ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಅನಧಿಕೃತ ಮದ್ಯ ಮಾರಾಟದ ಡಾಬಾಗಳಿಗೆ ಕಡಿವಾಣ ಯಾವಾಗ?

ರಾಯಚೂರು/ಮುದಗಲ್:ಮದ್ಯ ಮಾರಾಟ ಮಾಡುವ ಹಗಲು ದರೋಡೆ ಡಾಭಾಗಳು ಯಾರ ಅನುಮತಿ ಪಡೆದುಕೊಂಡು ಇಷ್ಟು ರಾಜಾರೋಷವಾಗಿ
ಈ ಮಾರಾಟ ದಂಧೆಯನ್ನು ನಡೆಸುತ್ತಿವೆ?
ಮುದಗಲ್ ನಿಂದ ಲಿಂಗಸುಗೂರು ಮಾರ್ಗದ ಕೆಲವು ಡಾಭಾಗಳು,ಮುದುಗಲ್ ನಿಂದ ಇಲಕಲ್ ಮಾರ್ಗದ ಕೆಲವು ಡಾಭಾಗಳು,ಮುದಗಲ್ ನಿಂದ ತಾವರಗೇರಾ ಮಾರ್ಗದ ಕೆಲವು ಡಾಭಾಗಳು,ಒಟ್ಟು ಸುಮಾರು 15 ರಿಂದ 20 ಡಾಬಾಗಳು ಮುದಗಲ್ ಪುರಸಭೆ ವ್ಯಾಪ್ತಿಯಲ್ಲಿದ್ದಾವೆ.ಇವುಗಳಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ರಾಯಚೂರು ಇವರಿಂದ ಪರವಾನಿಗೆ ಮತ್ತು ನೋಂದಣಿ ಮಾಡಿಸಿದ ಡಾಭಾಗಳೆಷ್ಟು?ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ಪ್ರಕಾರ ಪರವಾನಿಗೆ ಹಾಗೂ ನೋಂದಣಿ ಇಲ್ಲದಿದ್ದರೆ 5 ಲಕ್ಷ ದಂಡ ಹಾಗೂ ಆರು ತಿಂಗಳ ಸೆರೆವಾಸ ಸರಕಾರದ ಕಟ್ಟುನಿಟ್ಟಿನ ನಿಯಮದ ನಡುವೆಯೂ ಯಾವುದೇ ಭಯವಿಲ್ಲದೆ ಸರಕಾರದ ಅನುಮತಿ ಇಲ್ಲದೆ ಅನೇಕ ಡಾಭಾಗಳು ತಲೆ ಎತ್ತುತ್ತಿವೆ ಈ ಡಾಬಾಗಳ ಹೊರಗೆ ಕೇವಲ ಊಟ ಮತ್ತು ಉಪಹಾರ ಎಂದು ಬೋರ್ಡ್ ಇರುತ್ತದೆ ಆದರೆ ಒಳಗಿನ ಸನ್ನಿವೇಶವೇ ಬೇರೆ,ಮದ್ಯ ಮಾರಾಟವಿರುತ್ತದೆ,ಮದ್ಯವಿಲ್ಲದ ಡಾಬಾಗಳೇ ಇಲ್ಲ ಎನ್ನಬಹುದು ಕಾರಣ ಮದ್ಯಪ್ರಿಯರು ಊಟಕ್ಕೆ ಮೊದಲು ಮದ್ಯವನ್ನು ಕೇಳುತ್ತಾರೆ ಪ್ರತಿಯೊಂದು ಡಾಬಾದಲ್ಲಿ ಮದ್ಯಪಾನವಿರಲೇಬೇಕು ಇವುಗಳ ಪರವಾನಿಗೆ,ಗುಣಮಟ್ಟ,ಬೆಲೆಯನ್ನು ಬೇಕಾಬಿಟ್ಟಿಯಾಗಿ ನಿರ್ಧಾರ ಮಾಡುವವರು ಈ ಡಾಬಾಗಳ ಮಾಲೀಕರೇ ಎನ್ನುವುದೇ ಆಶ್ಚರ್ಯ.
ಡಾಬಾಗಳಿಗೆ ಕೇವಲ ಊಟ ಮತ್ತು ಫಲಹಾರ ಎಲ್ಲಾ ಬಗೆಯ ಆಹಾರ ಪದಾರ್ಥಗಳ ಕುರಿತು ಈ ಡಾಬಾ ಮಾಲೀಕರು ಪರವಾನಿಗೆ ಹಾಗೂ ನೊಂದಣಿ ಮಾಡಿದ್ದಾರೋ ಇಲ್ಲವೋ ಎಂದು ಮುಂದಿನ ಸಂಚಿಕೆಯಲ್ಲಿ ನೋಡೋಣ.
ಕಾನೂನಿನ ಬಗ್ಗೆ ಕಿಂಚಿತ್ತೂ ಭಯವಿಲ್ಲದೆ ಜನಸಾಮಾನ್ಯರ ಭಯವಿಲ್ಲದೆ ಹಗಲು-ರಾತ್ರಿಗಳ ವ್ಯತ್ಯಾಸ ಇಲ್ಲದೆ ಮದ್ಯಪಾನ ಮಾರುತ್ತಿದ್ದಾರೆ.ಇದನ್ನು ಈಗಲೂ ನಿಯಂತ್ರಿಸಲು ಪೊಲೀಸ್ ಇಲಾಖೆ,ಅಬಕಾರಿ ಇಲಾಖೆ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಮದ್ಯವನ್ನು ನಿಷೇಧ ಮಾಡಬಹುದು ಆದರೆ ಮಾಡುತ್ತಿಲ್ಲ.

ಈ ಎಲ್ಲಾ ಡಾಬಾಗಳಿಗೆ ಇಷ್ಟೊಂದು ಪ್ರಮಾಣದಲ್ಲಿ ಮದ್ಯ ಸರಬರಾಜು ಆಗುತ್ತಿರುವುದಾದರೂ ಎಲ್ಲಿಂದ?ಈ ರೀತಿ ಮಾರಲು ಯಾರಿಗೂ ಗೊತ್ತಿಲ್ಲದ ರೀತಿ ಅನುಮತಿ ಪತ್ರ ಕರುಣಿಸಿದ ಅನಾಮಿಕನಾದರೂ ಯಾರು!?ಮೊದಲೇ ರಾಜ್ಯದಲ್ಲಿ ಬರದ ಛಾಯೆ ಆವರಿಸಿರುವ ಈ ಸಂದರ್ಭದಲ್ಲಿ ಈ ಡಾಬಾಗಳು ಹಗಲಿರುಳು ಎನ್ನದೆ ಈ ರೀತಿ ಊಟಕ್ಕೆ ಮೊದಲು ಎಣ್ಣೆ ಕಡ್ಡಾಯ ಎನ್ನುವಂತೆ ಮಾಡಿ ಹೊಟ್ಟೆ ತುಂಬಾ ಇದ್ದಲ್ಲಿಗೇ ಎಣ್ಣೆ,ತಿನ್ನಲು ಚಿಪ್ಸ್ ಎಲ್ಲಾ ಕೊಟ್ಟು ದುಡ್ಡು ಕಿತ್ತುಕೊಂಡು ತಮ್ಮ ಲಾಭಕ್ಕಾಗಿ ಇನ್ನೊಬ್ಬರ ಜೀವ-ಜೀವನದೊಂದಿಗೆ ಆಟವಾಡುವ ಈ ಡಬ್ಬಾ ಅಲ್ಲ ಡಾಬಾ ಮಾಲೀಕರಿಗೆ ಹೇಳೋರಿಲ್ಲ ಕೇಳೋರಿಲ್ಲ.ಯಾವುದೇ ವೇಳಾಪಟ್ಟಿ ಇಲ್ಲದ ಈ ಡಾಬಾಗಳಲ್ಲಿ ಯುವಕರು ಅದರಲ್ಲೂ ಇನ್ನೂ ಪ್ರಾಥಮಿಕ,ಪ್ರೌಢಶಾಲಾ ಹಂತದ ಮಕ್ಕಳೂ ಕೂಡಾ ಚಿಕ್ಕ-ಪುಟ್ಟ ಪಾರ್ಟಿಗಳನ್ನು ಇಂತಹ ಸ್ಥಳಗಳಲ್ಲಿ ಮಾಡಿ ಕುಡಿದು ತಿಂದು ಅಲ್ಲೇ ಅಕ್ಕಪಕ್ಕದ ಹೊಲಗಳಲ್ಲಿ ಮಲಗೆದ್ದು ಬೆಳಿಗ್ಗೆ ಮನೆಗೆ ಇನ್ನೂ ಕೆಲವುಬಾರಿ ಕಡೆ ಕುಡಿದ ನಶೆಯಲ್ಲಿ ಮನೆ ಬದಲು ರಸ್ತೆಯಲ್ಲಿ ಅಪಘಾತಕ್ಕೆ ಈಡಾಗಿ ಕೈ-ಕಾಲು ಮುರಿದುಕೊಂಡು ಆಸ್ಪತ್ರೆ ಹಾಗೂ ಮಸಣ ಸೇರಿದ ಮುಗ್ಧ ಜೀವಗಳೆಷ್ಟೋ?

ಹಗಲುಗಳ್ಳ ಡಾಬಾಗಳ ಮೇಲೆ ರೈಡ್ ಮಾಡಲು ಪೊಲೀಸ್ ಹಾಗೂ ಅಬಕಾರಿ ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ ಯಾಕೆ?ಡಾಬಾಗಳಲ್ಲಿ ಸಿಸಿಟಿವಿ ಕ್ಯಾಮೆರಾ ಮಾಲಿಕರ ಮೊಬೈಲ್ ಫೋನ್ ಸಂಭಾಷಣೆ ಸಾಕ್ಷಿ ಇದ್ದರೂ ಕೇಸ್ ದಾಖಲಿಸಲು ಸಾಧ್ಯವಾಗುತ್ತಿಲ್ಲ ಯಾಕೆ? ಇಬ್ಬರ ನಡುವೆ ಒಳ ಒಪ್ಪಂದವಿದೆಯೇ? ಡಾಬಾಗಳಿಗೆ ರಕ್ಷಣೆಗೆ ನಿಂತ ದೊಡ್ಡವರ ಪಾಲು ಎಷ್ಟು? ಹಾಗೂ ದೊಡ್ಡವರ ಪರವಾಗಿ ಕೆಲಸಮಾಡುವ ಲೀಡರ್ಸ್ ಗಳ ಪಾಲು ಎಷ್ಟು? ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.ಮುಂದುವರೆಯುವುದು…

ವರದಿ-ಬಸವರಾಜ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ