ವಾಮಿ ದೇವಾಲಯ ನೆಲೆಸಿದೆ ಹಿಂದೆ ಶ್ರೀರಂಗಪುರಿ,ಲಕ್ಷೋದ್ಯಾನ ಪುರಿ ಎಂದು ಈಗ ಶ್ರೀರಂಗಪಟ್ಟಣ ಎಂದು ಪ್ರಸಿದ್ಧವಾಗಿದೆ.ಇರುವ ದೇವಾಲಯಗಳಲ್ಲಿ ಶ್ರೀರಂಗನಾಥನ ದೇವಾಲಯವು ದೊಡ್ಡ ಗೋಪುರದಿಂದ ಕೂಡಿದ್ದು ಮೂರು ಪ್ರಕಾರವುಳ್ಳ ದೊಡ್ಡ ದೇವಾಲಯ ಇದು.
ಹಲವು ರಾಜರ ಆಳ್ವಿಕೆ ಕಾಲದಲ್ಲಿ ಮಾರ್ಪಾಡುಗಳಿಂದ ಕಟ್ಟಲ್ಪಟ್ಟಿದೆ ದೇವಸ್ಥಾನದ ಗರ್ಭಗೃಹವು ವ್ಯೆಶ್ಯೆಜಾತಿಯ ‘ಹಂಪಿ’ಎಂದು ಪ್ರಸಿದ್ಧವಾಗಿದ್ದ ಹೆಂಗಸಿನಿಂದ ಕ್ರಿ.ಶ 817ರಲ್ಲಿ ಕಟ್ಟಲ್ಪಟ್ಟಿತು.ಕ್ರಿಸ್ತಶಕ 894 ರಲ್ಲಿ ಗಂಗರ ಅರಸ ತಿರುಮಲರಾಯನಿಂದ ನವರಂಗ ಮಂಟಪದ ಮತ್ತು ಮಹಾದ್ವಾರದ ಎಡಪಾರ್ಶ್ವದ ತಿರುಮಲ ದೇವರನ್ನು ಪ್ರತಿಷ್ಠಾಪಿಸಿದರು.ಕ್ರಿ.ಶ ೧೧೧೭ರಲ್ಲಿ ಶ್ರೀ ರಾಮಾನುಜಾಚಾರ್ಯರು ಹೊಯ್ಸಳ ದೊರೆ ವಿಷ್ಣುವರ್ಧನನಿಂದ ಅನೇಕ ಸಂಪತ್ತುಗಳನ್ನು ಪಡೆದು ಶ್ರೀರಂಗನಾಥ ಸೇವೆಗೆ ಮೀಸಲಾಗಿಟ್ಟರು.ಅದು ಕ್ರಿ,ಶ1454 ರಲ್ಲಿ ತಿಮ್ಮಣ್ಣ ಎಂಬ ಹೆಬ್ಬಾರನಿಂದ ದೇವಸ್ಥಾನದ ಹೊರ ಗೋಡೆ,ದೊಡ್ಡ ಗೋಪುರದಿಂದ ಮಹಾ ದ್ವಾರಕಟ್ಟಿಸಿದನು ನಂತರ ವಿಜಯನಗರದ ಆಳ್ವಿಕೆಯಲ್ಲಿ ಶ್ರೀರಂಗರಾಯನು ಶ್ರೀರಂಗನಾಥ ದೇವಾಲಯದ ಒಳ ಪ್ರಕಾರ ಮುಂಭಾಗದ ಕೈಸಾಲೆ ಮಂಟಪ ಮಹಾ ದ್ವಾರಕೆ 5 ಮೆಟ್ಟಿಲು ಎರಡು ಕಡೆ ಕಲ್ಲಿನಿಂದ ಕೆತ್ತಿದ ಆನೆಯನ್ನು ಇರಿಸಿದನು.ಇವರ ನಂತರ ಯದುರಾಯರ ವಂಶದ ರಾಜ ಒಡೆಯರಿಗೆ ರಾಜ್ಯವನ್ನು ಒಪ್ಪಿಸಲಾಯಿತು.ಕ್ರಿ.ಶ 1610 ರಲ್ಲಿ ರಾಜ ಒಡೆಯರ ಕೈಗೆ ಶ್ರೀರಂಗಪಟ್ಟಣ ಸೇರಿತು.ಕ್ರಿಸ್ತಶಕ ೧೭೯೯ರಲ್ಲಿ ಮೈಸೂರಿನ ರಾಜಧಾನಿ ಶ್ರೀರಂಗಪಟ್ಟಣವಾಗಿತ್ತು,ಇಮ್ಮಡಿ ಕೃಷ್ಣರಾಜ ಒಡೆಯರ್ ಒಡೆಯರು ಐದರಲಿಯನ್ನು ‘ಸರ್ವಾಧಿಕಾರಿ’ಯಾಗಿ ಮಾಡಿದರು.ಈತನು ಶ್ರೀರಂಗನಾಥನ ದೈವಭಕ್ತ ಹಾಗೂ ರಾಜಭಕ್ತನಾಗಿದ್ದನು ಕ್ರಿಸ್ತಶಕ ೧೭೮೨ ರಲ್ಲಿ ಟಿಪ್ಪು ಸರ್ವಾಧಿಕಾರ ವಹಿಸಿಕೊಂಡನು.ಸಾಕಷ್ಟು ಐತಿಹ್ಯ, ರಹಸ್ಯ,ಕಥೆಗಳನ್ನು ಹೊಂದಿರುವ” ಶ್ರೀರಂಗನಾಥ ಸ್ವಾಮಿ ದೇವಾಲಯ”ವನ್ನು ಸಾವಿರಾರು ಜನರು ವೀಕ್ಷಿಸಲು ಬರುತ್ತಿರುತ್ತಾರೆ.
ಲೇಖನ:ಚೇತನ್ ಕುಮಾರ್ ಎಂ.ಕೆ.ಮೈಸೂರು.