ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಗೋವಿನ ಕೋವಿ ಗ್ರಾಮಸ್ಥರು ಇಂದು ಕುಡಿಯುವ ನೀರಿಗಾಗಿ ಗ್ರಾಮ ಪಂಚಾಯಿತಿಗೆ ಬೀಗ ಜಡಿದು ಪ್ರತಿಭಟನೆಯನ್ನು ನಡೆಸಿದರು.
ಗೋವಿನ ಕೋವಿ ಗ್ರಾಮ ಸುಮಾರು ಏಳುನೂರು ಮನೆಯನ್ನು ಹೊಂದಿದ ಗ್ರಾಮವಾಗಿದ್ದು ಈ ಗ್ರಾಮವು ತುಂಗಭದ್ರಾ ನದಿಯ ದಡದ ಮೇಲಿದೆ ಆದರೂ ಈ ಗ್ರಾಮದಲ್ಲಿ ಕಳೆದ ಮೂರು ನಾಲ್ಕು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ಇದ್ದರೂ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಗ್ರಾಮ ಪಂಚಾಯಿತಿಯ ಆಡಳಿತ ಅಧಿಕಾರಿಗಳು ಈ ಸಮಸ್ಯೆಯ ಬಗ್ಗೆ ಗಮನ ಹರಿಸದೆ ಇರುವುದು ತುಂಬಾ ದುರದೃಷ್ಟಕರ ಆದ್ದರಿಂದ ಇಂದು ಗ್ರಾಮಸ್ಥರು ಬೆಳಗ್ಗೆ 10 ಗಂಟೆಯಿಂದ ಗ್ರಾಮ ಪಂಚಾಯಿತಿ ಬೀಗ ಜಡಿದು ಪ್ರತಿಭಟನೆಯನ್ನು ಆರಂಭಿಸಿದ್ದಾರೆ.ಸ್ಥಳಕ್ಕೆ ಅಧಿಕಾರಿಗಳು ಬರುವವರೆಗೂ ಬಂದು ನಮಗೆ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವವರೆಗೂ ಗ್ರಾಮ ಪಂಚಾಯಿತಿಯ ಬೀಗವನ್ನು ತೆರವು ಪಡಿಸುವುದಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಕುಡಿಯುವ ನೀರಿಗಾಗಿ ಗ್ರಾಮದ ಜನರು ಗಾಡಿ ಕಟ್ಟಿಕೊಂಡು ಮತ್ತು ಟ್ರಾಕ್ಟರ್ ಗಳ ಮೇಲೆ ನಮ್ಮ ಹೊಲಗಳಲ್ಲಿ ಪಂಪ್ಸೆಟ್ ಗಳಿಂದ ನೀರು ತುಂಬಿ ಕೊಂಡು ತರುತ್ತೇವೆ.
ನಮ್ಮ ಗ್ರಾಮದಲ್ಲಿ ನಾಲ್ಕು ಬೋರುಗಳಿದ್ದು ಮತ್ತು ಜಲಜೀವನ್ ಮಿಷನ್ ಮನೆ ಮನೆಗೆ ಗಂಗೆ ಎಂಬ ಕಾಮಗಾರಿ ಮುಗಿದರೂ ಕಾಮಗಾರಿಯನ್ನು ಗ್ರಾಮ ಪಂಚಾಯಿತಿ ತಮ್ಮ ವಶಕ್ಕೆ ಒಪ್ಪಿಸಿಕೊಂಡರು ನಮಗೆ
ಮನೆ ಮನೆಗೆ ಗಂಗೆ ತಲುಪದೇ ಇರುವುದು ಒಂದು ಮರೀಚಿಕೆಯಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನಾಗರಾಜ್ ಎಚ್,ಮಧುಸೂದನ್, ಸತೀಶ್,ರಂಗನಾಥ,ಮಂಜು ಮಾಳಿಗೆ ಸಿದ್ದೇಶ್ ಹಾಗೂ ಇತರರು ಇದ್ದರು
ವರದಿ-ಪ್ರಭಾಕರ್ ಡಿ.ಎಂ