ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಬೀಳವಾರ ಗ್ರಾಮದಲ್ಲಿ ಡಾ.ಬಾಬು ಜಗಜೀವನ್ ರಾಮ್ ಜಯಂತಿಯ ಕಾರ್ಯಕ್ರಮ ಆಚರಿಸಲಾಯಿತು.ಈ ಸಂದರ್ಭದಲ್ಲಿ ಜೇವರ್ಗಿ ತಾಲೂಕ ಮಾಜಿ ತಾಲೂಕ್ ಪಂಚಾಯತ್ ಸದಸ್ಯರಾದ ಗೊಲ್ಲಾಳಪ್ಪ ಮ್ಯಾಗೇರಿ ಅವರು ಕಾರ್ಯಕ್ರಮದ ಕುರಿತು ಸುಧೀರ್ಘವಾಗಿ ಮಾತನಾಡಿದರು ದೇಶದ ಮಾಜಿ ಉಪ ಪ್ರಧಾನಿಯಾದ ಡಾ.ಬಾಬು ಜಗಜೀವನ್ ರಾಮ್ ಹಸಿರು ಕ್ರಾಂತಿಯ ಮೂಲಕ ಬಡ ಜನರ ಹಸಿವು ನೀಗಿಸಿದ ಮಹಾನ್ ಮುತ್ಸದ್ದಿ ಹಾಗೂ ಸ್ವತಂತ್ರ ಹೋರಾಟಗಾರರು ಮತ್ತು ದೇಶದಲ್ಲಿ ಬಾಬೂಜಿ ಎನ್ನುವ ಹೆಸರಿನಿಂದ ಖ್ಯಾತರಾಗಿ ದೇಶಕ್ಕೆ ಇವರು ನೀಡಿದ ಕೊಡುಗೆ ಅಪಾರವಾಗಿದ್ದು ಬಾಬುಜಿಯವರ ಆದರ್ಶ ಚಿಂತನೆಗಳು ಇಂದಿಗೂ ದಾರಿದೀಪವಾಗಿವೆ ಶೋಷಿತರ ಪರವಾಗಿ ಡಾ.ಬಾಬು ಜಗಜೀವನ್ ರಾಮ್ ಅವರು ನಡೆಸಿದ ಹೋರಾಟ ಸ್ಮರಣಿಯವಾಗಿದ್ದು ಇಂದಿನ ಯುವ ಜನಾಂಗ ಡಾ.ಬಾಬು ಜಗಜೀವನ್ ರಾಮ್ ಅವರ ಆದರ್ಶ ಚಿಂತನೆಗಳನ್ನು ಪ್ರತಿಯೊಬ್ಬರು ತಮ್ಮ ನಿಜ ಜೀವನದಲ್ಲಿ ಮೈಗೂಡಿಸೀಕೊಳ್ಳಬೇಕು ಎಂದು ಈ ಸಂದರ್ಭದಲ್ಲಿ ಮಾತನಾಡಿದರು ಹಾಗೂ ಈ ಕಾರ್ಯಕ್ರಮದಲ್ಲಿ ಶೇಖಪ್ಪ ತಳಗೇರಿ ಜೇವರ್ಗಿ ತಾಲೂಕ ಪಂಚಾಯತ್ ಸದಸ್ಯರು ಹಾಗೂ ಹಾಲುಮತ ಸಮಾಜದ ಯುವ ಮುಖಂಡರು ಶರಣು ಪೂಜಾರಿ ದೊಡ್ಡಮನಿ ಹಾಗೂ ಗ್ರಾಮ ಪಂಚಾಯತ್ ಬಿಲ್ ಕಲೆಕ್ಟರ್ ಬಸನಗೌಡ ಮಾರಡಗಿ ಪಂಚಾಯತ್ ಕಾರ್ಯದರ್ಶಿಗಳು ಸದಾನಂದ ಪಾಟೀಲ್ ತಾಂತ್ರಿಕ ಸಹಾಯಕರು ಎಲ್ಲಪ್ಪ ಸರ್ ಮತ್ತು ಯಡ್ರಾಮಿ ತಾಲೂಕ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಲಾಲ್ ಪಟೇಲ್ ಯರಗಲ್ ಹಾಗೂ ಯಡ್ರಾಮಿ ತಾಲೂಕ ಬಿಜೆಪಿ ಪಕ್ಷದ ಯುವ ಮುಖಂಡರು ಸೈಬಣ್ಣ ಅಣಬೀ ಮತ್ತು ಶ್ರೀಶೈಲ್ ಮ್ಯಾಗೇರಿ ಯಮನಪ್ಪ ಬಿಳವಾರ್ ಬಾಗಪ್ಪ ತಳಗೇರಿ ಭೀಮಣ್ಣ ಮಾಸ್ಟರ್ ಭಜನಿ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.