ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕು ನಾಲವಾರ ವಲಯ ಘಟಕದಲ್ಲಿ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರ ಕಾರ್ಯಾಲಯದಲ್ಲಿ “108′ ಆಂಬುಲೆನ್ಸ್ ವಾಹನವನ್ನು ಇಂದು ಮೇ.೧ ಕಾರ್ಮಿಕರ ದಿನಾಚರಣೆಯ ಅಂಗವಾಗಿ ಸಡಗರ ಸಂಭ್ರಮದಿಂದ ಚಾಲನೆ ನೀಡಲಾಯಿತು. ನಾಲವಾರ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಿಗೆ ಅನುಕೂಲವಾಗಲೆಂದು ಮಲ್ಲಣ್ಣಗೌಡ ಬಿ ಪಾಟೀಲ ಕೆಲ್ಲೂರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷರು ಕಲಬುರಗಿ ಅವರು ಒಂದು ಆಂಬುಲೆನ್ಸ್ ಗೆ ಆದೇಶದ ಮೇರೆಗೆ ಇಂದು ಪರಮೇಶ್ವರ ಜಿ.ಝಳಕಿ ನಾಲವಾರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮತ್ತು ಬಸವರಾಜ ಹಡಪದ ಸುಗೂರ ಎನ್ ಕಲಬುರಗಿ ಜಿಲ್ಲೆಯ ಗೌರವಾಧ್ಯಕ್ಷರು,ರಮೇಶ್ ಡಿ.ಸಿ ಕೊಚ್ಚೂರ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳು,ಮಲ್ಲಿಕಾರ್ಜುನ ಮಳಗ ನಾಲವಾರ ಹೋಬಳಿ ವಲಯ ಘಟಕ ಅಧ್ಯಕ್ಷರು
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ , ಬಸವರಾಜ ದೇಸಾಯಿ ಕೊಲ್ಲೂರು ಗ್ರಾಮದ ಅಧ್ಯಕ್ಷರು ಮತ್ತು ಜಗನ್ನಾಥ ದಮ್ಮೂರ ಕೊಲ್ಲೂರು ಗ್ರಾಮ ಘಟಕ ಉಪಾಧ್ಯಕ್ಷರು,ಡಾ.ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಕಲಬುರಗಿ ಜಿಲ್ಲೆಯ ಸಂಘಟನಾ ಕಾರ್ಯದರ್ಶಿಗಳು ಡಾ.ದಶರಥ ಜಿಂಗಾಡೆ ವೈದ್ಯಾಧಿಕಾರಿಗಳು,ಪ್ರಾಥಮಿಕ ಆರೋಗ್ಯ ಕೇಂದ್ರ ನಾಲವಾರ,ಕವಿತಾ ಮೇಡಂ ಸ್ಟಾಂಪ್ ನಸ್೯ ಪ್ರಾಥಮಿಕ ಆರೋಗ್ಯ ಕೇಂದ್ರ ನಾಲವಾರ, ಉಪಸ್ಥಿತರಿದ್ದರು,108 ಆಂಬುಲೆನ್ಸ್ ಡೈವರ ಸೂರ್ಯಕಾಂತ ಬೀದರ ಮತ್ತು ರಾಕೇಶ್ ದೇವಲ್ ಗಾಣಗಾಪೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಇದೇ ಸಂಧರ್ಭದಲ್ಲಿ ಮಲ್ಲಿಕಾರ್ಜುನ ಮಳಗ ನಾಲವಾರ ಹೋಬಳಿ ಘಟಕದ ಅಧ್ಯಕ್ಷರು ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಾರ್ವಜನಿಕರು ಈ ಆಂಬುಲೆನ್ಸ್‍ಗಳ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ವತಿಯಿಂದ ಈ ಒಂದು ಆಂಬುಲೆನ್ಸ್ ಬಿಡುಗಡೆ ಮಾಡಲಾಗಿದೆ. ಆಂಬುಲೆನ್ಸ್‍ಗಳಿಂದ ನಾಲವಾರ ಹಾಗೂ ಕೊಲ್ಲೂರು,ಕುಲಕುಂದಿ,ಸುಗೂರ ಎನ್,ತರಕಸಪೇಠ್, ಮಾರಡಗಿ,ಮಳಗ ಎನ್. ತುನ್ನೂರ,ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳ ಸಾರ್ವಜನಿಕರಿಗೆ ಗರ್ಭಿಣಿಯರಿಗೆ,ಹಿರಿಯ ವೃದ್ದರಿಗೆ,ತುರ್ತು ಆರೋಗ್ಯ ಸೇವೆ ಲಭ್ಯವಾಗಿಲಿದೆ ಎಂದು ತಿಳಿಸಿದರು.ಈ ನಾಲವಾರ ಪ್ರಾಥಮಿಕ ಆರೋಗ್ಯ ಮತ್ತು ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.