ಬೀದರ್:ಇಂದು ಬೀದರ್ ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಕಾಲೇಜಿನಲ್ಲಿ ಯುವ ಸ್ಪಂದನ ಅರಿವು ಕಾರ್ಯಕ್ರಮ ಮತ್ತು ಜೀವನ ಕೌಶಲ್ಯದ ಒಂದು ದಿನದ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು,ಈ ಕಾರ್ಯಕ್ರಮವನ್ನು ಸಸಿಗೆ ನೀರು ಏರೆಯುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು.ಈ ಕಾರ್ಯಕ್ರಮವನ್ನು ಉದ್ದೇಶಿಸಿ ಉಮಾಕಾಂತ ಮೀಸೆ ಸರ್ ಅವರು ಜೀವನ ಕೌಶಲ್ಯದ ೧೦ ವಿಷಯಗಳನ್ನು ಕೂಲಂಕುಷವಾಗಿ ವಿಧ್ಯಾರ್ಥಿಗಳಿಗೆ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಯುವ ಸಮಾಲೋಚಕರಾದ ಜೈಭೀಮ್ ಅವರು ಯುವ ಸ್ಪಂದನ ಅರಿವು ಕಾರ್ಯಕ್ರಮದ ಕುರಿತು ಮಾತನಾಡಿದರು.ಜೀವನ ಕೌಶಲ್ಯದ ತರಬೇತಿಯನ್ನು ವಿವಿಧ ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ವಿಧ್ಯಾರ್ಥಿಗಳಿಗೆ ಅಂಬರೀಷ್ ಮತ್ತು ಅರುಣ ಅವರು ಕ್ರಿಯಾತ್ಮತ ಚಟುವಟಿಕೆಯ ಮೂಲಕ ತಿಳಿಸಿಕೊಟ್ಟರು. ಸತೀಶ್ ಬಡಿಗೇರ್ ಅವರು ಯುವ ಸ್ಪಂದನ ಅರಿವು ಕಾರ್ಯಕ್ರಮದ ೬ ವಿಷಯ ಗಳ ಬಗ್ಗೆ ಹಾಗೂ ಸಂಭಂದಗಳ ಕುರಿತಾಗಿ ಮಾತನಾಡಿದರು.ಪೋಷಕರೊಂದಿಗೆ ಸಂಬಂಧ,ಗೆಳೆಯರೊಂದಿಗೆ ಸಂಬಂಧ,ವೈವಾಹಿಕ ಸಂಬಂಧ,
ಸುರಕ್ಷತೆ,ರಸ್ತೆ ನಿಯಮಗಳ ಬಗ್ಗೆ ಸುರಕ್ಷತೆ,ಕಾನೂನಿನ ಬಗ್ಗೇ ಸುರಕ್ಷತೆ
ಶಿಕ್ಷಣ,ನೆನಪಿನ ಶಕ್ತಿ,ವೇದಿಕೆಯ ಭಯ,ಗುರಿ ನಿರ್ಧಾರ,ಸಮಯ ಪಾಲನೆ, ವ್ಯಕ್ತಿತ್ವ ವಿಕಸನ, ಸ್ವ ಅರಿವು,ಆತ್ಮ ಗೌರವ,ಭಾವನಾತ್ಮಕ ಸಮಸ್ಯೆಗಳು,ಆರೋಗ್ಯ ಮತ್ತು ಜೀವನ ಶೈಲಿ,ದೈಹಿಕ,ಮಾನಸಿಕ ಮತ್ತು ಆಧ್ಯಾತ್ಮಿಕ ಯೋಗಕ್ಷೇಮ, ವ್ಯಸನದೊಂದಿಗೆ ವ್ಯವಹರಿಸುವುದು,
ಲಿಂಗ , ಲಿಂಗತ್ವ ಮತ್ತು ಲೈಂಗಿಕತೆ,
ತಾರತಮ್ಯ ಸಮಸ್ಯೆಗಳು,ಲಿಂಗಾಧಾರಿತ ಹಿಂಸೆ,
ಲೈಂಗಿಕ ದೌರ್ಜನ್ಯ,ಲೈಂಗಿಕವಾಗಿ ಹರಡುವ ಸೋಂಕುಗಳು ,
ಇಂತಹ ಅನೇಕ ರೀತಿಯ ಸಮಸ್ಯೆಗಳು ಇಂದಿನ ಯುವ ಜನರಲ್ಲಿ ನಾವು ಅತಿ ಹೆಚ್ಚಿನ ಸಂಖ್ಯೆಯಲ್ಲಿ ನೋಡಬಹುದಾಗಿದೆ ಹಾಗಾಗೀ ಇಂತಹ ಸಮಸ್ಯಗಳಿಗೆ ನಮ್ಮ ಯುವ ಸ್ಪಂದನ ಕೇಂದ್ರದಲ್ಲಿ ಅವರಿಗೆ ಸಮಾಲೋಚನೆ ಮಾಡಿ ಮಾರ್ಗದರ್ಶನ ನೀಡುತ್ತೇವೆ ಹಾಗೆ ಕಾಲೇಜಿನ ಪ್ರಾಂಶುಪಾಲರಾದ ಲಕ್ಷ್ಮಿಕಾಂತ್ ಸರ್ ಕಾರ್ಯಕ್ರಮ ಅಧ್ಯಕ್ಷೀಯ ಭಾಷಣವನ್ನು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ
ಮುಖ್ಯ ಅತಿಥಿಗಳಾಗಿ ಜೈಭೀಮ್ ಯುವ ಸಮಾಲೋಚಕರು ಯುವ ಸ್ಪಂದನ ಕೇಂದ್ರ ಬೀದರ್,
ಜೀವನ ಕೌಶಲ್ಯದ ತರಬೇತುದಾರರಾದ ಅಂಬರೀಷ್ ಸಂತಪುರೆ
ಯುವ ಪರಿವರ್ತಕರು ಭಾಲ್ಕಿ ಹಾಗೂ ಅರುಣ್ ಯುವ ಪರಿವರ್ತಕರು ಔರಾದ್,
ಕಾರ್ಯಕ್ರಮದ ಸಂಯೋಜಕರಾದ ಸತೀಶ್ ಬಡಿಗೇರ್ ಯುವ ಪರಿವರ್ತಕರು ಬೀದರ್, ಹಾಗೂ ಈ ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ ಕಾಲೇಜಿನ ಪ್ರಾಂಶುಪಾಲರಾದ ಲಕ್ಷ್ಮಿಕಾಂತ್ ಸರ್ ಹಾಗೂ ಕಾಲೇಜಿನ ಸಿಬ್ಬಂದಿ ಮತ್ತು ಕಾರ್ಯಕ್ರಮದ ಕೇಂದ್ರ ಬಿಂದುಗಳಾದ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ:ರೋಹನ್ ವಾಘಮಾರೆ