ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಚವಡಿಹಾಳ ಗ್ರಾಮದ ಗುರುಬಸವ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ 2023-24 ನೇ ಸಾಲಿನಲ್ಲಿ ಒಟ್ಟು 36 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದರು.ಇದರಲ್ಲಿ 14 ವಿದ್ಯಾರ್ಥಿಗಳು ಗಣಿತ ವಿಷಯದಲ್ಲಿ ನೂರಕ್ಕೆ ನೂರು ಅಂಕಗಳನ್ನು ಗಳಿಸಿಕೊಂಡು ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ.
ಆ ವಿದ್ಯಾರ್ಥಿಗಳ ಹೆಸರು ಕ್ರಮವಾಗಿ ಇಂತಿವೆ. ಯಮನೂರ ರೊಳ್ಳಿ,ಶ್ರೇಯಾ ಅ ನಾಗಣಿ,ಸಿಂಚನಾ ಸಾ ಮಂಗೊಂಡ,ವಿನಾಯಕ ರಾ ನಾವಿ,ಸುಶ್ಮಿತಾ ಪಾ ಪಾಂಡ್ರೆ,ಸ್ನೇಹಾ ಶಿ ಪ್ರಚಂಡಿ,ವರ್ಷಾ ಸಂ ತಳವಾರ, ಸುಭಾಸಗೌಡ ದಾ ಪಾಟೀಲ,ಶ್ವೇತಾ ಸಿ ಚಿಕ್ಕಮಣೂರ, ಸುಮಿತ ಗು ಪವಾರ,ಸೃಷ್ಟಿ ನಿಂ ದೊಡ್ಡಿ,ಶ್ರವಣ ಬಿರಾದಾರ,ಸಮರ್ಥ ಕ ಮೇತ್ರಿ,ಶರತ ವಾಲಿಕಾರ ಈ ಎಲ್ಲಾ ವಿದ್ಯಾರ್ಥಿಗಳು ಕಬ್ಬಿಣದ ಕಡಲೆ ಎನ್ನುತ್ತಿರುವ ಗಣಿತವನ್ನು ಸರಾಗವಾಗಿ ಅರೆದು ಕುಡಿದಿದ್ದಾರೆ.ಈ ವಿದ್ಯಾರ್ಥಿಗಳಿಗೆ ಹಾಗೂ ತರಬೇತಿಯನ್ನು ನೀಡಿದ ಎಸ್ ಎಮ್ ಬಿರಾದಾರ ಶಿಕ್ಷಕರು ಇವರಿಗೆ ಸಂಸ್ಥೆಯ ಅಧ್ಯಕ್ಷರಾದ ಎಂ ಬಿ ಬಿರಾದಾರ,ಉಪಾಧ್ಯಕ್ಷರಾದ ಅಭಿಮನ್ಯು ಎಂ ಬಿರಾದಾರ,ಆಡಳಿತಾಧಿಕಾರಿಗಳಾದ ಎ ಎಸ್ ಪಾಟೀಲ,ಪ್ರಾಂಶುಪಾಲರಾದ ಎಸ್ ಆರ್ ರಾಠೋಡ,ಮುಖ್ಯ ಗುರುಗಳಾದ ಬಿ ಎಸ್ ಖ್ಯಾದಿ, ಹಾಗೂ ಸಮಸ್ತ ಗುರುಬಸವ ಶಿಕ್ಷಣ ಸಂಸ್ಥೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯು ವಿದ್ಯಾರ್ಥಿಗಳಿಗೆ ಮತ್ತು ತರಬೇತಿಯನ್ನು ನೀಡಿದ ಶಿಕ್ಷಕರಿಗೆ ಅಭಿನಂದನೆಗಳು ಸಲ್ಲಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.