ರಾಯಚೂರು ಜಿಲ್ಲೆಯ ಸಿಂಧನೂರು PWD ಕ್ಯಾಂಪ್ KEB ಮುಂಭಾಗದ ಮುಖ್ಯ ರಸ್ತೆಯಲ್ಲಿ ಜಿಂಕೆಯೊಂದು ರಸ್ತೆ ದಾಟುವಾಗ ಬೈಕ್ ಡಿಕ್ಕಿ ಹೊಡೆದ ಕಾರಣ ಅದಕ್ಕೆ ಗಾಯಗಳಾಗಿದ್ದನ್ನು ಕಂಡ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಫೌಂಡೇಶನ್ ಸಂಸ್ಥಾಪಕರಾದ ಅಮರೇಗೌಡ ಮಲ್ಲಾಪೂರ ಅವರ ನೇತೃತ್ವದಲ್ಲಿ ತಂಡದ ಸದಸ್ಯರು ಸಿಂಧನೂರಿನ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಅದನ್ನು ಕರೆದುಕೊಂಡು ಹೋಗಿ ಜೋಳದರಾಶಿ ಆಂಜನೇಯ ಸ್ವಾಮಿ ದೇವಸ್ಥಾನ ಹಿಂಬಾಗದಲ್ಲಿರುವಂತಹ ಹಳ್ಳದ ದಡದಲ್ಲಿ ಸುರಕ್ಷಿತವಾಗಿ ಬಿಟ್ಟರು.ಬಿಸಿಲಿನ ತಾಪಮಾನಕ್ಕೆ ಕಾಡು ಪ್ರಾಣಿಗಳು ನಗರ ಪ್ರದೇಶಕ್ಕೆ ನೀರಿನ ದಾಹ ತೀರಿಸಿಕೊಳ್ಳಲು ಬರುತ್ತಿವೆ.ಪ್ರಾಣಿ ಪಕ್ಷಿಗಳ ಸಂಕುಲ ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ,ಬಹಳಷ್ಟು ಸಾರ್ವಜನಿಕರು ವನಸಿರಿ ತಂಡಕ್ಕೆ ಕರೆ ಮಾಡಿದ್ದಕ್ಕಾಗಿ ಜಿಂಕೆಯೊಂದನ್ನು ರಕ್ಷಣೆ ಮಾಡಲಾಯಿತು. ಪರಿಸರದೊಂದಿಗೆ ವಾಸವಾಗಿರುವ ಪ್ರಾಣಿ ಪಕ್ಷಿಗಳನ್ನು ಕಾಪಾಡುವುದೇ ವನಸಿರಿ ತಂಡದ ಗುರಿಯಾಗಿದೆ ಎಂದು ಅಮರೇಗೌಡ ಮಲ್ಲಾಪೂರ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತರು ಹಾಗೂ ಇವನ ಫೌಂಡೇಶನ್ ಸಂಸ್ಥಾಪಕರಾದ ಅಮರೇಗೌಡ ಮಲ್ಲಾಪೂರ, ಗಂಗಾಧರ ಕಾಂಗ್ರೆಸ್ ಯುವ ಮುಖಂಡರು,ಸಂಚಾರಿ ಪೋಲಿಸ್ ಇಲಾಖೆಯ ಅಧಿಕಾರಿಗಳು,ವನಸಿರಿ ಫೌಂಡೇಶನ್ ಸದಸ್ಯರಾದ ಮುದಿಯಪ್ಪ ಹೊಸಳ್ಳಿ ಕ್ಯಾಂಪ್,ಪಶು ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಗಳು,ಯುವ ಮಿತ್ರರಾದ ರಾಜು ಮತ್ತು ಕೈಪ್ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.