ಚಿಂಚೋಳಿ :- ಬೀದರ್ ಲೋಕಸಭಾ ಕ್ಷೇತ್ರಕ್ಕೆ ಸೇರಿದ ಗುಲ್ಬರ್ಗ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ಶೋಷಿತ ವರ್ಗಗಳ ಸಮಾಲೋಚನಾ ಸಭೆ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬೀದರ್ ಜಿಲ್ಲೆಯ ಉಸ್ತುವಾರಿ ಸಚಿವರಾದ ಶ್ರೀ.ಈಶ್ವರ ಖಂಡ್ರೆ ರವರು, ಕೋಮುವಾದಿ ಬಿಜೆಪಿ ಸಮಾಜ ಒಡೆದು, ಜಾತಿ, ಧರ್ಮಗಳ ನಡುವೆ ಸಂಘರ್ಷ ಸೃಷ್ಟಿಸುತ್ತಿದ್ದು, ದೇಶದ ಉಳಿವಿಗಾಗಿ ಎಲ್ಲ ಜಾತ್ಯತೀತ ಶಕ್ತಿಗಳೂ ಒಗ್ಗೂಡಿ ಬಿಜೆಪಿಯನ್ನು ಸೋಲಿಸಬೇಕು.
ಶೋಷಿತರ ನಡುವೆಯೇ ಎಡ- ಬಲ ಎಂಬಿತ್ಯಾದಿ ಭೇದ ಭಾವವನ್ನು ಬಿಜೆಪಿ ಹುಟ್ಟುಹಾಕುತ್ತಿದೆ. ಬಿಜೆಪಿಗೆ ಮೊದಲ ಹಂತದ ಚುನಾವಣೆ ಬಳಿಕ ಈ ಬಾರಿ ಸೋಲು ನಿಶ್ಚಿತ ಎಂದು ಅರಿವಾಗಿದ್ದು, ಕಾಂಗ್ರೆಸ್ ವಿರುದ್ಧ ಅಪಪ್ರಚಾರ ಮಾಡುತ್ತಿದೆ. ಜಾತಿ, ಧರ್ಮಗಳ ನಡುವೆ ದ್ವೇಷ ಹುಟ್ಟಿಸುವ ಕೀಳು ಮಟ್ಟಕ್ಕೆ ಇಳಿದಿದೆ.
ಬಿಜೆಪಿ 2004ರ ಚುನಾವಣೆಗೆ ಮುನ್ನ ಜನರಿಗೆ ಅಚ್ಚೇ ದಿನ್ ಭರವಸೆ ನೀಡಿತ್ತು. ಅಚ್ಛೇದಿನವೂ ಬರಲಿಲ್ಲ. ರೈತರ ಆದಾಯ ದುಪ್ಪಟ್ಟಾಗಲಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಆಗಲಿಲ್ಲ. ಬದಲಾಗಿ ಬಡವರ ಬದುಕು ದುರ್ಬರವಾಗುತ್ತಿದೆ, ವಿದ್ಯಾವಂತರು ನಿರುದ್ಯೋಗಿಗಳಾಗುತ್ತಿದ್ದಾರೆ, ರೈತರ ವೆಚ್ಚ ಅಧಿಕವಾಗಿ ರೈತರ ಆತ್ಮಹತ್ಯೆ ಹೆಚ್ಚಾಗಿದೆ.
ಬಿಜೆಪಿ ಸರ್ಕಾರದ ಹಿಡನ್ ಅಜೆಂಡಾ ಸಂವಿಧಾನ ಬದಲಾವಣೆ ಮಾಡುವುದಾಗಿದೆ. ಡಾ. ಭೀಮರಾವ್ ಅಂಬೇಡ್ಕರ್ ಅವರು ಕೊಟ್ಟ ಈ ಸಂವಿಧಾನವನ್ನು ಸಂರಕ್ಷಿಸಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ, ಕಾಂಗ್ರೆಸ್ ಪಕ್ಷ ಶೋಷಿತರಿಗೆ, ದಮನಿತರಿಗೆ, ವಂಚಿತರಿಗೆ ಸಮಾನ ಅವಕಾಶ ನೀಡಿದೆ.
ಯುಪಿಎ ಕಾಲದಲ್ಲಿ ಪ್ರಧಾನಿ ಡಾ. ಮನಮೋಹನ ಸಿಂಗ್ ರೈತರ ಸಾಲ ಮನ್ನಾ ಮಾಡಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ, ಟೀಕಿಸಿದ ಬಿಜೆಪಿ ಕಳೆದ 10 ವರ್ಷದಲ್ಲಿ ಉದ್ಯಮಪತಿಗಳ 16 ಲಕ್ಷ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿ, ಬ್ಯಾಂಕ್ ಗಳನ್ನು ದಿವಾಳಿ ಎಬ್ಬಿಸಿದೆ. ಬಡವರ ಬೆವರಿನ ಹಣವನ್ನು ಕಿತ್ತು, ದುರ್ಬಲರ ಕಿಸೆಗೆ ಕೈಹಾಕಿ, ಕೆಲವೇ ಕೆಲವು ಆಯ್ದ ಶ್ರೀಮಂತರ ಜೋಬು ತುಂಬಿಸುತ್ತಿದೆ.
ಹಾಲಿ ಸಂಸತ್ ಸದಸ್ಯರಾಗಿರುವ ಭಗವಂತ ಖೂಬಾ ಕೇಂದ್ರದಲ್ಲಿ ಸಚಿವರಾಗಿದ್ದರೂ ಕ್ಷೇತ್ರದ ಅಭಿವೃದ್ಧಿಗೆ ನೀಡಿರುವ ಕೊಡುಗೆ ಶೂನ್ಯ. ಕಳೆದ 10 ವರ್ಷದಿಂದ ಜನರ ನೋವು, ನಲಿವಿಗೆ ಸ್ಪಂದಿಸಿಲ್ಲ. ಕೋವಿಡ್ ಕಾಲದಲ್ಲಿ ಜನರ ಸಂಕಷ್ಟಕ್ಕೆ ಸ್ಪಂದಿಸದೆ, ಧ್ಯಾನ ಮಾಡುತ್ತಾ ಮನೆಯಲ್ಲಿ ಕುಳಿತಿದ್ದರು. ಲಕ್ಷ ಕೋಟಿ ಅನುದಾನ ತಂದಿದ್ದಾಗಿ ಕೊಚ್ಚಿಕೊಳ್ಳುವ ಭಗವಂತ ಖೂಬಾ ಇದ್ದ ವಿಮಾನ ನಿಲ್ದಾಣ ಬಂದ್ ಮಾಡಿಸಿದರು.
ಸಿಪೆಟ್ ಮಾಡುತ್ತೇನೆಂದು ಭೂಮಿ ಪೂಜೆ ಮಾಡಿದ್ದು ಬಿಟ್ಟರೆ ಪ್ರಗತಿಯೇ ಆಗಲಿಲ್ಲ. ಹೀಗಾಗಿ ಬೀದರ್ ನ ಅಭಿವೃದ್ಧಿಗೆ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಈಶ್ವರ್ ಖಂಡ್ರೆಗೆ ಮತ ನೀಡಿ ಪ್ರಚಂಡ ಬಹುಮತದಿಂದ ಗೆಲ್ಲಿಸುವಂತೆ ಮನವಿ ಮಾಡಿದೆ.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಶ್ರೀ ಕೈಲಾಸನಾಥ ಪಾಟೀಲ್, ಕೆಪಿಸಿಸಿ ಉಪಾಧ್ಯಕ್ಷರು, ಚಿಂಚೋಳಿ ಮುಖಂಡರು ಸುಭಾಷ್ ರಾಥೋಡ್, ಬಾಬುರಾವ್ ಪಾಟೀಲ್, ಬಸವರಾಜ್ ಮೇತ್ರಿ, ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು.
ವರದಿ :- ರೋಹನ್ ವಾಘಮಾರೆ