ಬಣ್ಣ ಆಡಿ ಬರುವೆ
ಹಳದಿ ಹಸಿರು ಬಣ್ಣವೆ
ಒಂದಾಗಿಸುವ ಮನವೆ
ಓಣಿಕೇರಿ ತಿರುಗಿ ಹಚ್ಚುವೆ
ನಾನಾ ಕಲರದ ಬಣ್ಣವೆ//
ಮನ ಮನಸಿನಲ್ಲಿ ಮೋಡಿ
ನೆಲ ಅಂಗಳದಲ್ಲಿ ಕುಣಿದಾಡಿ
ಮನೆಯ ಮುಂದೆ ಬಣ್ಣ ಆಡಿ
ಹೋಳಿಗೆಯ ಮುದ್ದಿ ತಿನ್ನುವೆ
ಏಕತೆಯ ರಂಗಿನ ಆಟವೆ//
ಮೈಯೆಲ್ಲಾ ಮನಸೆಲ್ಲಾ ಬಣ್ಣವು
ಗೆಳೆಯ ಗೆಳತಿಯರಿಗೆ ಎರಚುವೆ
ನಾವೆಲ್ಲರೂ ಸೇರಿ ಆಡುವ ಬಣ್ಣವೆ
ಸಂತೋಷದ ಸಂಸ್ಕೃತದ ಬಣ್ಣವೆ
ನನ್ನ ಕೈಯಲ್ಲಿ ಬಣ್ಣವು ನಿನಗು ಬಣ್ಣವು
ಮುಖಕ್ಕೆ ಅಂದವಾದ ಬಣ್ಣವು
-ಮಹಾಂತೇಶ ಖೈನೂರ