ಬೀದರ ನಗರದ ಗವಾನ್ ಚೌಕ್ ನಲ್ಲಿ ಬೀದರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಾಗರ ಈಶ್ವರ ಖಂಡ್ರೆ ಅವರ ಪರವಾಗಿ ಪ್ರಚಾರ ನಡೆಸಿ ಮತಯಾಚಿಸಿದರು.ಈ ಸಂದರ್ಭದಲ್ಲಿ ಬೀದರ್ ಉಸ್ತುವಾರಿ ಸಚಿವರಾದ ಈಶ್ವರ್ ಖಂಡ್ರೆ ರವರು ಮಾತನಾಡಿ,ಬದಲಾವಣೆ ಬಯಸುತ್ತಿರುವ ಬೀದರ್ ಮಹಾಜನತೆಗೆ ಭರವಸೆಯೇ ಕಾಂಗ್ರೆಸ್, ಅಭಿವೃದ್ಧಿಗಾಗಿ ಹಸ್ತದ ಗುರುತಿಗೆ ಮತ ಚಲಾಯಿಸಿ ಎಂದು ಮನವಿ ಮಾಡಿದರು ಹಾಗೂ ಜನರ ಒಲವು ಜನಪರ ಪಕ್ಷವಾದ ಕಾಂಗ್ರೆಸ್ ಪರವಾಗಿದೆ ಜನರ ಶ್ರೇಯೋಭಿವೃದ್ಧಿಗಾಗಿ ಕಾಂಗ್ರೆಸ್ ಜನಪರ ಯೋಜನೆಗಳನ್ನು ಘೋಷಿಸಿಕೊಂಡು ಬಂದಿದೆ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬಂದಿದೆ ರಾಜ್ಯದಲ್ಲಿ ಐದು ಗ್ಯಾರಂಟಿಗಳನ್ನು ಜಾರಿಗೆ ತಂದು ನುಡಿದಂತೆ ನಡೆದುಕೊಂಡಿದೆ ಬಿಜೆಪಿ ಹತ್ತು ವರ್ಷದಿಂದ ಸುಳ್ಳು ಹೇಳಿಕೊಂಡೇ ಆಡಳಿತ ನಡೆಸಿದೆ ಹೊರತು ಅಭಿವೃದ್ಧಿ ಮಾಡಿಲ್ಲ.ಅಚ್ಚೇ ದಿನ್ ಬರುತ್ತೆ ಅಂದ್ರು ಎಲ್ಲಿ ಬಂತು ಅಚ್ಚೇ ದಿನ್ ? ಬಡವರ ಜೇಬಿಗೆ ಕತ್ತರಿ ಹಾಕುತ್ತಲೇ ಬಂದಿದೆ.ನಮ್ಮ ಸರ್ಕಾರ ಜನರ ಶ್ರೇಯೋಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸಿದೆ ಐದು ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿ ಜನತೆ ನೆಮ್ಮದಿ ಜೀವನ ನಡೆಸುವಂತೆ ಮಾಡಿದೆ.ಮೇ 7ರಂದು ನಡೆಯಲಿರುವ ಬೀದರ ಲೋಕಸಭಾ ಚುನಾವಣೆಯಲ್ಲಿ ಸಾಗರ್ ಖಂಡ್ರೆ ಅವರ ಕ್ರಮ ಸಂಖ್ಯೆ 3, ಹಸ್ತದ ಗುರುತಿಗೆ ಮತ ಚಲಾಯಿಸಿ,ಅವರನ್ನು ಗೆಲ್ಲಿಸಿ ಬೀದರ್ ಅನ್ನು ಪ್ರಗತಿಯತ್ತ ಕೊಂಡೊಯ್ಯಿರಿ ಎಂದು ಮಾತನಾಡಿದ್ದರೆ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಪಂಚ ನ್ಯಾಯಗಳನ್ನು ಜಾರಿಗೆ ತರಲಿದೆ ಎಂದು ಸಭೆಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಅರವಿಂದ ಅರಳಿ,ಸಚಿವರಾದ ರಹೀಮ್ ಖಾನ್, ಫಾತಿಮಾ ಜಿ,ಬಲ್ಜಿತ ಸಿಂಗ್,ಖಾದ್ರಿ ಸಾಬ್,ಅಮೃತ್ ಚಿಮಕೋಡ,ಸಂಜಯ್ ಜಾಗೀರ್ದಾರ್ ನಗರ ಸಭೆ ಪಾಲಿಕೆಯ ಸದಸ್ಯರಾದ ಯೂಸುಫ್ ಹಾಗೂ ಕಾಲೋನಿಯ ಮುಖಂಡರು ಉಪಸ್ಥಿತರಿದ್ದರು.
ವರದಿ:ರೋಹನ್ ವಾಘಮಾರೆ