ದಾವಣಗೆರೆ ಜಿಲ್ಲೆ ಹೊನ್ನಾಳಿ ಪಟ್ಟಣದಲ್ಲಿರುವ ಆಸ್ಪತ್ರೆ ಸಿಬ್ಬಂದಿ ಮತ್ತು ವೈದ್ಯರು ನಿನ್ನೆ ಮಾನ್ಯ ಉಪ ವಿಭಾಗ ಅಧಿಕಾರಿ ಅವರಿಗೆ ಮನವಿಯನ್ನ ಸಲ್ಲಿಸಿದರು.
ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳು ದಿನಾಂಕ 16,/ 3/2024 ರ ಸುಮಾರು ರಾತ್ರಿ 7:00 45 ನಿಮಿಷದ ಸಮಯದಲ್ಲಿ ಮಹಮ್ಮದ್ ಶಕೀಲ್ ಇವರ ಮಗನಾದ ಮಹಮ್ಮದ್ ಅಸೀದ್ ಮೂರು ವರ್ಷದ ಮಗುವನ್ನು ಆಸ್ಪತ್ರೆ ಚಿಕಿತ್ಸೆಗಾಗಿ ಕರೆದುಕೊಂಡು ಬಂದಿದ್ದು ಕರ್ತವ್ಯ ನಿರ್ವಹಿಸುತ್ತಿದ್ದ ಡಾ.ಯೋಗೇಶ್,ಡಾ.ಮನೋಜ್ ಇವರು CRP ECG ಮುಂತಾದ ಅವಶ್ಯಕತೆ ಇರುವ ಎಲ್ಲಾ ಚಿಕಿತ್ಸೆಗಳನ್ನು ಪರೀಕ್ಷೆಗಳನ್ನು ಮಾಡಿರುತ್ತೇವೆ ನಂತರ ಮಗು ಮೃತಪಟ್ಟಿರುವುದಾಗಿ ಕುಟುಂಬಸ್ಥರಿಗೆ ತಿಳಿಸಿದ್ದಾರೆ
ನಂತರ ಮಗುವಿನ ಕಡೆಯವರು ಮಗುವನ್ನು ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ/ನಂತರ ಮಗುವಿನ ಕಡೆಯವರು ಸುಮಾರು ರಾತ್ರಿ 8:30ರ ಸಮಯಕ್ಕೆ ಪುನಃ ಬಂದು 300 ರಿಂದ 400 ಜನ ಗುಂಪು ಆಸ್ಪತ್ರೆಯ ಕರ್ತವ್ಯ ನಿರ್ವಹಿಸುತ್ತಿದ್ದ ವೈಜ್ಞರು ಮತ್ತು ಸಿಬ್ಬಂದಿಗಳ ಮೇಲೆ ಅವಾಚ ಶಬ್ದಗಳಿಂದ ಪ್ರಯತ್ನಪಟ್ಟಿರುತ್ತಾರೆ ಹಾಗೂ ಆಸ್ಪತ್ರೆಯ ಆಸ್ತಿಪಾಸ್ತಿಯ ಹಾನಿ ಮಾಡಿರುತ್ತಾರೆ
ಈ ಸನ್ನಿವೇಶದಿಂದ ನಾವುಗಳು ಕರ್ತವ್ಯ ನಿರ್ವಹಿಸಲು ಭಯಭೀತರಾಗಿದ್ದೇವೆ ಆದ್ದರಿಂದ ಮುಂದಿನ ದಿನಗಳಲ್ಲಿ ಹಾಗೆ ಆಗದಂತೆ ಸುಗಮವಾಗಿ ಕರ್ತವ್ಯ ನಿರ್ವಹಿಸಲು ಅನುವು ಮಾಡಿಕೊಡುವಂತೆ ಮನವಿಯನ್ನು ಸಲ್ಲಿಸಿದರು
ಈ ಸಂದರ್ಭದಲ್ಲಿ ಡಾ.ಯೋಗೀಶ್,ಮನೋಜ್ ಡಾಕ್ಟರ್ ಶಾಂತಕುಮಾರಿ ಡಾಕ್ಟರ್ ಚೇತನ್ ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.
ವರದಿ ಪ್ರಭಾಕರ್ ಡಿ.ಎಂ