ಕಲಬುರಗಿ:ಕಲ್ಯಾಣ ಕರ್ನಾಟಕ ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಾದ ಮಂಜುನಾಥ ನಾಲವಾರಕರ ಅವರು ಮಾತನಾಡುತ್ತಾ
ಹೈದ್ರಾಬಾದ ಕರ್ನಾಟಕ ಸಂವಿಧಾನದ 371ನೇ ಕಲಂ ತಿದ್ದುಪಡಿಗಾಗಿ ಹೋರಾಟ ನಡೆಯುತ್ತಿರುವ ಸಂದರ್ಭದಲ್ಲಿ ಅಂದಿನ ಬಿಜೆಪಿ ಸರಕಾರದ ಗೃಹಸಚಿವರಾದ ಎಲ್.ಕೆ.ಅಡ್ವಾಣಿಯವರು ಸಂವಿಧಾನ 371ನೇ ಕಲಂ ತಿದ್ದುಪಡಿಗೆ ನಿರಾಕರಿಸಿದ್ದು ನಂತರ ಕಲಬುರಗಿ ಲೋಕಸಭೆಯ ಮೀಸಲು ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಾ.ಮಲ್ಲಿಕಾರ್ಜುನ ಖರ್ಗೆಜಿ ಅವರು ಸ್ಪರ್ಧಿಸಿದ್ದು, ಕಲಬುರಗಿ ಜಿಲ್ಲೆಯ ಎಲ್ಲಾ ಮತದಾರರು ಅವರಿಗೆ ಮತಗಳನ್ನು ನೀಡುವ ಮೂಲಕ ಈ ಭಾಗದ ಧ್ವನಿಯಾಗಲು ಅವಕಾಶ ನೀಡಿದ ಪ್ರಯುಕ್ತ ಕೇಂದ್ರದಲ್ಲಿ ಕಾರ್ಮಿಕ ಸಚಿವರಾಗಿ,ರೈಲ್ವೆ ಸಚಿವರಾಗಿ ಕೆಲಸ ಮಾಡಲು ಅವಕಾಶ ದೊರಕಿದ ಸಂದರ್ಭದಲ್ಲಿ ಖರ್ಗೆಜಿ ಧರ್ಮಸಿಂಗರವರ ಪ್ರಯತ್ನದಿಂದ ಹೈದ್ರಾಬಾದ ಕರ್ನಾಟಕ ಸಂವಿಧಾನ 371ನೇ ಕಲಂ ತಿದ್ದುಪಡಿಯ ಹೋರಾಟ ರೂವಾರಿಗಳಾದ ದಿ.ವೈಜನಾಥ ಪಾಟೀಲರವರ ಮತ್ತು ಈ ಭಾಗದ ಎಲ್ಲಾ ಸಂಘಟನೆಗಳ ಹೋರಾಟದ ಫಲವಾಗಿ ಖರ್ಗೆಜಿ ಧರ್ಮಸಿಂಗರವರು ಹೈದ್ರಾಬಾದ ಕರ್ನಾಟಕ ಸಂವಿಧಾನ 371ನೇ ಕಲಂ (ಜೆ) ತಿದ್ದುಪಡಿ ಮಾಡುವ ಮೂಲಕ ಈಗಿರುವ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಸುಮಾರು ಅನುದಾನ ಬರುವ ಮೂಲಕ ಈ ಭಾಗದಲ್ಲಿ ಅಭಿವೃದ್ಧಿಗೆ ಹೆಚ್ಚಿನ ಪ್ರಾತಿನಿಧ್ಯ ದೊರೆತಿದೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಮತ್ತು ಮಲ್ಲಿಕಾರ್ಜುನ ಖರ್ಗೆಜಿಯವರು ಸ್ಪರ್ಧಿಸಿದ್ದು,ಅವರು ಕೇಂದ್ರ ಸಚಿವರಾಗಿ ತಂದಂತಹ ಯೋಜನೆಗಳು ವಿಭಾಗಿಯ ರೈಲ್ವೆ ಕಚೇರಿ,ರೈಲ್ವೆ ಬೋಗಿ ಕಾರ್ಖಾನೆ, ಕಲಬುರಗಿ ನಗರದಲ್ಲಿ 24X7 ಕುಡಿಯುವ ನೀರು ಯೋಜನೆ ಸೇರಿದಂತೆ ಅನೇಕ ಯೋಜನೆಗಳು ಈ ಭಾಗಕ್ಕೆ ತಂದಿರುತ್ತಾರೆ ಆದರೆ ನಾವು ಕಲಬುರಗಿ ಜನತೆ ಮತ್ತೊಮ್ಮೆ ಖರ್ಗೆಜಿಯವರನ್ನು ಕಳೆದ ಬಾರಿ ಲೋಕಸಭೆಯ ಕಳಿಸುವಂತೆ ವಿಫಲವಾಗಿದ್ದು,ಅದರ ಪರಿಣಾಮ ಈ ಭಾಗಕ್ಕೆ ಸಿಗಬೇಕಾದ ಯೋಜನೆಗಳು ಸದ್ಯದಲ್ಲಿರುವ ಲೋಕಸಭೆಯ ಸದಸ್ಯರಿಂದ ನೀರಿಕ್ಷೆಯ ಮಟ್ಟಿಗೆ ಅಭಿವೃದ್ಧಿವಾಗಲಿಲ್ಲವೆಂಬುದು ದುಃಖದ ಸಂಗತಿ.
ಕಲಬುರಗಿ ಲೋಕಸಭೆಯ ಮೀಸಲು ಮತಕ್ಷೇತ್ರ 2024ರಲ್ಲಿ ಈ ಭಾರಿ ಸರಳ ಸಜ್ಜನಿಕೆಯ ವ್ಯಕ್ತಿ ಎಲ್ಲಾ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ಭಾಗಕ್ಕೆ ಕೈತಪ್ಪಿರುವ ಯೋಜನೆಗಳು ಮರಳಿ ನಮ್ಮ ಕಲಬುರಗಿ ಜಿಲ್ಲೆಯ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷದ ಲೋಕಸಭೆಯ ಅಭ್ಯರ್ಥಿಯಾದ ಶ್ರೀರಾಧಾಕೃಷ್ಣ ದೊಡಮನಿಯವರನ್ನು ನಮ್ಮ ಧ್ವನಿಯಾಗಿ ಕಲಬುರಗಿ ಜಿಲ್ಲೆಯ ಎಲ್ಲಾ ಪ್ರಜ್ಞಾವಂತ ಮತದಾರರಲ್ಲಿ ಕಲ್ಯಾಣ ಕನ್ನಡಪರ ಸಂಘಟನೆಗಳ ಒಕ್ಕೂಟ ಮೇ 07ರಂದು ತಪ್ಪದೆ ಎಲ್ಲರೂ ಮತದಾನ ಮಾಡುವ ಮೂಲಕ ಕಲಬುರಗಿಯ ಅಭಿವೃದ್ಧಿಗಾಗಿ ರಾಧಕೃಷ್ಣರವರನ್ನು ನಿಮ್ಮ ಧ್ವನಿಯಾಗಲು ಮತದಾನ ಮಾಡಲು ಮನವಿ ಮಾಡಿಕೊಳ್ಳುತ್ತೇವೆ ಎಂದರು.
ಈ ಸಂದರ್ಭದಲ್ಲಿ ಸಚಿನ ಫರಹತಾಬಾದ ಅಧ್ಯಕ್ಷರು ಜೈ ಕನ್ನಡಿಗರ ರಕ್ಷಣಾ ವೇದಿಕೆ,
ಮಂಜುನಾಥ ನಾಲವಾರಕರ ಅಧ್ಯಕ್ಷರು ಕಲ್ಯಾಣ ಕರ್ನಾಟಕ ಸಮರ ಸೇನೆ,
ಗೋಪಾಲ ನಾಟೀಕರ
ವಿಭಾಗಿಯ ಪ್ರಧಾನ ಕಾರ್ಯದರ್ಶಿಗಳು ಕರವೇ ಪ್ರವೀಣ ಶೆಟ್ಟಿ బణ,
ದತ್ತು ಭಾಸೆಗಿ ಅಧ್ಯಕ್ಷರು ಜೈ ಕನ್ನಡಿಗರ ಸೇನೆ,
ಸಂದೀಪ ಭರಣಿ ಅಧ್ಯಕ್ಷರು ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ,
ಸೋಮನಾಥ್ ಕಟ್ಟಿಮನಿ ಅಧ್ಯಕ್ಷರು ಕನ್ನಡ ಸೇನೆ,
ವಿಠ್ಠಲ ವಲೀಕರ ಅಧ್ಯಕ್ಷರು ಕರ್ನಾಟಕ ದಲಿತ ಸವೋದಯಾ ಸಮಿತಿ,
ರವಿ ದಿಗಾoವ ಅಧ್ಯಕ್ಷರು ಕರ್ನಾಟಕ ನವ ನಿರ್ಮಾಣ ಸೇನೆ,
ದತ್ತು ಅಯ್ಯಾಳಕರ
ಅಧ್ಯಕ್ಷರು ಕಲ್ಯಾಣ ಕರ್ನಾಟಕ ಸೇನೆ,
ನಾಗರಾಜ ಸ್ವಾದಿ ಅಧ್ಯಕ್ಷರು ಕನ್ನಡ ನಾಡು ವೇದಿಕೆ,
ಮುತ್ತಣ್ಣ ನಾಡಗೇರಿ ಅಧ್ಯಕ್ಷರು ಕಲ್ಯಾಣ ಕರ್ನಾಟಕ ವಿಕಾಸ ವೇದಿಕೆ,
ಜೈರಾಜ ಕಿಣಗಿಕರ ವಿಭಾಗೀಯ ಅಧ್ಯಕ್ಷರು ಕರ್ನಾಟಕ ರಕ್ಷಣಾ ವೇದಿಕೆ ಸ್ವತಂತ್ರ ಬಣ,
ಶರಣು ಹೊಸಮನಿ
ಅಧ್ಯಕ್ಷರು ಕರವೇ ಶಿವರಾಮೇಗೌಡ ಬಣ,
ಸಿದ್ದು ಜಮಾದಾರ
ಅಧ್ಯಕ್ಷರು ಕನ್ನಡ ರಕ್ಷಣಾ ವೇದಿಕೆ,
ಶರಣಯ್ಯ ಹಿರೇಮಠ
ಅಧ್ಯಕ್ಷರು ವಿಜಯಕರ್ನಾಟಕ ರಕ್ಷಣಾ ವೇದಿಕೆ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ವರದಿ-ಮೊಹಮ್ಮದ್ ಅಲಿ