ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕ ವಿಶ್ವಕರ್ಮ ಮುಖಂಡರು ಹಾಗೂ ರಾಯಚೂರು ಜಿಲ್ಲಾ ವಿಶ್ವಕರ್ಮ ಮುಖಂಡರು ಶ್ರೀ ಕ್ಷೇತ್ರ ಸಿರಸಂಗಿ ಕಾಳಿಕಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ಕೃಪೆಗೆ ಪಾತ್ರರಾದರು.ಇದೇ ಸಂದರ್ಭದಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭೆಯ ರಾಯಚೂರು ಜಿಲ್ಲಾದ್ಯಕ್ಷರಾದ ಶ್ರೀ ಬ್ರಹ್ಮ ಗಣೇಶ ವಕೀಲರ ಪುತ್ರರ ಉಪನಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ನೂತನ ಉಪನಯನವಾದ ಮಕ್ಕಳಿಗೆ ಸಮಾಜದ ಬಂಧುಗಳು ಅಕ್ಷತೆ ಹಾಕಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭೆಯ ರಾಜ್ಯ ಕಾರ್ಯದರ್ಶಿ ಸೋಮಣ್ಣ ಸುಕಲಪೇಟೆ,ಜಿಲ್ಲಾದ್ಯಕ್ಷರಾದ ಬ್ರಹ್ಮಗಣೇಶ ವಕೀಲರು,ಚಿನ್ನಬೆಳ್ಳಿ ಕೆಲಸಗಾರರ (ಸ್ವರ್ಣಕಾರ) ಸಂಘದ ಜಿಲ್ಲಾದ್ಯಕ್ಷರಾದ ವೆಂಕಟೇಶ ಆನ್ವರಿ,ರಾಮು ಗಾಣದಾಳ,ಸಿಂಧನೂರು ತಾಲೂಕ ಅದ್ಯಕ್ಷ ಮೌನೇಶ ತಿಡಿಗೋಳ,ಕಾರ್ಯದರ್ಶಿ ಧರ್ಮಣ್ಣ ಗುಂಜಳ್ಳಿ,ಸಂಘಟನೆ ಕಾರ್ಯದರ್ಶಿ ಚನ್ನಪ್ಪ ಕೆಹೊಸಹಳ್ಳಿ,ಶ್ರೀ ಕಾಳಿಕಾದೇವಿ ಟ್ರಸ್ಟ್ ಅದ್ಯಕ್ಷರಾದ ಮಂಜುನಾಥ ಬಡಿಗೇರ, ಮಲ್ಲೇಶ,ಶಿವಪುತ್ರಪ್ಪ,ಡಾ.ವೀರೇಶ ತಿಡಿಗೋಳ ಇನ್ನೂ ಹಲವಾರು ಸಮಾಜದ ಹಿರಿಯರು ಯುವಕರು ಮಹಿಳೆಯರು ಭಾಗವಹಿಸಿ ಯಶಸ್ವಿಗೊಳಿಸಿದರು.
