ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಅಗರಖೇಡ ಗ್ರಾಮದ ಶ್ರೀ ಶಂಕರಲಿಂಗ ಪ್ರೌಢಶಾಲೆಯಲ್ಲಿ 2023-2024 ನೇ ಸಾಲಿನಲ್ಲಿ ಒಟ್ಟು 76 ವಿದ್ಯಾರ್ಥಿಗಳು ಅಧ್ಯಯನ ಮಾಡಿದ್ದು,ಅದರಲ್ಲಿ 60 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶಾಲೆಗೆ ಕೀರ್ತಿ ತಂದಿದ್ದಾರೆ.
ಅದರಲ್ಲಿ
1) ಸೆರಾಮಿಯಾ ಕೊರಬು ಪ್ರಥಮ ಸ್ಥಾನ 561(90.೦೦%)
2) ಸೋಮಶೇಖರ ಎಮ್ಮಿ ದ್ವಿತೀಯ ಸ್ಥಾನ 540(87.00%)
3) ಸುನಿಲ್ ಮೀನಗಾರ್ ತೃತೀಯ ಸ್ಥಾನ 502(81.00%)
4) ಶಮೀನಾ ಪಟೇಲ್ 491(79.00%)
5) ರೇಣುಕಾ ಖಂಡೇಕಾರ್ 487(78.00%)
6) ಸ್ನೇಹಾ ಲಿಂಬಿತೋಟ್ 481(77.00%)
7) ಮಹೇಶ್ ಬಡಿಗೇರ್475(76.00%)
8) ಲಕ್ಷ್ಮಿ ಕಂಬಾರ್472(76.00%)
ವಿದ್ಯಾರ್ಥಿಗಳು ಒಳ್ಳೆಯ ಸಾಧನೆಯನ್ನು ಮಾಡಿದ್ದಾರೆ.
ಅಲ್ಲದೆ ಪ್ರೌಢಶಾಲೆಯ ವಿದ್ಯಾರ್ಥಿನಿಯಾದ ಸೆರಾಮಿಯಾ ಕೊರಬು ಕನ್ನಡ ವಿಷಯದಲ್ಲಿ 125 ಕ್ಕೇ 125 ಅಂಕ ಪಡೆದು ಕನ್ನಡ ಶಿಕ್ಷಕರ ಕೀರ್ತಿ ಹೆಚ್ಚಿಸಿದ ಕನ್ನಡದ ಕುವರಿ ಸೆರಾಮಿಯಾ ಎಂದು ಕನ್ನಡ ಭಾಷಾ ಶಿಕ್ಷಕರಾದ ಶ್ರೀ ಬಸವರಾಜ್ ಹೆಗ್ಗೊಂಡೇ ಇವರು ಸಂತಸ ವ್ಯಕ್ತಪಡಿಸಿದರು.
ಶ್ರೀ ಶಂಕರ ಲಿಂಗ ಪ್ರೌಢಶಾಲೆಯಲ್ಲಿ ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳಿಗೆ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ ವಿದ್ಯಾ ಸಂಸ್ಥೆಯ ಅಧ್ಯಕ್ಷರು, ಉಪಾಧ್ಯಕ್ಷರು,ಕಾರ್ಯದರ್ಶಿಗಳು ಹಾಗೂ ಆಡಳಿತ ಮಂಡಳಿಯ ಸರ್ವ ನಿರ್ದೇಶಕರು ಮತ್ತು ಗ್ರಾಮಸ್ಥರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.
ವರದಿ ಮನೋಜ್ ನಿಂಬಾಳ