ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ದೇವಾಲಯದ ವ್ಯಾಪ್ತಿಯಲ್ಲಿ ಬರುವ ಅಭಿವೃದ್ಧಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೃಷ್ಣಕುಮಾರ್ ಹಾಗೂ ಪಿ ಒನ್ ಪ್ರಭುಸ್ವಾಮಿ ಕಚೇರಿಯಲ್ಲಿ ಕರ್ತವ್ಯದ ವೇಳೆ ಟಿಕ್ ಟಾಕ್ ಮಾಡುವ ಮೂಲಕ ವ್ಯಾಪಕ ಚರ್ಚೆ ಹಾಗೂ ಸಾಮಾಜಿಕ ಜಾಲತನದಲ್ಲಿ ಚರ್ಚೆವಿಡಿಯೋ ವೈರಲ್ ಆಗಿದೆ.
ಚಲನಚಿತ್ರ ಟಿಕ್ ಟಾಕ್:ಕೋಟ್ಯಾಂತರ ಮಾದಪ್ಪನ ಭಕ್ತರ ಆರಾಧ್ಯ ದೈವ ಶ್ರೀ ಕ್ಷೇತ್ರದಲ್ಲಿ ಕಚೇರಿಯ ಕೆಲಸ ಬಿಟ್ಟು ಸರ್ಕಾರಿ ಪ್ರಾಧಿಕಾರದ ಅಭಿವೃದ್ಧಿ ವಿಭಾಗದಲ್ಲಿ ಕನ್ನಡ,ತಮಿಳು ಚಲನಚಿತ್ರಗಳ ರೀಲ್ಸ್ ಮಾಡುವ ಮೂಲಕ ಹಿರಿಯ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಧಾರ್ಮಿಕ ಭಾವನೆಗಳಿಗೆ ಧಕ್ಕೆ:ಮಲೆ ಮಾದೇಶ್ವರ ಬೆಟ್ಟಕ್ಕೆ ಬರುವ ಭಕ್ತಾದಿಗಳಿಗೆ ಧಾರ್ಮಿಕ ಮನೋಭಾವನೆಯಿಂದ ಬಂದು ಹೋಗುವ ಶ್ರೀ ಕ್ಷೇತ್ರದಲ್ಲಿಈ ರೀತಿ ಅಧಿಕಾರಿಗಳು ಕೆಲಸ ಮಾಡುವುದನ್ನು ಬಿಟ್ಟು ಚಲನಚಿತ್ರದ ಟಿಕ್ ಟಾಕ್ ಗಳಿಗೆ ಮಾರು ಹೋಗಿರುವುದು ಭಕ್ತರಿಗೆ ಬೇಸರ ಉಂಟು ಮಾಡಿದೆ ಹೀಗಾಗಿ ಸಾಮಾಜಿಕ ಜಾಲತಾಣದಲ್ಲೂ ಸಹ ಭಕ್ತರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ ಈ ಹಿಂದೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಗಣಪತಿ ಪ್ರತಿಷ್ಠಾಪನ ಪೂಜಾ ಕಾರ್ಯಕ್ರಮದಲ್ಲಿ ನಂಗಾ ನಾಚ್ ಪ್ರಕರಣಕ್ಕೂ ಸಹ ಸುದ್ದಿಯಾಗಿತ್ತು ಅದೇ ರೀತಿ ಇಂದು ಪ್ರಾಧಿಕಾರದ ಎಸ್ ಡಿ ಎ ಅಧಿಕಾರಿ ಹಾಗೂ ಸಿಬ್ಬಂದಿಯಿಂದ ಟಿಕ್ ಟಾಕ್ ಮಾಡುವ ಮೂಲಕ ಕ್ಷೇತ್ರದ ಅಭಿವೃದ್ಧಿ ವಿಭಾಗದಲ್ಲಿ ಶ್ರೀ ಕ್ಷೇತ್ರದ ಅಭಿವೃದ್ಧಿ ಕೆಲಸ ಕಾರ್ಯದಲ್ಲಿ ತೊಡಗಿಕೊಳ್ಳುವುದರ ಬದಲಾಗಿ ದೇವಾಲಯದ ಆಡಳಿತ ಕಚೇರಿಯಲ್ಲಿ ಟಿಕ್ ಟಾಕ್ ನಡೆದಿರುವುದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ ಧಾರ್ಮಿಕ ಕ್ಷೇತ್ರ ಮಲೆ ಮಾದೇಶ್ವರ ಬೆಟ್ಟದಲ್ಲಿ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು ಶ್ರೀ ಕ್ಷೇತ್ರದಲ್ಲಿ ಭಕ್ತಾದಿಗಳಿಗೆ ಪೂಜ್ಯ ಭಾವನೆ ಬರಬೇಕೆ ಹೊರತು ಇಂತಹ ಸಂದೇಶಗಳಿಂದ ಭಕ್ತರ ಭಾವನೆಗಳಿಗೆ ಧಕ್ಕೆ ಉಂಟಾಗುತ್ತದೆ ಎಂದು ಮಾದಪ್ಪನ ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವರದಿ:ಉಸ್ಮಾನ್ ಖಾನ್