ಕೊಡಗು ಕೃಷಿ ಇಲಾಖೆ ಮತ್ತು ನಬಾರ್ಡ್ ಸಂಸ್ಥೆ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕೃಷಿಕರಿಗೆ ಇತ್ತೀಚೆಗೆ ಉಚಿತವಾಗಿ ವಿತರಿಸಿರುವ ಎರೆಹುಳು ಗೊಬ್ಬರ ಕಳಪೆಯಾಗಿದೆ ಎಂದು ಬಸವನತ್ತೂರು ರೈತರುಗಳಾದ ವರದರಾಜ್ ದಾಸ್ ಹಾಗೂ ಚಿಕ್ಕತೂರು ಗ್ರಾಮದ ರೈತ ಸುರೇಶ್ ಕುಮಾರ್ ದೂರಿದ್ದಾರೆ.
ಕೊಡಗು ಜಿಲ್ಲಾ ಕೃಷಿ ಇಲಾಖೆ ಮತ್ತು ನಬಾರ್ಡ್ ಸಂಸ್ಥೆ ವತಿಯಿಂದ ಜಂಟಿಯಾಗಿ ಕೃಷಿಕರಿಗೆ 18 ಬಗೆಯ ಹಣ್ಣಿನ ಗಿಡಗಳು ಹಾಗೂ ಎರಡು ಚೀಲ ಎರೆಹುಳು ಗೊಬ್ಬರ ನೀಡಲಾಗಿತ್ತು.
ಇದೀಗ ಕುಶಾಲನಗರ,ಕೂಡಿಗೆ,ಬಸವನತೂರು,ಚಿಕ್ಕತೂರು, ದೊಡ್ಡತ್ತೂರು,ಮದಲಾಪುರ,ಸೀಗೆಹೊಸೂರು,ಕಣಿವೆ ಭುವನಗಿರಿ ವ್ಯಾಪ್ತಿಯ ರೈತರುಗಳಿಗೆ ನಬಾರ್ಡ್ ಸಂಸ್ಥೆಯಿಂದ ಕಳಪೆ ಗುಣಮಟ್ಟದ ಎರೆಹುಳು ಗೊಬ್ಬರ ಎಂದು ಕಳಪೆ ಗೊಬ್ಬರ ಕೊಟ್ಟಿದ್ದು ರೈತರುಗಳು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ ಕಳೆದ ಒಂದು ವಾರದಿಂದ ಎರಡು ಬಾರಿ ಬಿದ್ದ ಮಳೆ ಬಿದ್ದುದರಿಂದ ಹಣ್ಣಿನ ಗಿಡಗಳನ್ನು ನೆಡಲು ಸಿದ್ದತೆ ಮಾಡಿಕೊಂಡು ಎರೆಹುಳು ಗೊಬ್ಬರದ ಚೀಲಗಳನ್ನು ನೋಡಿದಾಗ ಅದರಲ್ಲಿ ಜೇಡಿ ಮಣ್ಣು,ಬಳೆ ಹಾಗೂ ಕಲ್ಲಿನ ಚೂರುಗಳು ದೊರಕಿವೆ.
ಇದು ಪರಿಶಿಷ್ಟ ಜಾತಿಯ ಕೃಷಿಕರಿಗೆ ಮಾಡುತ್ತಿರುವ ದ್ರೋಹವಾಗಿದೆ ಎಂದು ಆಕ್ರೋಷ ವ್ಯಕ್ತಪಡಿಸಿರುವ ಕೃಷಿಕ ವರದರಾಜದಾಸ್,ಸುರೇಶ್ ಕುಮಾರ್ ಕೂಡಲೇ ನಮಗೆ ಕೊಟ್ಟಿರುವ ನಬಾರ್ಡ್ ಸಂಸ್ಥೆಯಿಂದ ಬದಲೀ ಗೊಬ್ಬರ ವಿತರಿಸಬೇಕೆಂದು ಒತ್ತಾಯಿಸಿದೆ.
ವರದಿ ಉಸ್ಮಾನ ಬಾಗವಾನ