ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಪಕ್ಷ ಶುದ್ಧೀಕರಣ ಮತ್ತು ಕುಟುಂಬ ರಾಜಕಾರಣ ವಿರೋಧಿಸಿ ಸ್ಪರ್ಧೆ:ಕೆ ಎಸ್ ಈಶ್ವರಪ್ಪ

ಭದ್ರಾವತಿ:ತನ್ನ ತಾಯಿಯಂತೆ ಭಾವಿಸಿದ ರಾಜ್ಯ ಬಿಜೆಪಿ ಇಂದು ಕುಟುಂಬ ರಾಜಕಾರಣಕ್ಕೆ ಸಿಲುಕಿರುವುದನ್ನು ನೋಡಲಾಗುತ್ತಿಲ್ಲ,ಹಲವು ಬಾರಿ ಬೇಸರವಾದರೂ ಪಕ್ಷದ ಕಾರಣದಿಂದ ಸುಮ್ಮನಿದ್ದೆ. ಆದರೆ ಪಕ್ಷ ಶುದ್ಧೀಕರಣ ಹಾಗೂ ಕುಟುಂಬ ರಾಜಕಾರಣದ ವಿರೋಧಿಸಿ ಸ್ಪರ್ಧೆ ಮಾಡುತ್ತಿರುವುದಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಹೇಳಿದರು.
ಭದ್ರಾವತಿಯ ಸಿದ್ಧರೂಢನಗರದ ಧರ್ಮಶ್ರೀ ಸಭಾ ಭವನದಲ್ಲಿ ಕೆ.ಎಸ್.ಈಶ್ವರಪ್ಪ ಬೆಂಬಲಿಗರು ಆಯೋಜಿಸಿದ್ದ ಈಶ್ವರಪ್ಪ ನಡೆ ಕಾರ್ಯಕ್ರಮದಲ್ಲಿ ಕಾರ್ಯಕರ್ತರು ಹಾಗೂ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದರು.

ಚುನಾವಣೆಗಾಗಿ ಮಾತ್ರ ಪಕ್ಷ ನಂತರ ಎಲ್ಲಾ ಜನರು ನಮ್ಮವರು.ಇದೀಗ ನನ್ನ ಬೆಂಬಲಕ್ಕೆ ಎಲ್ಲಾ ರೀತಿಯ ಜನತೆ ಬೆಂಬಲಿಸುತ್ತಿರುವುದು ಸಂತಸ ತಂದಿದೆ. ಬಿ.ಎಸ್.ಯಡಿಯೂರಪ್ಪ ಕೈಗೆ ಬಿಜೆಪಿ ಕೊಟ್ಟರೆ ಅಧಿಕಾರ ಬರುತ್ತದೆ ಎಂದು ದೆಹಲಿಯ ಹಿರಿಯ ವರಿಷ್ಠರನ್ನು ದಿಕ್ಕು ತಪ್ಪಿಸಲಾಗುತ್ತಿದೆ ಆದರೆ ಹಿಂದುಳಿದವರು,ದಲಿತರು,ಕುರುಬರಿಗೆ ಅನ್ಯಾಯವಾಗುತ್ತಿದೆ.ಪಕ್ಷದ ಏಳಿಗೆಗೆ ಶ್ರಮಿಸಿದವರಿಗೆ ಅಧಿಕಾರ ನೀಡಬೇಕಿರುವುದು ಮುಖ್ಯ,ನಾನು ಎಂಪಿಎಂ-ವಿ.ಐ.ಎಸ್.ಎಲ್ ಕಾರ್ಖಾನೆಗಳ ವಿಚಾರದಲ್ಲಿ ಭರವಸೆ ನೀಡುವುದಿಲ್ಲ.ಬದಲಾಗಿ ಎಲ್ಲರೊಂದಿಗೆ ಚರ್ಚಿಸಿ ಆಗಬೇಕಾದ ಕೆಲಸಗಳನ್ನು ಪ್ರಮಾಣಿಕವಾಗಿ ನನ್ನ ಕರ್ತವ್ಯ ನಿರ್ವಹಿಸುತ್ತೇನೆ. ಭದ್ರಾವತಿ ಜನತೆಗೆ ಈಶ್ವರಪ್ಪನ ಮೇಲೆ ವಿಶ್ವಾಸವಿದೆ. ನನಗೆ ಭದ್ರಾವತಿ ಜನರ‌ ಮೇಲೆ ವಿಶ್ವಾಸವಿದೆ ಎಂದರು.

ಬ್ರಹ್ಮ ಬಂದರೂ ನನ್ನ ಸ್ಫರ್ಧೆ ಖಚಿತ:ಕೆ ಎಸ್ ಈಶ್ವರಪ್ಪ

ಹೈ ಕಮಾಂಡ್ ನಾಯಕರು ಕರೆದರೆ ಹೋಗುವೆ.ಪಕ್ಷದ ಉಳಿವಿಗಾಗಿ ಚರ್ಚಿಸಿ ಅಗತ್ಯ ಮಾಹಿತಿ ನೀಡಿವೆ. ಆದರೆ,ಬ್ರಹ್ಮ ಬಂದರೂ ನನ್ನ ಸ್ಫರ್ಧೆ ಖಚಿತ,ಸ್ಫರ್ಧೆಯಿಂದ ಹಿಂದೆ ಸರಿಯುವ ಮಾತೇ ಇಲ್ಲವೆಂದು ಕೆ ಎಸ್ ಈಶ್ವರಪ್ಪ ಘೋಷಿಸಿದರು.

ಸಮಾಜ ಸೇವಕ ಹಾಗೂ ಮುಖಂಡ ಸಿ.ಮಹೇಶ್ ಕುಮಾರ್ ಮಾತನಾಡಿ,ಕೆ.ಎಸ್.ಈಶ್ವರಪ್ಪನವರ ಸ್ಫರ್ಧೆ ಖಚಿತವಾಗಲಿ,ನಂತರ ಅಭಿವೃದ್ಧಿಯ ಹರಿಕಾರರ ಕಥೆ ಏನೆಂದು ನಾವು ಜನರಿಗೆ ಕನಕ ಮಂಟಪ ಮೈದಾನದಲ್ಲಿ ಮನವರಿಕೆ ಮಾಡುತ್ತೇವೆ ಎಂದರು.

ಕಾರ್ಯಕ್ರಮದಲ್ಲಿ ಮುಖಂಡರುಗಳಾದ ಸುರೇಶ್, ಪ್ರಭಾಕರ್,ತ್ಯಾಗರಾಜ್,ಗೋವು,ಮಾರುತಿ,ಬಿ.ಎಸ್.ನಾರಾಯಣಪ್ಪ,ಹೇಮಾವತಿ,ಬಿಸಿಯೂಟ ಶಾರದಮ್ಮ, ಮಾಜಿ ನಗರಸಭಾ ಸದಸ್ಯ ಮಂಜುನಾಥ್,ಬಸವರಾಜ್(ಬುಲೆಟ್),ಎಂ.ಪಿ.ಎಂ ರಂಗೋಜಿರಾವ್ ಸೇರಿದಂತೆ ಹಲವರು ಹಾಜರಿದ್ದರು.
ಸಭೆಗೂ ಮೊದಲು ಈಶ್ವರಪ್ಪ ಬೆಂಬಲಿಗರು
ಭದ್ರಾವತಿಯಲ್ಲಿ ಹುತ್ತಾ ಬಸ್ ನಿಲ್ದಾಣದಿಂದ ಧರ್ಮಶ್ರೀ ಸಭಾ ಭವಾನದವರೆಗೂ ಯುವ ಮುಖಂಡ ವಿಜಯ್ ಕುಮಾರ್,ಬಿ.ಎಸ್.ನಾರಾಯಣಪ್ಪ, ಎಂ.ಪ್ರಭಾಕರ್ ನೇತ್ರತ್ವದಲ್ಲಿ ಬೃಹತ್ ಬೈಕ್ ರ್ಯಾಲಿ ಹಮ್ಮಿಕೊಂಡಿದ್ದರು.

ವರದಿ:ಕೆ ಆರ್ ಶಂಕರ್ ಭದ್ರಾವತಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ