ಬೀದರ ಲೋಕಸಭಾ ಕ್ಷೇತ್ರದ ಬೀದರ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಗದಲ ಗ್ರಾಮದಲ್ಲಿ ನಡೆದ ಪ್ರಚಾರದಲ್ಲಿ ಮಾಜಿ ಶಾಸಕರಾದ ಶ್ರೀ ಅಶೋಕ್ ಖೇಣಿ ಅವರು ಭಾಗವಹಿಸಿ,ಮತ ಯಾಚಿಸಿದರು ಹಾಗೂ ಅಭಿವೃದ್ಧಿಯ ನಾಳೆಗಾಗಿ, ನೆಮ್ಮದಿಯ ನಾಳೆಗಾಗಿ ಬೀದರ್ ನ ಜನತೆ ಕಾಂಗ್ರೆಸ್ ಜೊತೆಗಿದ್ದಾರೆ ಎಂದು ಮಾಜಿ ಶಾಸಕ ಅಶೋಕ್ ಖೇಣಿ ಅವರು ತಿಳಿಸಿದರು.
ನಂತರ ಮಧ್ಯಾಹ್ನದ ಸಮಯದಲ್ಲಿ ಬೀದರ ಲೋಕಸಭಾ ಕ್ಷೇತ್ರದ ಬೀದರ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೀನಕೇರಾ ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಬೀದರ್ ಲೋಕಸಭಾ ಅಭ್ಯರ್ಥಿಯಾದ ಶ್ರೀಸಾಗರ್ ಈಶ್ವರ್ ಖಂಡ್ರೆ ರವರು ಕಾಂಗ್ರೆಸ್ ಗೆ ಮತ ನೀಡಿ ಅಭಿವೃದ್ಧಿಗೆ ಕೈ ಜೋಡಿಸಿ ಎಂದು ಮನವಿ ಮಾಡಿದರು.
ಬೀದರ ಜಿಲ್ಲೆಗೆ ಮೂಲಸೌಕರ್ಯವನ್ನು ಒದಗಿಸಿ, ಬೀದರ್ ಅನ್ನು ಸಮಗ್ರ ಅಭಿವೃದ್ಧಿಗೊಳಿಸುವುದೇ ನನ್ನ ಗುರಿ ಎಂದು ತಿಳಿಸಿದ್ದಾರೆ.ಕ್ಷೇತ್ರದ ಅಭಿವೃದ್ಧಿಗಾಗಿ ರೂಪಿಸಿರುವ ಯೋಜನೆಗಳ ಕುರಿತು ಜನತೆಗೆ ತಿಳಿಸಿ, ತಮ್ಮ ಸೇವೆಗೆ ಅವಕಾಶ ಮಾಡಿಕೊಬೇಕೆಂದು ಮನವಿ ಮಾಡಿದರು ಹಾಗೂ ವಿವಿಧ ಪಕ್ಷಗಳ ಮುಖಂಡರು ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಚಂದ್ರಶೇಖರ ಚೆನ್ನಶೆಟ್ಟಿ,
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸಂಗ್ರಾಮ, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ:ರೋಹನ್ ವಾಘಮಾರೆ