ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕುಡಿಯುವ ನೀರಿಗಾಗಿ ಅಸ್ತೂರು ಗ್ರಾಮದಲ್ಲಿ ಮತದಾನ ಬಹಿಷ್ಕಾರದ ಎಚ್ಚರಿಕೆ:ಅಸ್ತೂರು ರವಿಕುಮಾರ್ ಪ್ರತಿಕ್ರಿಯೆ

ಹನೂರು:ಮೂಲಭೂತ ಸೌಲಭ್ಯಗಳಲ್ಲೊಂದಾದ‌ ಕುಡಿಯುವ ನೀರನ್ನು ಪ್ರಧಾನ ಮಂತ್ರಿಯವರು ಪ್ರತಿ ಮನೆಗೂ ತಲುಪಿಸುವ ಉದ್ದೇಶದಿಂದ ಸಾವಿರಾರು ಕೋಟಿ ಹಣ ವ್ಯಯಿಸಿ ಪ್ರತಿ ಮನೆಗೂ ತಲುಪಿಸುವ ಯೋಜನೆ ಕೈಗೊಂಡಿರುವುದು ಸ್ವಾಗತ ಆದರೆ ನಮ್ಮ ಗ್ರಾಮದಲ್ಲಿ ಶೀತಿಲಾವಸ್ಥೆಗೆ ತಲುಪಿರುವ ನೀರಿನ ಹಳೆಯ ಟ್ಯಾಂಕ್ ಗೆ ತೇಪೆ ಹಾಕಿ ಕೈತೊಳೆದುಕೊಂಡಿದ್ದಾರೆ ಆದ್ದರಿಂದ ನಮಗೆ ನಮ್ಮ ಬೇಡಿಕೆ ಈಡೇರಿಸುವವರೆಗೂ ಮತದಾನ ಮಾಡದಿರಲು ತೀರ್ಮಾನಿಸಿದ್ದೇವೆ ಎಂದು ಯುವ ಮುಖಂಡ ರವಿಕುಮಾರ್ ತಿಳಿಸಿದರು.
ಹನೂರು ತಾಲ್ಲೂಕು ಅಸ್ತೂರು ಗ್ರಾಮದಲ್ಲಿ ಕುಡಿಯುವ ನೀರಿನ ವಿಷಯವಾಗಿ ಸಂಬಂಧಿಸಿದ ಹಾಗೆ ಕಳೆದ ಆರು ತಿಂಗಳಿಂದ ಮನೆಮನೆಗೆ ನೀರು ನೀಡುವ ಯೋಜನೆಯಲ್ಲಿ ಸಾಕಷ್ಟು ಹಣ ವ್ಯಯಿಸಿದ್ದು ಅದರಲ್ಲಿ ಭಾರೀ ಪ್ರಮಾಣದ ಅಕ್ರಮದ ವಾಸನೆ ಕಾಣುತ್ತಿದ್ದು ಸ್ಥಳೀಯ ಜನಪ್ರತಿಗಳಿಂದಿಡಿದು ಅಧಿಕಾರಿ ವರ್ಗದವರೆಗೂ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಅನುಮಾನ ಮೂಡುತ್ತಿದೆ ನಮಗೆ ಗ್ರಾಮದಲ್ಲಿ ಕುಡಿಯುವ ನೀರಿನ ತೊಂಬೆಯು ಶಿಥಿಲಾವಸ್ಥೆ ತಲುಪಿದ್ದು ಗ್ರಾಮಕ್ಕೆ ನೂತನ ನೀರಿನ ಟ್ಯಾಂಕ್ ನ ಅವಶ್ಯಕತೆಯಿದೆ ಅಲ್ಲದೆ ಬೋರ್ ವೆಲ್ ಗಳ ಅವಶ್ಯಕತೆಯಿದೆ ಈಗಾಗಲೇ ಸಾಕಷ್ಟು ಬಾರಿ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಿಲ್ಲ ಆದ್ದರಿಂದ ಮುಂದಿನ ದಿನಗಳಲ್ಲಿ ಲೋಕಸಭಾ ಚುನಾವಣಾ ಸಮಯದಲ್ಲಿ ಮತದಾನ ಬಹಿಶ್ಕಾರ ಮಾಡಲು ತೀರ್ಮಾನಿಸಲಾಗುವುದು ಎಂದು ಗ್ರಾಮದ ಯುವ ಮುಖಂಡರಾದ ರವಿಕುಮಾರ್ ತಿಳಿಸಿದರು.
ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಹನೂರು ತಾಲೂಕಿನ ಅಸ್ತೂರು ಗ್ರಾಮದಲ್ಲಿ ಈ ಹಿಂದೆಯೇ ಗ್ರಾಮಸ್ಥರುಗಳ ಸಮ್ಮುಖದಲ್ಲಿ ಕುಡಿಯುವ ನೀರಿನ ಅವಶ್ಯಕತೆಯನ್ನು ಮನಗಂಡು ನೂತನ ಟ್ಯಾಂಕ್ ನಿರ್ಮಾಣ ಹಾಗೂ ಎರಡು ಬೋರ್ ವಲ್ ಕೊರೆಸಲು ನಾವು ಅಧಿಕಾರಿಗಳಿಗೆ ಮನವಿ ನೀಡಿದ್ದೆವು ಆದರೆ ಮುಂದಿನ ದಿನಗಳಲ್ಲಿ ಹಬ್ಬಹರಿದಿನ ಬರುವುದರಿಂದ ನಮಗೆ ನೀರಿನ ಅವಶ್ಯಕತೆಯಿದೆ ಆದರೆ ಇದುವರೆಗೂ ಗ್ರಾಮದಲ್ಲಿ ಸಮಸ್ಯೆ ಇತ್ಯರ್ಥ ಮಾಡಲು ಅಧಿಕಾರಿಗಳು ಕಾರ್ಯೋನ್ಮುಖರಾಗದ ಕಾರಣ ನಾವು ಮುಂದಿನ ಲೋಕಸಭಾ ಚುನಾವಣಾ ಮತದಾನ ನಡೆಯುವ ದಿನ ಮತದಾನವನ್ನು ಬಹಿಷ್ಕಾರ ಮಾಡಲು ಗ್ರಾಮದಲ್ಲಿನ ಕೆಲವರು ತೀರ್ಮಾನಿಸಿದ್ದೇವೆ ಎಂದು ಗ್ರಾಮದ ಮುಖಂಡರಾದ ಉದ್ಯಮಿ ಬೆಂಗಳೂರು ನಾಗೇಶ್ ತಿಳಿಸಿದರು.
ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷರಾದ ಎಸ್ ಕೋಟೇಬಸಪ್ಪ ಮಾತನಾಡಿ ನಮ್ಮ ಗ್ರಾಮದಲ್ಲಿ ಸರಿಯಾದ ಚರಂಡಿಗಳಿಲ್ಲದೆ ರಸ್ತೆಗಳಲ್ಲೇ ನೀರು ಹರಿಯುತ್ತಿದ್ದು ಹಬ್ಬಗಳನ್ನು ಮಾಡುವಾಗ ಹೆಚ್ವು ಜನಸಂಖ್ಯೆ ಸೇರುತ್ತವೆ ಇದೇ ವಿಷಯವಾಗಿ ಸಂಭಂದಿಸಿದ ಅಧಿಕಾರಿಗಳಿಗೆ ತಿಳಿಸಿದರೆ ಯಾವುದೇ ಪ್ರಯೋಜನವಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡರು.ಇದೇ ವಿಷಯವಾಗಿ ಮಾತನಾಡಿದ ಮತ್ತೋರ್ವ ಮುಖಂಡ ದಾಸಪ್ಪ ನಮ್ಮ ಗ್ರಾಮದಲ್ಲಿ ಇದುವರಿಗೂ ಹಲವಾರು ಸಮಸ್ಯೆಗಳಿದ್ದವು ನಮ್ಮ ಗ್ರಾಮದ ಯುವಕರ ಜೊತೆಗೂಡಿ ನಾವೆಲ್ಲ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಿದ್ದೆವೆ ಅದಾಗಿಯು ಅಧಿಕಾರಿಗಳು ನಮ್ಮ ಗ್ರಾಮದ ಮೂಲಭೂತ ಸೌಕರ್ಯಗಳ ಬಗ್ಗೆ ಹೆಚ್ಚಿನ ಒತ್ತು ನೀಡದೆ ಕಾಲಹರಣ ಮಾಡುತ್ತಿದ್ದಾರೆ ಇದರಿಂದ ಬೇಸತ್ತು ನಾವು ಮತದಾನದಿಂದ ಹೊರಗುಳಿಯಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.
ಇದೇ ಸಮಯದಲ್ಲಿ ಪೊನ್ನಾಚಿ ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷರಾದ ಎಸ್ ಕೋಟೆಬಸಪ್ಪ, ಪುರೋಹಿತರಾದ ಕೆಂಪರಾಜು ಸೇರಿದಂತೆ ಇನ್ನಿತರರು ಹಾಜರಿದ್ದರು.

ವರದಿ:ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ