ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸುಗೂರ ಎನ್ ಗ್ರಾಮದ ನಿಸ್ವಾರ್ಥಿ ಸಮಾಜ ಸೇವಕ ಡಾ.ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರು ಮೇ.೧ ಕಾರ್ಮಿಕರ ದಿನಾಚರಣೆಯ ನಿಮಿತ್ತವಾಗಿ ನಾಲವಾರ ಹೋಬಳಿ ಘಟಕದಲ್ಲಿ ಬರುವ ಕ್ಷೌರದ ಅಂಗಡಿ ‘ಜನಪ್ರಿಯ ಹೇರ್ ಸಲೂನ್ ನಲ್ಲಿ ‘ಇಂದು 65 ಕ್ಕೊ ಹೆಚ್ಚು ಜನತೆಗೆ ಉಚಿತವಾಗಿ ಕ್ಷೌರ ಸೇವೆ ಸಲ್ಲಿಸಿದ್ದಾರೆ.ಹಿರಿಯ ವೃದ್ದರಿಗೆ ಹಾಗೂ ಅನಾಥ ಮಕ್ಕಳಿಗೆ ಉಚಿತ ಕ್ಷೌರ ಸೇವೆ ಸಲ್ಲಿಸಿ ಸ್ವಾರ್ಥತೆ ಪ್ರಮುಖವಾಗಿರುವ ಪ್ರಸ್ತುತ ದಿನಗಳಲ್ಲಿ ಅತ್ಯಂತ ಬೆಲೆಯುಳ್ಳ,ಅಪರೂಪದ್ದು ಎಂದರೆ ಅದು ಸಮಾಜ ಸೇವೆ.ಈ ಸಮಾಜದಲ್ಲಿರುವ ಅವಶ್ಯಕತೆಯಿರುವವರು,ಅಸಹಾಯಕರಿಗೆ ಸೇವೆ ನೀಡುವುದು,ಪರಿಸರ ಸಂರಕ್ಷಣೆ,ಆರೋಗ್ಯ,ಶಿಕ್ಷಣದ ಬಗ್ಗೆ ಜನಜಾಗೃತಿ,ಮಹನೀಯರ ಸಂದೇಶ ಸಮಾಜಕ್ಕೆ ಮುಟ್ಟಿಸುವುದು ಮತ್ತು ಸಮಾಜದ ಜನರನ್ನು ಜಾಗೃತಿ ಮೂಡಿಸುವುದು ಮತ್ತು ಸಮಾಜದ ಜನರನ್ನು ಸಮಾಜದ ಸಂಘಟನೆಯ ಕಡೆಗೆ ಗಮನ ಸೆಳೆಯುವ ಉದ್ದೇಶದಿಂದ,ಅವರಿಗೆ ಸಮಾಜದ ಕಡೆಗೆ ಬರುವಂತೆ ಸಮಾಜದ ಸಂಘಟನೆ ಮತ್ತಷ್ಟು ಚುರುಕು ಶಕ್ತಿಶಾಲಿ ಮಾಡುವುದು ಸೇರಿದಂತೆ ಮುಂತಾದ ಸಮಾಜಮುಖಿ ಕಾರ್ಯಗಳನ್ನು ನಿಸ್ವಾರ್ಥವಾಗಿ ಮಾಡುವ ನೈಜ ಸಮಾಜ ಸೇವಕರು ಡಾ.ಮಲ್ಲಿಕಾರ್ಜುನ ಬಿ.ಹಡಪದ ಸುಗೂರ ಎನ್ ಅವರು ಕಲಬುರಗಿ ಜಿಲ್ಲೆಯ ಸಂಘಟನಾ ಕಾರ್ಯದರ್ಶಿಗಳು ಆಗಿ ಸಮಾಜದ ಸೇವೆಯ ಕಾರ್ಯ ಕೆಲಸದ ಜೊತೆಯಲ್ಲಿ ಈ ರೀತಿಯ ಸೇವೆ ಸಲ್ಲಿಸುವುದು.ಇಂದು ಮೇ.1 ಕಾರ್ಮಿಕರ ದಿನಾಚರಣೆ ನಿಮಿತ್ಯ ವಾಗಿ ಅವರು ಮಾಡುವ ಈ ವಿಭಿನ್ನ ರೀತಿಯ ಸೇವೆಯನ್ನು ಮಾಡುವುದರ ಮೂಲಕ ಅನೇಕ ಸಮುದಾಯದ ಮೆಚ್ಚುಗೆ ಪಾತ್ರವಾದರು.ಇವರು ಈಗಾಗಲೇ 13 ಕಡೆಯಲ್ಲೂ ಸೇರಿದಂತೆ ಒಟ್ಟು 1350 ಕ್ಕೊ ಹೆಚ್ಚು ಅನಾಥರಿಗೆ,ಅಂದರೆ ಹಿರಿಯ ವೃದ್ದರಿಗೆ,ಪೌರ ಕಾರ್ಮಿಕರಿಗೆ,ಕಟ್ಟಡ ಕಾರ್ಮಿಕರಿಗೆ,ಸಾಧು-ಸಂತರಿಗೆ, ಅನಾಥ ಮಕ್ಕಳಿಗೆ,ನಿರ್ಗತಿಕರಿಗೆ,ಅಂಧರಿಗೆ,
ಅಂಗವಿಕಲರಿಗೆ,ಅನಾಥ ಶಾಲಾ ಮಕ್ಕಳಿಗೆ, ಅನಾಥಾಶ್ರಮ,ವೃದ್ದಾಶ್ರಮದ ನಿರ್ಗತಿಕರ ಕೇಂದ್ರ ಹಾಗೂ ಶಾಲೆಯ ಮಕ್ಕಳಿಗೆ ಮತ್ತು ಬಸ್ಸ್ಟಾಂಡ್ ನಲ್ಲಿ ಇರುವ ನಿರ್ಗತಿಕರಿಗೆ ತಮ್ಮ ಸ್ವತಃ ಕ್ಷೌರದ ಅಂಗಡಿಯಲ್ಲಿ ಸೇವೆ ಸಲ್ಲಿಸಿದ್ದಾರೆ.ಅವರು ಸಮಾಜದ ಸಂಘಟನೆಯ ಜೊತೆಗೆ ಈ ರೀತಿಯ ವಿಭಿನ್ನ ಸೇವೆ ಮಾಡುತ್ತಲೇ ಸಮಾಜದ ಹೆಸರು ಮತ್ತಷ್ಟು ಬೆಳಕಿಗೆ ತರುವ ಕೆಲಸ ಮಾಡುವ ಮೂಲಕ ಅವರಿಗೆ ಈಗಾಗಲೇ ಅನೇಕ ಸಂಘ ಸಂಸ್ಥೆಗಳಿಂದ ರಾಜ್ಯ ಮಟ್ಟದ ಹಾಗೂ ರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.ಈ ಸೇವೆ ನಿರಂತರವಾಗಿ ಅನೇಕ ಕಡೆಯಲ್ಲೂ ನಮ್ಮಿಂದ ಮತ್ತು ನಮ್ಮ ಸಮಾಜದ ಅನೇಕ ಮುಖಂಡರ ಸಹಕಾರದಿಂದ ಇನ್ನೂ ವಿವಿಧ ಕಡೆಯಲ್ಲೂ ಮತ್ತು ಅನೇಕ ಜಿಲ್ಲಾ ಮಟ್ಟದಲ್ಲಿ ಸಹ ಈ ರೀತಿಯ ಉಚಿತ ಕ್ಷೌರ ಸೇವೆ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದೇವೆ ಎಂದು ತಿಳಿಸಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.