ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕ ಆಡಳಿತದಿಂದ ಮಹಾ ಮಾನವ,ವಿಶ್ವಗುರು ಬಸವಣ್ಣನವರ ಹಾಗೂ ಮಹಾಸಾದ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರ ಜಯಂತಿಯನ್ನು ತಾಲೂಕಾ ಆಡಳಿತ ಹಾಗೂ ತಾಲೂಕಾ ವೀರಶೈವ ಸಮಾಜದ ವತಿಯಿಂದ ತಹಸೀಲ್ದಾರ್ ಕಾರ್ಯಲಯದಲ್ಲಿ ಚುನಾವಣೆ ನೀತಿ ಸಂಹಿತೆ ಇರುವುದರಿಂದ ಸರಳವಾಗಿ ಆಚರಣೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ತಾಲೂಕಾ ದಂಡಾಧಿಕಾರಿಗಳಾದ ಚನ್ನಮಲ್ಲಪ್ಪ ಗಂಟಿ,ಕ್ಷೇತ್ರ ಸಮನ್ವಯ ಅಧಿಕಾರಿ ಶಿವರಾಜ ಪೂಜಾರಿ,ತಾಲೂಕು ವೈದ್ಯಾಧಿಕಾರಿ ಡಾ ಬಂದೇಶ,ವೀರಶೈವ ಸಮಾಜ ಅಧ್ಯಕ್ಷರಾದ ಡಾ.ಕಿರಣಕುಮಾರ ಖೇಣೆದ,ಬಸವಕೇಂದ್ರದ ಅಧ್ಯಕ್ಷರಾದ ಸುಭಾಸ್ ಪಾಟೀಲ್,ವೀರಶೈವ ಸಮಾಜದ ಮುಖಂಡರಾದ ಮಲ್ಲನಗೌಡ ಪ್ರಕಾಶ ಪಾಟೀಲ್ ಗಂಗನಗೌಡ ಸುರೇಶ ಅಂಗಡಿ ವೆಂಕಟರಾಯಗೌಡ ಇತರರು ಭಾಗವಹಿಸಿದ್ದರು.
ವರದಿ:ಶರಣು ಹುಣಸಗಿ