ವಿಜಾಪುರ ಲೋಕಸಭಾ ಚುನಾವಣೆಗೆ ಸ್ಪಧಿ೯ಸಿರುವ ಅಭ್ಯರ್ಥಿ ಜಿತೇಂದ್ರ ಕಾಂಬಳೆ ಕರೆದ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಈ ದೇಶದ ಜನರನ್ನು ಸುಳ್ಳು ಪ್ರಣಾಳಿಕೆ ಬಿಡುಗಡೆ ಮಾಡುವ ಮೂಲಕ ಮತದಾರರನ್ನು ಮತ್ತು ಈ ದೇಶದ ಜನರನ್ನು ಮೋಸ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು ಆಗಿನ ಕಾಂಗ್ರೆಸ್ ಬಾಬಾ ಸಾಹೇಬ ಅಂಬೇಡ್ಕರನ್ನು ಸಂವಿಧಾನ ಕರಡು ರಚನಾ ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡುವುದನ್ನು ತಪ್ಪಿಸಲು ಅನೇಕ ಹುನ್ನಾರ ನಡೆಸಿತ್ತು ಅವರು ಸ್ಪಷ್ಟಪಡಿಸಿದ ಕ್ಷೇತ್ರ ಪಾಕಿಸ್ತಾನದ ಪಾಲಾದಾಗ ಮತ್ತೆ ಅವರನ್ನು ಜಯಶಾಲಿ ಮಾಡಿದ್ದು ಅಲ್ಪಸಂಖ್ಯಾತರು ಹೆಚ್ಚಿರುವ ಕ್ಷೇತ್ರ,ಅವರು ಈ ದೇಶದ ಬಡವರ,ಹಿಂದುಳಿದವರ ವರ್ಗದ ಧ್ವನಿಯಾಗಿ ಸಂವಿಧಾನವನ್ನು ರಚಿಸಿದ್ದಾರೆ ಅಂತಹ ಸಂವಿಧಾನವನ್ನು ಬಿಜೆಪಿಯ ಕೆಲವು ಸಂಸದರು ಬದಲಾಯಿಸುವುದಾಗಿ ಹೇಳುತ್ತಿರುವುದು ವಿಪರ್ಯಾಸ.ಸಂವಿಧಾನ ಭೂಮಿಯ ಮೇಲೆ ಸೂರ್ಯ ಚಂದ್ರ ಇರುವವರೆಗೂ ಇರುತ್ತದೆ ಅದನ್ನು ಬದಲಾವಣೆ ಮಾಡಿದರೆ ಈ ದೇಶದಲ್ಲಿ ರಕ್ತ ಕ್ರಾಂತಿಯಾಗುತ್ತದೆ ಎಂದು ಹೇಳಿದರು.
ಬಾಬ್ರಿ ಮಸೀದಿಯನ್ನು ಕೆಡವಿದ್ದು ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಎಂದು ಆರೋಪ ಮಾಡಿದರು ನನ್ನನ್ನು ಈ ಬಾರಿ ಸಂಸದನಾಗಿ ಆಯ್ಕೆ ಮಾಡಿದರೆ ಕ್ಷೇತ್ರದ ನೀರಾವರಿ ಶಿಕ್ಷಣ ಉದ್ಯೋಗ ಆರೋಗ್ಯ ಮತ್ತು ಆರ್ಥಿಕ ಸ್ಥಿತಿ ಸುಧಾರಣೆ ಮತ್ತು ಕ್ಷೇತ್ರದ ಸವ೯ತೋಮುಖದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಚಂದ್ರು ಮೇಲಿನಮನಿ ಜಿಲ್ಲಾ ಉಪಾಧ್ಯಕ್ಷ ಪರಶುರಾಮ ಹೊಸಮನಿ ತಾಲೂಕು ಕಾಯ೯ದಶಿ೯ಯಾದ ಪರಶುರಾಮ ಉಕ್ಕಲಿ ಜೊತೆಗಿದ್ದರು.
ವರದಿ-ಮನೋಜ್ ನಿಂಬಾಳ