ಉತ್ತರ ಕನ್ನಡ ಜಿಲ್ಲೆಯ ಶಿರಸಿ ಶ್ರೀ ಸೋಂದಾ ಸ್ವರ್ಣವಲ್ಲೀ ಮಠದ ಸುಧರ್ಮಾ ಸಭಾ ಭವನ ಹಾಗೂ ಯೋಗ ಮಂದಿರ ಇಲ್ಲಿ ದಿನಾಂಕ 11.05.2024 ಮತ್ತು 12.05.224ರಂದು ಶ್ರೀ ಶಂಕರ ಜಯಂತಿ – ದಾರ್ಶನಿಕರ ದಿನವನ್ನು ಆಚರಿಸಲಾಗುವುದು ಎಂದು ಮಠದ ಪ್ರಕಟಣೆ ತಿಳಿಸಿದೆ.
ದಿನಾಂಕ 11.05.2024ರ ಬೆಳಿಗ್ಗೆ 10ರಿಂದ ಮಾತೆಯರಿಂದ ಶ್ರೀ ಶಂಕರ ಸ್ತೋತ್ರ ಪಾರಾಯಣ ಮತ್ತು ಸಂಜೆ 4.30ರಿಂದ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು,ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಹಾಗೂ ಪರಮಪೂಜ್ಯ ಶ್ರೀ ಶ್ರೀಮದ್ ಆನಂದಬೋದೇಂದ್ರ ಸರಸ್ವತೀ ಸ್ವಾಮಿಗಳು,ಶ್ರೀ ಸೋಂದಾ ಸ್ವರ್ಣವಲ್ಲೀ ಮಠ ಇವರುಗಳ ದಿವ್ಯ ಉಪಸ್ಥಿತಿ ಇದ್ದು ಪರಮ ಪೂಜ್ಯ ಶ್ರೀ ಪ್ರಣವಾನಂದ ತೀರ್ಥ ಮಹಾಸ್ವಾಮಿಗಳು,ಅದ್ವೈತ ವಿದ್ಯಾಶ್ರಮ,ಹುಬ್ಬಳ್ಳಿ ಇವರು ಅಭ್ಯಾಗತರಿರುವರು. ಇದೇ ಸಂದರ್ಭದಲ್ಲಿ ಕಲಬುರ್ಗಿ ಶ್ರೀ ಸತ್ಯಸಾಯಿ ಮಾನವ ಅಭ್ಯದಯ ವಿಶ್ವ ವಿದ್ಯಾಲಯದ ಪ್ರಾದ್ಯಾಪಕ ಡಾ.ಶ್ರೀಧರ ಭಟ್ಟ,ಐನಕೈ ಇವರಿಗೆ “ಸಾಧನ ಶಂಕರ” ಪ್ರಶಸ್ತಿಯನ್ನು ವಿದ್ವತ್ ಪೂರ್ವಕವಾಗಿ ಪ್ರಧಾನ ಮಾಡಲಾಗುವುದು.
ದಿನಾಂಕ 12.05.2024ರ ಬಾನುವಾರ ಶಿರಸಿಯ ಯೋಗ ಮಂದಿರದಲ್ಲಿ ಸಂಜೆ 4ಗಂಟೆಯಿಂದ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು,ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಹಾಗೂ ಪರಮಪೂಜ್ಯ ಶ್ರೀ ಶ್ರೀಮದ್ ಆನಂದಬೋದೇಂದ್ರ ಸರಸ್ವತೀ ಸ್ವಾಮಿಗಳು,ಶ್ರೀ ಸೋಂದಾ ಸ್ವರ್ಣವಲ್ಲೀ ಮಠ ಇವರುಗಳ ದಿವ್ಯ ಸಾನಿಧ್ಯದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು ಬೆಂಗಳೂರಿನ ಶ್ರೀ ರಾಮಕೃಷ್ಣ ಮಠದ ಶ್ರೀ ವೀರೇಶಾನಂದ ಸ್ವಾಮೀಜಿ ಇವರು ಅಬ್ಯಾಗತರಿರುವರು.ಇದೇ ಸಂದರ್ಭದಲ್ಲಿ ಚಿಕ್ಕಮಗಳೂರು ಶ್ರೀ ಕ್ಷೇತ್ರ ಶಕಟಪುರಂ ಶ್ರೀ ವಿದ್ಯಾಪೀಠದ ಆಸ್ಥಾನ ವಿದ್ವಾನ್ ವಿದ್ಯಾಭೂಷಣ ಶ್ರೀ ಮಧುಸೂದನ ಶಾಸ್ತ್ರಿ ಹಂಪಿಹೊಳಿ ಇವರಿಗೆ “ಸಾಧನಾ ಶಂಕರ” ಪ್ರಶಸ್ತಿಯನ್ನು ವಿದ್ವತ್ ಸನ್ಮಾನ ಪೂರ್ವಕ ಪ್ರಧಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಕಾರ್ಯಕ್ರಮದ ಕೊನೆಯಲ್ಲಿ ಶ್ರೀ ವರದಪುರದ ಮಹಾಯೋಗಿ ನಾಟಕ ಪ್ರದರ್ಶನ ಏರ್ಪಡಸಲಾಗಿದೆ.