ಉತ್ತರ ಕನ್ನಡ/ಮುಂಡಗೋಡ:ಲೋಕಸಭಾ ಚುನಾವಣೆ ಅಂಗವಾಗಿ ಕೆನರಾ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಪ್ರಚಾರ ಕಾರ್ಯಕ್ರಮ ಪ್ರಜಾದ್ವನಿ 2.O ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು ಉತ್ತರ ಕನ್ನಡ ಜಿಲ್ಲೆಯ ಜನತೆ ರಾಜಕೀಯವಾಗಿ ಪ್ರಭುದ್ದರು,ಈ ಬಾರಿ ಮೇ 7 ರಂದು ಅಭಿವೃದ್ದಿಪರ ಸರ್ಕಾರಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸುತ್ತಾರೆ ನರೇಂದ್ರ ಮೋದಿ ಪ್ರಧಾನ ಮಂತ್ರಿಗಳಾಗಿ 10 ವರ್ಷಗಳು ಕಳೆದವು ಅವರು ಮಾಡಿದ ಕೆಲಸ ಏನೂ ಇಲ್ಲ ಬರೀ ಸುಳ್ಳು ಹೇಳಿ ಜನರ ದಾರಿ ತಪ್ಪಿಸುತ್ತಿದ್ದಾರೆ.ಜಾತಿ ಧರ್ಮ ಗಳ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದು,ಅಧಿಕಾರಕ್ಕೆ ಬಂದ 100 ದಿನಗಳಲ್ಲಿ ವಿದೇಶಿ ಬ್ಯಾಂಕ್ ಗಳಲ್ಲಿ ಇರುವ ಕಪ್ಪು ಹಣ ವಾಪಸ್ ಭಾರತಕ್ಕೆ ತರುತ್ತೇವೆ ಮತ್ತು ಪ್ರತಿ ಭಾರತೀಯರ ಕೈಗೆ 15 ಲಕ್ಷ ನೀಡುತ್ತೇವೆ ಎಂದಿದ್ದರು ಈಗ ಏನಾಯಿತು ಎಂದು ಪ್ರಶ್ನಿಸಿದರು.ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡ್ತೀವಿ ಅಂತ ಹೇಳಿ ಯುವಕರಿಗೆ ಪಕೋಡಾ ಮಾರಲು ಹೇಳುತ್ತಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಯುವಕರು ಮೋದಿ ಮೋದಿ ಅಂತ ಕೂಗು ಹಾಕುತ್ತಾರೆ ಆದರೆ ಮೋದಿ ಅವರಿಗೆ ತಿರುಪತಿ ನಾಮ ಹಾಕಿಬಿಟ್ಟರು ಎಂದು ವ್ಯಂಗ್ಯ ಮಾಡಿದರು.ಡೀಸೆಲ್,ಪೆಟ್ರೋಲ್ ಬೆಲೆ ಏರಿಸಿದ್ದೆ ಮೋದಿ ಸರ್ಕಾರದ ಸಾಧನೆ,ಆಹಾರ ಭದ್ರತಾ ಕಾಯ್ದೆ ದೇಶಕ್ಕೆ ಕಾಂಗ್ರೆಸ್ ಸರ್ಕಾರದ ಕೊಡುಗೆ ಬಿಜೆಪಿ ಅವರು ದೇಶಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು.ರಾಜ್ಯದ ಕಾಂಗ್ರೆಸ್ ಸರ್ಕಾರ,ಚುನಾವಣೆ ಪೂರ್ವದಲ್ಲಿ ಗ್ಯಾರಂಟಿ ಯೋಜನೆಗಳ ನ್ನು ಘೋಷಣೆ ಮಾಡಿ ಬಳಿಕ ಅದನ್ನು ಸಮರ್ಥವಾಗಿ ಅನುಷ್ಠಾನ ಮಾಡಿದೆ ಇದು ನಮ್ಮ ಸಾಧನೆ ಎಂದು 5 ಗ್ಯಾರಂಟಿ ಗಳ ಬಗ್ಗೆ ವಿಸ್ತೃತ ಮಾಹಿತಿ ನೀಡಿದರು.ಭಾರತ ದೇಶದ ಪ್ರಜಾಪ್ರಭುತ್ವ,ಸಂವಿಧಾನ ರಕ್ಷಣೆ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಅದಕ್ಕಾಗಿ ಎಲ್ಲರೂ ಮೇ 07 ಕ್ಕೆ ತಪ್ಪದೆ ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸಿ ಎಂದರು.
ಬಳಿಕ ಮಾತನಾಡಿದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಇವತ್ತು ಮುಂಡಗೋಡ ಕ್ಕೆ ಪ್ರಜಾ ಧ್ವನಿ ಯಾತ್ರೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಆಚಾರ ವಿಚಾರಗಳನ್ನು ಪ್ರಚಾರ ಮಾಡಲು ನಾವು ಬಂದಿದ್ದೇವೆ.ಕಾಂಗ್ರೆಸ್ ಯಾವತ್ತಿದ್ದರೂ ಬಡವರ ದೀನದಲಿತರ ಸಂಕಷ್ಟ ಗಳಿಗೆ ಆಸರೆಯಾಗುವ ಪಕ್ಷ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಉತ್ತರ ಕನ್ನಡ ಜಿಲ್ಲೆಯ ಅತಿಕ್ರಮಣ ಸಮಸ್ಯೆ ಸಿ ಆರ್ ಝೆಡ್ ಸಮಸ್ಯೆಗಳ ನಿವಾರಣೆ ಮಾಡಲಾಗುವುದು ಎಂದರು. ಕೇಂದ್ರ ಸರ್ಕಾರಕ್ಕೆ ನಮ್ಮ ಪಾಲಿನ ತೆರಿಗೆ ಹಣ ನೀಡಿ ಎಂದು ವಿನಂತಿಸಿಕೊಂಡರು ನಮ್ಮ ಮನವಿ ಕೇಳಿಸಿಕೊಳ್ಳಲಿಲ್ಲ ಬಳಿಕ ಸುಪ್ರೀಂ ಕೋರ್ಟ್ ಮೂಲಕ 6 ತಿಂಗಳ ಬಳಿಕ ಹೋರಾಟ ನಡೆಸಿ 3500 ಕೋಟಿ ತೆರಿಗೆ ಪಾಲು ಪಡೆದಿದ್ದೇವೆ ಎಂದರು.ಕಾಂಗ್ರೆಸ್ ನಲ್ಲಿರುವ ನಾವುಗಳು ಹಿಂದೂಗಳೇ,ನಾವು ದೇವಸ್ಥಾನ ಕಟ್ಟಿದ್ದೇವೆ,ಹಿಂದೂಗಳ ಉದ್ದಾರಕ್ಕೆ ಕೊಡುಗೆ ನೀಡಿದ್ದೇವೆ.ಈ ಬಾರಿಯ ಲೋಕಸಭಾ ಚುನಾವಣೆ ಬದುಕು ಮತ್ತು ಭಾವನೆಗಳ ನಡುವಿನ ಚುನಾವಣೆ ಎಂದರು.ವೇಳೆ ಏರಿಕೆಯಿಂದ ಜನರು ಕಂಗೆಟ್ಟಿದ್ದಾರೆ.ರಾಹುಲ್ ಗಾಂಧಿ ಅವರ ಭಾರತ ಜೋಡೋ ಯಾತ್ರೆ, ಮೇಕೆದಾಟು ಪಾದಯಾತ್ರೆ ಗಳಿಂದ ಜನರ ಸಂಕಷ್ಟ ಅರಿತಿದ್ದೇವೆ ಸಣ್ಣ ಸಣ್ಣ ಮನಸ್ತಾಪಗಳು ಇದ್ದಾವೆ ಅವುಗಳನ್ನು ಬಗೆಹರಿಸಿಕೊಂಡು ಈ ಬಾರಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಭಾವುಟ ಹಾರಿಸೋಣ ಎಂದರು.
ಇದಕ್ಕೂ ಮೊದಲು ಮಾತನಾಡಿದ ಭೀಮಣ್ಣ ನಾಯ್ಕ ಜಿಲ್ಲೆಯಲ್ಲಿ ಪರೇಶ ಮೇಸ್ತ ಸಾವಿನ ವಿಚಾರದಲ್ಲಿ ಬಿಜೆಪಿ ಅವರು ರಾಜಕೀಯ ಮಾಡಿದರು,ಶಾಸಕನಾಗಿ ಏನೂ ಮಾಡದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಜನ ವಿಧಾನಸಭಾ ಚುನಾವಣೆಯಲ್ಲಿ ಸೋಲಿಸಿದ್ದಾರೆ, ಅದು ಲೋಕಸಭಾ ಚುನಾವಣೆಯಲ್ಲಿ ಪುನರಾವರ್ತನೆ ಆಗಬೇಕು ಎಂದರು ಜನಪರ ಸರ್ಕಾರ ಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸಿ ಎಂದು ಕರೆಕೊಟ್ಟರು.
ಹಾನಗಲ್ ಶಾಸಕ ಶ್ರೀನಿವಾಸ್ ಮಾನೆ ಮಾತನಾಡಿ ದೇಶದಲ್ಲಿ 10 ವರ್ಷದಿಂದ ತಲೆ ಎತ್ತಿರುವ ನಾಟಕ ಕಂಪನಿ ಬಂದ್ ಮಾಡಬೇಕಿದೆ ಜಾದೂಗಾರ ನೊಬ್ಬನ ಆಟ ನಿಲ್ಲಿಸಬೇಕು , ಎಲೆಕ್ಷನ್ ಬಂದಾಗ ಒಂದೊಂದು ಸುಳ್ಳು ಹೇಳುವ ಬಿಜೆಪಿ ಅವರನ್ನು ರಾಜ್ಯದಿಂದ ಹೊರಹಾಕಬೇಕು 30 ವರ್ಷಗಳಿಂದ ಉತ್ತರ ಕನ್ನಡ ಜಿಲ್ಲೆಗೆ ಹಿಡಿದಿರುವ ಗ್ರಹಣ ಬಿಡಿಸಬೇಕಿದೆ ಎಂದರು.
ತಾಲೂಕ ಕುರುಬ ಸಮಾಜ, ಬಂಜಾರ ಸಮಾಜ, ಮುಸ್ಲಿಂ ಸಮಾಜ, ತೆರಹಿ ಸಹಾರ ಟ್ರಸ್ಟ್ ನವರು, ಮತ್ತು ಟಿಬೆಟಿಯನ್ ಸಮುದಾಯದವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಶಾಲು ,ಪೇಟ ತೊಡಿಸಿ ಸನ್ಮಾನಿಸಿದರು,ಇದೇವೇಳೆ ಕುರುಬ ಸಮಾಜ ದ ಯುವಕರು ಮುಖ್ಯ ಮಂತ್ರಿ ಗಳಿಗೆ ಕಂಬಳಿ ತೊಡಿಸಿ, ಕುರಿ ಮರಿ ನೀಡುವ ಮೂಲಕ ವಿಶೇಷವಾಗಿ ಸನ್ಮಾನಿಸಿದರು.
ಇದೇವೇಳೆ ಮಾಜಿ ಶಾಸಕ ವಿ ಎಸ್ ಪಾಟೀಲ್ , ಆಡಳಿತ ಸುಧಾರಣೆ ಆಯೋಗದ ಅಧ್ಯಕ್ಷ ಆರ್ ವಿ ದೇಶಪಾಂಡೆ, ಕಾರವಾರ ಶಾಸಕ ಸತೀಶ್ ಸೈಲ್, ಶಿರಸಿ – ಸಿದ್ದಾಪುರ ಶಾಸಕ ಭೀಮಣ್ಣ ನಾಯ್ಕ, ಗುಬ್ಬಿ ಶಾಸಕ ಶ್ರೀನಿವಾಸ್ ,ಹಾನಗಲ್ ಶಾಸಕ ಶ್ರೀನಿವಾಸ್ ಮಾನೆ, ಮೀನುಗಾರಿಕೆ ಮತ್ತು ಬಂದರು ಖಾತೆ ಸಚಿವ ಮoಕಾಳ್ ವೈದ್ಯ, ಸಚಿವ ಕೃಷ್ಣ ಭೈರೇಗೌಡ, ಉತ್ತರ ಕನ್ನಡ ಕಾಂಗ್ರೆಸ್ ಉಸ್ತುವಾರಿ ಐವಾನ್ ಡಿಸೋಜಾ, ಅರಣ್ಯ ಹಕ್ಕು ಹೋರಾಟಗಾರ ರವೀಂದ್ರ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜ್ಞಾ ಗುಡಿಯಾಳ, ಕಾಂಗ್ರೆಸ್ ಮುಖಂಡ ಕೃಷ್ಣ ಹಿರೇಹಳ್ಳಿ, ಗೌಸ್ ಮಕಾಂದಾರ್, ರಜಾ ಖಾನ್ ಪಠಾಣ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸೇರಿದ್ದ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ವಿಷ್ಣುವರ್ಧನ್ ಅವರ ನೇತೃತ್ವದಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು. ಮುಖ್ಯಮಂತ್ರಿಗಳ ಹೆಲಿ ಕಾಪ್ಟರ್ ಲ್ಯಾಂಡ್ ಆಗುವ ವೇಳೆಯಿಂದ ಟೇಕ್ ಆಫ್ ಆಗುವವರೆಗೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಪೊಲೀಸ್ ಇಲಾಖೆ ಅಧಿಕಾರಿಗಳು ತೆಗೆದುಕೊಂಡಿದ್ದರು.