ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ನನ್ನದು ಕೇವಲ ಭರವಸೆಯಲ್ಲ ಅನುಷ್ಠಾನ:ಕಾಂಗ್ರೇಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್

ಭದ್ರಾವತಿ:ರಾಜಕೀಯ ನನ್ನ ಬಹುದಿನದ ಕನಸು. ಇದೀಗ ಕಾಲ ಕೂಡಿಬಂದಿದೆ.ಮುಂದಿನ ನನ್ನ ಜೀವನವನ್ನು ಜನಸೇವೆಗೆ ಮೀಸಲಿಡುವೆ.ನನ್ನದು ಕೇವಲ ಭರವಸೆಯಲ್ಲ ಅನುಷ್ಠಾನ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಹೇಳಿದರು.
ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್‌ರವರ ಸಹೋದರ ಬಿ.ಕೆ ಶಿವಕುಮಾರ್‌ರವರ ಗಾಂಧಿನಗರದಲ್ಲಿರುವ ನಿವಾಸದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ನಾನು ಶಿವಮೊಗ್ಗ ಜಿಲ್ಲೆಯವಳಾಗಿ ಜಿಲ್ಲೆಯ ಜನತೆಗೆ ಮತ ಕೇಳದೆ,ಇನ್ಯಾರಿಗೆ ಮತಕೇಳಲಿ ಭದ್ರಾವತಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ನಾಗರೀಕರು ತೋರಿದ ಅದ್ದೂರಿ ಸ್ವಾಗತ ನನ್ನಲ್ಲಿ ಭರವಸೆಯನ್ನು ಹೆಚ್ಚಿಸಿದೆ.ರಾಜ್ಯದ ಕಾಂಗ್ರೆಸ್ ಸರ್ಕಾರ ನೀಡಿದ ಭರವಸೆಯನ್ನು ಕೆಲ ತಿಂಗಳಲ್ಲಿ ಈಡೇರಿಸಿರುವುದೇ ಜನಪರ ಆಡಳಿತಕ್ಕೆ ಸಾಕ್ಷಿಯಾಗಿದೆ ಎಂದರು.ಮಾಜಿ ಮುಖ್ಯಮಂತ್ರಿ ಬಂಗಾರಪ್ಪಾಜಿ ರವರು ನೀಡಿದ ಯೋಜನೆಗಳು ಮೂರು ದಶಕ ಕಳೆದರೂ ಜನಮಾನಸದಲ್ಲಿ ಉಳಿದಿವೆ.ಇದು ಬಂಗಾರಪ್ಪನವರ ಜನಪರ ಆಡಳಿತಕ್ಕೆ ಸಾಕ್ಷಿ ಈ ಬಾರಿಯ ಲೋಕಸಭೆಯಲ್ಲಿ ನನಗೆ ಹೆಚ್ಚಿನ ಮತಗಳನ್ನು ಭದ್ರಾವತಿ ಕ್ಷೇತ್ರದಲ್ಲಿ ನೀಡುವ ವಿಶ್ವಾಸವಿರುವುದಾಗಿ ತಿಳಿಸಿದರು.
ರಾಜಕಾರಣಕ್ಕೆ ಬೇಕಿರುವುದು ಮಾತಲ್ಲ,ಮನಸ್ಸು ಜನಸೇವೆಗೆ ಬೇಕಿರುವುದು ಸೇವಾ ಮನೋಭಾವ,ಕಾಳಜಿ ಮತ್ತು ಅನುಭವ.ಈ ಎಲ್ಲಾ ಗುಣಗಳು ಗೀತಾ ಅವರಲ್ಲಿದೆ.ಜನರಿಗೆ ಒಳ್ಳೆಯದನ್ನು ಮಾಡಬೇಕೆಂಬ ಮನೋಭಾವ ರಕ್ತದಲ್ಲಿಯೇ ಹರಿದುಬಂದಿದೆ ಜೊತೆಗೆ ಸೇವೆ ಮಾಡಲು ತಾಕತ್ತಿದೆ. ಆದ್ದರಿಂದ ಅವರನ್ನು ಬೆಂಬಲಿಸಿ ಎಂದು ಚಲನಚಿತ್ರ ನಟ ಶಿವರಾಜ್ ಕುಮಾರ್ ಮನವಿ ಮಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮಾತನಾಡಿ,ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಗೆಲುವಿಗೆ ಪಕ್ಷದ ಮುಖಂಡರು,ಕಾರ್ಯಕರ್ತರು ಹೆಚ್ಚಿನ ಶ್ರಮವಹಿಸುವಂತೆ ಕೋರಿದರು.ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರ ನೇತೃತ್ವದಲ್ಲಿ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು,ರಾಜ್ಯದಲ್ಲಿ ಕಾಂಗ್ರೆಸ್ ಪರ ಮತದಾರರ ಒಲವು ಕಂಡು ಬರುತ್ತಿದೆ.ಪಕ್ಷದ ಮುಖಂಡರು,ಕಾರ್ಯಕರ್ತರು ಮನೆಮನೆಗೆ ತೆರಳಿ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಮನವರಿಕೆ ಮಾಡಿಕೊಡುವ ಮೂಲಕ ಮತ ಯಾಚಿಸುವಂತೆ ಮನವಿ ಮಾಡಿದರು.

BOX

ಜೆಡಿಎಸ್ ಬಸ್ ನಿಲ್ದಾಣದಲ್ಲಿ ಕಳೆದುಹೋದ ಮಗುವಿದ್ದಂತೆ:ಆಯನೂರು ಮಂಜುನಾಥ್
ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಮಾತನಾಡಿ,ಜೆಡಿಎಸ್ ಬಸ್ ನಿಲ್ದಾಣದಲ್ಲಿ ಕಳೆದುಹೋದ ಮಗುವಿದ್ದಂತೆ.ಯಾರು ಕೈಹಿಡಿಯುತ್ತಾರೋ ಅವರ ಹಿಂದೆ ಹೋಗುತ್ತಿರುತ್ತದೆ.ಭದ್ರಾವತಿಯನ್ನು ನಿರುದ್ಯೋಗಿಗಳ ನಗರವನ್ನಾಗಿಸಿದ್ದು ಬಿಜೆಪಿ ಸರ್ಕಾರ.ಬಿಜೆಪಿ ಕಾರ್ಮಿಕರ ಪರವಾಗಿಲ್ಲ ಜನರಿಗೆ ಇದು ಅರ್ಥವಾಗುತ್ತಿಲ್ಲ.ಕೆ.ಎಸ್.ಈಶ್ವರಪ್ಪ ಹುಟ್ಟು ಧೈರ್ಯವಂತನಲ್ಲ ಅವರ ಧೈರ್ಯ ಅವರಮನೆ ಕಾಂಪೌಡ್ ವರೆಗೆ ಮಾತ್ರ.ಚಾಕು,ಖಡ್ಗದ ಬಗ್ಗೆ ಮಾತನಾಡುತ್ತಾರೆ ಆದರೆ ಬ್ಲೇಡ್ ತಂದರೂ ಹೆದರಿ ಅಡುಗೆ ಕೋಣೆ ಸೇರಿಕೊಳ್ಳುವ ಪುಕ್ಕಲುತನ ಅವರದ್ದು ಎಂದು ಟೀಕಿಸಿದರು.

ಕೆ ಆರ್ ಐ ಡಿ ಎಲ್ ಆಧ್ಯಕ್ಷ ಹಾಗೂ ಭದ್ರಾವತಿ
ಶಾಸಕ ಬಿ.ಕೆ.ಸಂಗಮೇಶ್ವರ್ ಸಭೆಯ ನೇತೃತ್ವ ವಹಿಸಿದ್ದರು.ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಲ್ಕೀಷ್ ಬಾನು,ಹಿರಿಯ ಮುಖಂಡರಾದ ಬಿ.ಕೆ.ಮೋಹನ್,ಸಿ.ಎಂ.ಖಾದರ್,ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಎಸ್.ಕುಮಾರ್,ಗ್ರಾಮಾಂತರ ಅಧ್ಯಕ್ಷ ಹೆಚ್.ಎಲ್.ಷಡಾಕ್ಷರಿ,ನಗರಸಭೆ ಅಧ್ಯಕ್ಷೆ ಲತಾ ಚಂದ್ರಶೇಖರ್,ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ,ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್,ಮಾಜಿ ಉಪಾಧ್ಯಕ್ಷ ಚನ್ನಪ್ಪ ಸೇರಿದಂತೆ ಪಕ್ಷದ ಹಲವು ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.ಹೆಚ್ ಎಲ್ ಷಡಾಕ್ಷರಿ ಸ್ವಾಗತಿಸಿದರು.ಎಂ.ಶಿವಕುಮಾರ್ ನಿರೂಪಿಸಿ ವಂದಿಸಿದರು.

ವರದಿ:ಕೆ ಆರ್ ಶಂಕರ್,ಭದ್ರಾವತಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ